ಪುಟ:ನನ್ನ ಸಂಸಾರ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಧುಸಡನ

                                                                            51

ರನಿಗೆ ಹಸ್ತಲಾಘವವನ್ನು ಕೊಟ್ಟು ಅವನನ್ನು ಹೊಗಳಿ ದಯವಿಟ್ಟು "ತಮ್ಮನ್ನು ಬಂದುಕಾಣಬೇಕೆಂದು" ಹೇಳಿ ಹೊರಟುಹೋದರು.

     ವಾಸವಪುರದಲ್ಲಿ ಮಧುಸೂದನ ಮತ್ತು ಸರಳಬಾಲೆ ಇವರುಗಳ ವಿವಾಹವು ನೆರವೇರಿತು. ಆ ಸಮಯದಲ್ಲಿ ಸುರತಪುರಿಯ ಜಮೀನ್ದಾರನೂ, ಚರ್ಮವ್ಯಾಪಾರಿಯೂ ಬಂದಿದ್ದು ಅಲ್ಲಿದ್ದ ಭಾಸ್ಕರನನ್ನು ಕಾಣಿಸಿಕೊಂಡು ತಮಗೆ ತೋಚಿದ ರೀತಿಯಲ್ಲಿ ಅವನಿಗೆ ಪಾರಿತೋಷಕವನ್ನು ಕೊಟ್ಟರು. ಸರ್ಕಾರದಿಂದ ಬರಬೇಕಾಗಿದ್ದ ಬಹುಮಾನವೂ ಬಂದಿತು. ಸೋಮಸುಂದರನೂ ತನಗೆ ತೋರಿದ್ದನ್ನೆಲ್ಲಾ ಕೊಟ್ಟನು. ಸ್ವಲ್ಪ ಕಾಲದಲ್ಲೇ ಭಾಸ್ಕರನು ಅರವತ್ತು ಸಾವಿರ ರೂಪಾಯಿಗಳನ್ನು ಸಂಪಾದಿಸಿಬಿಟ್ಟನು. ಆದರೂ ಅವನು ಆಗಾಗ್ಯೆ ಸುಂದರಿಗಾದ ಗತಿಯನ್ನು ಕುರಿತು ವ್ಯಸನಪಡುತ್ತಿದ್ದನು. ವಿವಾಹವಾದಮೇಲೆ ಎಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಹೋದರು. ಭಾಸ್ಕರನು ಮಾತ್ರ ಮಧುಸೂದನನ ಸಂಗಡ ಒಂದೆರಡು ತಿಂಗಳು ಇರುವುದಾಗಿ ಒಪ್ಪಿ ನಿಂತನು.
   ಪಾಠಕಮಹಾಶಯ ! ಸದ್ಯದಲ್ಲಿ ಭಾಸ್ಕರನನ್ನು ವಾಸವಪುರದಲ್ಲಿ ಬಿಟ್ಟಿರುವೆವು. ಮುಂದಕ್ಕೆ ಅವನ ವಿಷಯವಾಗಿ ನೀವು ಕೇಳಬೇಕೆಂದಿದ್ದರೆ ಶ್ಯಾಮಲಾಂಗಿಯೆಂಬ ಪುಸ್ತಕವನ್ನು ಓದಿನೋಡಿರಿ.


                        ಸಂಪೂರ್ಣಂ.