ಪುಟ:ನನ್ನ ಸಂಸಾರ.djvu/೧೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


 ಮಧುಸೂದನ 49

"ಈಗ ಎರಡು ಮೂರು ದಿವಸಗಳಹಿಂದೆ ನಡೆದ ವಿಷಯಗಳನ್ನು ತಿಳಿಸುತ್ತೇನೆ. ಈ ಗುಂಪಿನವರಿಗೆ ತಮ್ಮ ಮೇಲೆ ಪೊಲೀಸಿನವರಿಗೆ ಕಣ್ಣಿದೆಯೆಂದು ತಿಳಿಯಬಂತು. ಆದ್ದರಿಂದ ಬೇಕಾದಷ್ಟು ಧನವನ್ನು ಸೇರಿಸಿಕೊಂಡು ಎಲ್ಲಾದರೂ ಬೇರೆಕಡೆಗೆ ಹೋಗಿ ಜೀವಿಸುತ್ತಿರಬೇಕೆಂಬಭಿಪ್ರಾಯದಿಂದ ವಿಶ್ವನಾಥನು ಹದಿನೆಂಟು ಜನಗಳೊಡನೆ ಸುರತ ಪುರಿಯ ಜಮೀನ್ದಾರನ ಮನೆಯನ್ನು ಹೊಕ್ಕು ಸೇವಕರನ್ನು ಕೊಂದು ಸುಮಾರು ಹತ್ತು ಲಕ್ಷ ರೂಪಾಯಿ ಬಾಳುವ ಪದಾರ್ಥಗಳನ್ನೂ ಹಣವನ್ನೂ ತಂದು ಅವರ ಗುಪ್ತ ಗೃಹದಲ್ಲಿ ಹೂತಿರುವರು (ಜನಗಳು ತಮ್ಮಲ್ಲೇ ಮಾತನಾಡ ತೊಡಗಲು, ಆಳುಗಳು ಸದ್ದು ಎಂದು ಕೂಗಿದರು.) ಇದಾದ ಮಾರನೇ ದಿವಸ ಪೊಲೀಸ್‌ ಇ೯ ಸ್ಪೆಕ್ಟರ್‌ ಮೋಸೆಸ್ ಎಂಬುವನಿಗೆ ವಿಶ್ವನಾಥನ ಮೇಲೆ ಸಂಶಯಹುಟ್ಟಿ ಆ ಮನೆಯನ್ನು ಹೊಕ್ಕು ಪರೀಕ್ಷೆ ಮಾಡಿದನು. ಆದರೆ ಅಲ್ಲಿ ಅವನಿಗೇನೂ ಸಂಶಯಾಸ್ಪದವಾದ ವಸ್ತುಗಳು ಸಿಕ್ಕಲಿಲ್ಲ. ಆದರೂ ಅವನಿಗೆ ಸಂಶಯವಿದ್ದದ್ದರಿಂದ ಹೊರಟುಹೋಗುವಾಗ ಅದೇ ವಿಷಯವನ್ನು ತಿಳಿಸಿ ಹೊರಟುಹೋದನು. ವಿಶ್ವನಾಥನು ಆ ಮೋಸೆಸ್ಸನಿಂದ ತನಗೆ ಕೆಡಕು ಬರುವುದೆಂದು ಯೋಚಿಸಿದನು. ಆದ್ದರಿಂದ ಅವನನ್ನು ಹಿಂಬಾಲಿಸಿ ಮೋಸೆಸ್ಸ ನನ್ನೂ ಅವನ ಸೇವಕನನ್ನೂ ರಿವಾಲ್ವರಿನ ಗುಂಡುಗಳಿಂದ ಕೊಂದು ಮನೆಯನ್ನು ಸೇರಿದನು. ಇವನು ಹೀಗೆ ಮಾಡುವನೆಂದು ತಿಳಿದಿದ್ದರೆ ಅದನ್ನು ತಡೆಯುತ್ತಿದ್ದೆನು. ಆದರೆ ಅವನು ಆ ವಿಷಯವನ್ನೇ ಹೇಳಲಿಲ್ಲವು. ಆದ್ದರಿಂದ ನಾನೂ ಸಂಶಯಪಡಲಿಲ್ಲ. ಇನ್ನು ತನ್ನ ಮಗಳ ಮದುವೆಯೊಂದೇ ಉಳಿದಿತ್ತು. ಅದರೊಳಗಾಗಿ ನಾನು ನನ್ನ ಸ್ನೇಹಿತರಾದ ಪೊಲೀಸ್ ಕಮೀಷನರ ಬಳಿಗೆ ಬಂದು ಅವರಿಗೆ ಸಕಲ ವಿಷಯಗಳನ್ನೂ ತಿಳಿಸಿದೆನು. ಮಾರನೇ ದಿವಸ ವಿವಾಹವು ನಡೆಯುವುದೆಂದೂ ಆಗ ಅಲ್ಲಿ ಎಲ್ಲಾ ಮೆಂಬರುಗಳೂ ಸೇರುವರೆಂದೂ ನನಗೆ ತಿಳಿದಿದ್ದದ್ದರಿಂದ ಮಾರನೇ ದಿವಸ ಅನೇಕ ಪೊಲೀಸಿನವರೊಡನೆ ಹೋಗಿ ಅವರನ್ನು ಸೆರೇಹಿಡಿಯಬೇಕೆಂದು ಹೇಳಿದೆನು. ಅದರಂತೆ ನಾವು ಸರಿಯಾದ ಸಮಯಕ್ಕೆ ಹೋಗಿ ಆ ವಿವಾಹವನ್ನು ನಿಲ್ಲಿಸಿ ಸತ್ತುಳಿದ ಈ ಏಳು ಮಂದಿಗಳನ್ನೂ ಹಿಡಿದುತಂದಿರುವೆವು. ಇವರನ್ನೆಲ್ಲಾ ಸುರತಪುರಿಯ ಕೊಲೇ ಮತ್ತು ಡಕಾಯಿತಿಗಳಲ್ಲೂ ಮತ್ತು ಹಿಂದಲ ಅನೇಕ ಕೆಟ್ಟ ಕೃತ್ಯಗಳಲ್ಲಿ ಭಾಗಿಗಳಾಗಿದ್ದ ರೆಂದೂ ನಾನು ಅವರ ಮೇಲೆ ಅಪರಾಧವನ್ನು ಹೊರಿಸುತ್ತೇನೆ. ಇದೋ ಈ ಹರಿಚಂದ್ರನು ಚರ್ಮದ ವ್ಯಾಪಾರಿಯನ್ನು ಸುಲಿಗೇಮಾಡಿದ್ದಾಗ ಸೇರಿದ್ದರೂ ಆ ಮೇಲೆ ನಡೆದ ಕೃತ್ಯಗಳಲ್ಲಿ ಸೇರಲಿಲ್ಲವು. ಅವನು ಎಲ್ಲಾ ವಿಷಯಗಳನ್ನೂ ನನಗೆ ತಿಳಿಯ

                       7