ವಿಷಯಕ್ಕೆ ಹೋಗು

ಪುಟ:ಚೆಲುವು.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚೆಲುವು

ನಮ್ದೇವ್ರು ಮಾರ್ಯಮ್ಮ ಕುರಿಕೋಣ ತಿಂಬೋಳು ;
ಬಾಬೈಗೆ ನಾನು ನಡಕೊಂಡ್ರೆ
ಒಂದೆ ಮಾತಂತಾಳೆ, ತಾ ನಿನ್ನ ತಲಕಾಯಿ
ತಾ ಬೋಳಿಮಗನೆ ಅಂತಾಳೆ.

ಹಂಗಾದ್ರೆ ನಿನ್ನ ದೇವ್ರು ಬ್ರಾಮ್ರ ದೇವರಕಿಂತ
ದೊಡ್ಡ ದೇವ್ರೆ? ನಿನ್ನ ಮಾರ್ಯಮ್ಮ
ರಂಗಪ್ಪಗಿಂತ ದೊಡ್ಡೋಳೆ ಎಂದು ನವಾಬ್ರು
ಗಡ್ಡ ನೀವ್ಕೋಳ್ತ ಕೇಳಿದರು.


ಸುಲ್ತಾನ್ರೆ ಕೇಳಿರಿ, ಪಟ್ಟಣದ ಆರಸರು
ನಿಮಗೆ ದೊಡ್ಡೋರು ಅಂತಾರೆ;
ಬಲ್ತು ಯಾರಾದರೂ ಮಾತಾಡಿದರೆ ನಗುತ
ಸುಮಕೆ ಇರುತಾರೆ ಅಂತಾರೆ.


ನಿಮ್ಮ ಹತ್ತರ ನಾನು ಬಲ್ತು ಮಾತಾಡಿದರೆ
ನನ್ನ ಬಿಟ್ಟೀರ ನನ್ನೊಡೆಯ ?
ಬಿಮ್ಮಗೆ ಬಿಗಿಶೀರಿ, ಗಲ್ತಾಗ್ಳು ಕೊಡಿಶೀರಿ,
ಚೆನ್ನಾಗಿ ಬುದ್ಧಿ ಕಲಿಶೀರಿ.

೩೯