ಪುಟ:ನನ್ನ ಸಂಸಾರ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

50 ಕಾದಂಬರಿ:ಸಂಗ್ರಹ

ಪಡಿಸಿದನು. ಆದ್ದರಿಂದ ಧರ್ಮಾವತಾರನು ಅವನ ಮೇಲೆ ಕರುಣೆಯನ್ನು ತೋರಬೇ ಕೆಂದು ಬೇಡುತ್ತೇನೆ. ಸುರತಪುರಿಯ ಜಮೀನ್ದಾರನ ಆಸ್ತಿಯೆಲ್ಲವೂ ಮತ್ತು ಕಳು ವಾದ ರಿವಾಲ್ವರುಗಳೂ ಮತ್ತು ಚರ್ಮದ ವ್ಯಾಪಾರಿಯ ಸ್ವಲ್ಪ ಭಾಗ ಧನವೂ ಈ ಅನಾಯಕ ಪಾಳಯದವರ ಗುಪ್ತ ಗೃಹದಲ್ಲಿರುವದು” ಎಂದು ಹೇಳಿ ಧರ್ಮಾವತಾರ ನಿಗೆ ವಂದಿಸಿ ಕುಳಿತುಕೊಂಡನು. ಕೂಡಲೇ ಜನಗಳೆಲ್ಲಾ ಕೈತಟ್ಟಿ ತಮ್ಮ ಸಂತೋಷ ವನ್ನು ತೋರ್ಪಡಿಸಿದರು. ಆಗ ನ್ಯಾಯಾಧಿಪತಿಯು ಆ ಏಳುಜನ ಅಪರಾಧಿಗಳನ್ನೂ ಏನು ಹೇಳುವಿರೆಂದು ಕೇಳಲು ಅದಕ್ಕವರು "ನಾವು ಹೇಳತಕ್ಕುದೇನೂ ಇಲ್ಲವು ಭಾಸ್ಕರನು ಹೇಳಿದ್ದೆಲ್ಲಾ ನಿಜವು. ತಮ್ಮ ವಿಷಯದಲ್ಲಿ ಕರುಣೆಯನ್ನು ತೋರಿಸಬೇ ಕೆಂದು ” ಬೇಡಿದರು. ಜನಗಳ ಕೋಲಾಹಲವು ನಿಲ್ಲಿ ಸಲ್ಪಟ್ಟ ಮೇಲೆ ಪಂಚಾಯಿತರ ಅಭಿಪ್ರಾಯ ವನ್ನು ಹೊಂದಿ ಧರ್ಮಾವತಾರನು ಎದ್ದು ನಿಂತುಕೊಂಡು ಈ ರೀತಿಯಾದ ತೀರ್ಪನ್ನೋದಿದನು. " ನಮ್ಮ ಮುಂದೆ ನಿಂತಿರುವ ಅಪರಾಧಿಗಳ ಕೃತ್ಯಗಳು ಬಹಳವಾಗಿವೆ. ನಮ್ಮ ಪಂಚಾಯಿತರು ಅವರುಗಳನ್ನೆಲ್ಲಾ ತಪ್ಪಿತಸ್ಥರೆಂದು ಹೇಳಿರುತ್ತಾರೆ. ಇವರು ಗಳು ಕೊಲೇ ಡಕಾಯಿತಿ ಮುಂತಾದವುಗಳನ್ನು ಮಾಡಿರುವದು ರುಜುವಾತಾಗಿದೆ. ಆದರೆ ಇವರಲ್ಲಿ ಮೂವರು ಇನ್ನೂ ಬಹಳ ಚಿಕ್ಕ ವಯಸ್ಕರಾದ್ದರಿಂದ ನಾವು ಅವರಿಗೆ ಕರುಣೆಯನ್ನು ತೋರಿ ತಲಾ ಏಳು ವರುಷಗಳ ಕಠಿನ ಸಜಾವನ್ನೂ, ಉಳಿದ ನಾಲ್ವರೂ ದೊಡ್ಡವರೂ ವಿದ್ಯಾವಂತರೂ, ತಿಳಿದವರೂ ಆಗಿ ಈರೀತಿಯಾದ ಕೆಟ್ಟ ಕೆಲಸಗಳನ್ನು ಮಾಡಿರುವುದರಿಂದ ನಾವು ಅವರಿಗೆ ಜೀವಾವಧಿದ್ವೀಪಾಂತರವಾಸವನ್ನೂ ವಿಧಿಸಿರುತ್ತೇವೆ. ನಾವೆಲ್ಲರೂ ಈ ಪತ್ತೇದಾರೀ ಭಾಸ್ಕರರ ಘಟ್ಟಿಗತನವನ್ನು ಹೊಗಳುತ್ತೇವೆ. ಈ ನೀಚ ರುಗಳು ಕದ್ದಿದ್ದ ಪದಾರ್ಥಗಳೆಲ್ಲಾ ಆಯಾಮಾಲೀಕರಿಗೆ ಕೊಡಲ್ಪಡಬೇಕು. ಇನ್ನು ಮುಂದೆ ಇಂಥಾ ಸಂಘಗಳಮೇಲೆ ಪೋಲೀಸಿನವರು ಕಣ್ಣಿಟ್ಟಿರುವರೆಂದು ನಾವು ನಂಬು ತ್ತೇವೆ. ಇದಕ್ಕೆ ನಮ್ಮ ವಿದ್ಯಾವಂತರಾದ ಪಂಚಾಯಿತರೂ ಒಪ್ಪುತ್ತಾರೆಂದು ನಂಬು ತ್ತೇವೆ. ಈ ಹರಿಚಂದ್ರನೆಂಬುವನು ಕೊಲೆ ಮುಂತಾದವುಗಳನ್ನು ಮಾಡದೇ ಇದ್ದದ್ದ ರಿಂದಲೂ ಸರ್ಕಾರದ ಪಕ್ಷವಾಗಿ ಸಾಕ್ಷಿ ಕೊಟ್ಟಿದ್ದರಿಂದಲೂ ಅವನಿಗೆ ಅಧಿಕ ಶಿಕ್ಷೆ ಯನ್ನು ಕೊಡದೆ ಒಂದು ವರ್ಷ ಕಠಿಣಸಜಾವನ್ನು ವಿಧಿಸಿರುತ್ತೇವೆ.” ಎಂದು ಮುಗಿ ಸಿದಕೂಡಲೆ ಅಪರಾಧಿಗಳೆಲ್ಲಾ ಕಾರಾಗೃಹಕ್ಕೆ ಒಯ್ಯಲ್ಪಟ್ಟರು. ಜನಗಳ ಗುಂಪಿನ ಲ್ಲಿದ್ದ ಸುರತಪುರಿಯ ಜಹಗೀರ್‌ದಾರನೂ, ಚರ್ಮವ್ಯಾಪಾರಿಯೂ ಎದ್ದು ಬಂದು ಭಾಸ್ಕ