ಪುಟ:ಜ್ವರ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಳನ್ನು ಸುಟ್ಟು ನೀರಲ್ಲಿ ಮುಣುಗಿಸಿ ಆರಿಸಿ, ಆ ನೀರನ್ನು ಸೋಸಿ ಕುಡಿಸ ತಕ್ಕದ್ದು. (೨) ಅಮೃತಬಳ್ಳಿಯ ಕವಾಯು ಇಲ್ಲವೆ ರಸದಲ್ಲಿ ಜೇನುತುಪ್ಪ ಹಾಕಿ ಕಂಡಬೇಕು. () ಚಂದನ ಗಂಧದಲ್ಲಿ ಸಕ್ಕರೆ ಹಾಕಿ ಕುಡಿಸಬೇಕು, (೪) ಭತ್ತದ ಅರಳು, ಪತ್ರಜ (ಪತಂಗದ ಚೆಕ್ಕೆ) ಬಾರೀಬೀಜ, ಬೇಕಿನಗಡ್ಡೆ, ಚಂದನ, ಪರಅರಿಷಿಣ, ಇವುಗಳ ಸಮಭಾಗ ಚೂರ್ಣದಲ್ಲಿ ಇಲ್ಲವೆ ಕಷಾಯದಲ್ಲಿ ಬೇನು ತುಪ್ಪ ಹಾಕಿ ಕೊಡಬೇಕು. (೫) ಅನನಸ ತಿನಬೇಕು. ಅಂದರೆ ವಾಂತಿ ನಿಲ್ಲು ಇದೆ; ಮತ್ತು ಇದು ಪಾಶಕವಿರುವದರಿಂದ ಜ್ವರರೊಅಗಿಗೆ ಹಿತಕರವಾದದ್ದಾಗಿದೆ. ಇದರಲ್ಲಿ ಮಾತ್ರವಾಗುವ, ಬೆವರು ಬರುವ ಮತ್ತು ದಾಹ ಶಮನವಾಗುವ ಗುಣಗಳಿರುತ್ತವೆ. ೫ ನೀರಡಿಕೆಗಾಗಿ:-(೧) ಬಾಳದಬೇರು, ಕಲ್ಲುಸಬ್ಬಸಿಗಿ, ಜೇಕಿನಗಡ್ಡೆ, ಶುಂಠಿ, ರಕ್ತಚಂದನ, ಆಲದ ಮುಗುಳು ಇವುಗಳನ್ನು ಸಮಭಾಗ ತಕೊಂಡು ಕಷಾಯ ಮಾಡಿಟ್ಟು ಆnಾಗ್ಗೆ ತುಸ ತುಸ ಕೊಡಬೇಕು. (೨) ವಾಯು ವಾಗುವ ಲಕ್ಷಣವಿರದಿದ್ದರೆ ಭರ್ದದ ತುಣಕನ್ನು ತಿನ್ನಿಸಬೇಕು. (೩) ಒಣಗಿದ ಕರೀ ಹಣ್ಣು ತಿನಿಸಬೇಕು. (೪) ದೀಪದ್ರಾಕ್ಷಿ, ಜೇಷ್ಠಮಧು, ಕಲ್ಲು ಸಕ್ಕರೆಗಳನ್ನು ಕುಟ್ಟಿ ಗುಳಿಗೆ ಮಾಡಿ ಬಾಯೊಳಗೆ ಹಿಡಿಯತಕ್ಕದ್ದು. (೫) ತೆಂಗಿನ ನೀರು ಕುಡಿಸತಕ್ಕದ್ದು. ಇದರಿಂದ ನೀರಡಿಕೆಯ ಶಮನವಾಗುವದಲ್ಲದೆ, ಅನ್ನದ ಅಂಶವೂ ಹೊಟ್ಟೆಯೊಳಗೆ ಹೋದಂತಾಗುತ್ತದೆ. ೬ ಅತಿಸಾರಕ್ಕೆ:-(೧) ಅಗಳುಶು೦ಠಿ, ಅಮೃತಬಳ್ಳಿ, ಕಲ್ಲುಸಬ್ಬಸಿಗೆ, ಜೇಕಿನಗಡ್ಡೆ, ಶುಂಠಿ, ನೆಲಬೇವು, ಕಡುಮುಕುಕನ ಬೀಜ ಇವಗಳ ಕಷಾಯ ದಿಂದ ಜ್ವರಾ ೨ಸಾರವು ನಿಶ್ಚಯಪೂರ್ವಕವಾಗಿ ನಿಲ್ಲುತ್ತದೆ. (೨) ಆಮ ರಕ್ತ ಅತಿಸಾರಕ್ಕ:-ಪಟಕ ೨ ಮಾಸಿ, ಯಾಲಕ್ಕಿಕಾಳು ಅರ್ಧ ಕೊಲಿ, ಬಾಳಂತಿ ಸಣ್ಣ ಸಿಗೆ ೧ ತಲಿ, ಜಾಜಿಕಾಯಿ ೧ ಇದನ್ನು ತುಪ್ಪದ ದೀಪದ ಮೇಲೆ ಸುಟ್ಟು ತಕೊಂಡು ಎಲ್ಲವುಗಳ ಏಕತ್ರ ಚಂರ್ಣಮಾಡಿ ೧ ಇಲ್ಲವೆ ೨ ಮಾಸಿ ಪುಡಿಯನ್ನು ತುಪ್ಪದಲ್ಲಿ, ಹಾಲಲ್ಲಿ ಇಲ್ಲವೆ ನೀರಲ್ಲಿ ಕೊಡಬೇಕು. (೩) ಕೆಂಪುಕಂಕಳ, ಯಾಲಕ್ಕಿ, ದಾಳಿಂಬರಬೀಜ, ಹಿಪ್ಪಲಿ, ಮೆಣಸು, ಸಬ್ಬಸಿಗಿ, ಚಾಜೀಕಾಯಿ, ಸನಭಾಗ ತಕೊ೦ಡು ಕೂರಿಸಿ ಚೂರ್ಣ ಮಾಡಿ ಸಕ್ಕರೆ ಬೆರೆಸಿ ಆಗಾಗ್ಗೆ ಅರ್ಧ ತಲಿ ಕೆಡಬೇಕು. (೪) ಕಂಡುಮುರುಕನ ತಂಗಟೆ, ಕಲ್ಲುಸಬ್ಬಸಿಗಿ, ನೆಲಬೇವು, ಕಟುಕರಣಿ ಇವುಗಳ ಕಷಾಯದಲ್ಲಿ ಬೆಲ್ಲ ಹಾಕಿ ಕೊಟ್ಟರೆ ಅತಿ ಸಾರ ಮತ್ತು ಜ್ವರಗಳ ನಾಶವಾಗುತ್ತದೆ. (೫) ಅರ್ಧತಲಿ ಇಸಮಗ ಲನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ, ಬೆಳಿಗ್ಗೆ ಸಕ್ಕರೆ ಹಾಕಿ ತಿನ್ನಬೇಕ ; ಇಲ್ಲವೆ