ಜಯ ಕೈಟಭಾರಿ ಜಯಜಯ ಕೋಮಲಾಂಗ ಜಯ |
(ಜಯ ಭಕ್ತ ಜನಸಾಧ್ಯ) ಜಯ ಮುನಿಹೃದಯಮಧ್ಯ |
ಜಯ ಶರಧಿಗಂಭೀರ ಜಯ ಕಾಲಕಾಲ ಜಯಜಯ ನಮೋ ನಮ
13.
ನಿನ್ನ ನಂಬಿದ ಶರಣರಂ ಕಾವ ಬಿರುದುಳ್ಳ |
ಚೆನ್ನಿಗನೆ ನೀನೆಂದು ಏಕೋದೃಢದಿ ನಂಬಿ |
ನನ್ನಿಯಿಂ ಬಾಲನಾಂ ಭಜಿಸೆ ಮೆಯ್ದೋರದೈ ನಿನ್ನನಿಂ ಪೋಲ್ಯರುಂಟೆ ||
ಎನ್ನುಭಯಕುಲದವರು ಸಂದರಕ್ಷಯಗತಿಗೆ |
ಇನ್ನು ನಾಂ ಭವದ ಕಿಲ್ಬಿಷಕಂಜೆನೆನುತಾಕೃ |
ಪಾರ್ಣವನ ಚರಣಸರಸಿಜದಮೇಲಡೆಗೆಡೆಯೆ ಕರುಣಾರ್ಣವಂ ನುಡಿದನು ||
14.
ಮೆಚ್ಚಿದೆನು ಮಗನೆ ನೀ ಮಾಡಿದ ಸುಸಂಸ್ತುತಿಗೆ |
ಸಚ್ಚರಿತ ನಿನಗೆಂತು ಪಸುಳೆ ನಿನಗೀಪರಿಯ |
ನಿಚ್ಚಟದ ಭಕ್ತಿ ತೋರಿತು ನಿನ್ನುವಂ ಪೋಲ್ಯರೀಜಗದೊಳಾರಿರ್ಪರು ǁ
ಮುಚ್ಚು ಮಕ್ಕಿಯೇಕಿನ್ನು ನಿನ್ನ ಚಿತ್ತದೊಳಗು |
ಳ್ಳಿಚ್ಚೆಯಂ ಪಾಲಿಸುವೆ ಬೇಡು ವರವನೆನಲ್ಕೆ |
ಯಚ್ಚುತನ ಪದಕೆರಗಿ ತನ್ನ ಮನದಂದಮಂ ಪೊಡೆಮಟ್ಟು ಬಿನ್ನೈ ಸಿದಂ ||
15.
ಆಸೆ ಬೇರೆಲ್ಲೆನಗೆ ನಿನ್ನ ಪದಪಂಕಜದ |
ದಾಸ ದಾಸಾನುದಾಸರ ಸಂಗವದು೦ದೆ |
ಲೇಸೆನಿಪ ಭಕ್ತಿ ತವಸನ್ನಿಧಿಗೆ ಬರ್ಪವೋಲ್ ಕರುಣಿಸಿಂದೆನಗೆನಲ್ಕೆ ‖
ಬೇಸರದೆ ಕೇಳ್ಮಗನೆ ಕೆಲವುದಿನ ರಾಜ್ಯಮಂ |
ಲೇಸಾಗಿ ಪಾಲಿಸುವೆ ಮತ್ತೆ ತಾರಾಗ್ರಹ |
ಕ್ಕಾಸೂರ್ಯಚಂದ್ರ ಮುಖ್ಯರ್ಗೆಲ್ಲ ನೀ ಮುಖ್ಯಪದವನೆಯ್ದುವೆ