ಪುಟ:ನನ್ನ ಸಂಸಾರ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

W - ಉಪೋದ್ಘಾತ. ಬ್ರಹ್ಮಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮವ ನಾಪರಃ | ಅನೇನವೇದ್ಯಂ ಸಚ್ಛಾಸ್ತ್ರ • ಇತಿ ವೇದಾನ ಡಿಣ್ಣಿ ಮಃ || ಆರಮಹನೀಯರೇ ! ಪರಮಾತ್ಮನು ಸಕಲಪ್ರಪಂಚವನ್ನೂ ಸೃಷ್ಟಿಸಿದನಂತರದಲ್ಲಿ, ವೇದಗಳನ್ನೂ, ವೇದಗಳ ತತ್ತ್ವವನ್ನು ಬೋಧಿಸುವ ಆದ್ವೈತವನ್ನೂ ಮಹರ್ಷಿಗಳಿಗೆ ಬೋಧಿಸಿದನು. ಚತುರ್ವೇದವೆಂಬ ವೃಕ್ಷವು ಅವೈತವೆಂಬ ಮುಖ್ಯ ಶಾಖೆಯಿಂದಲೂ, ಷಡಂ ಗಗಳೆಂಬ ಉಪಶಾಖೆಗಳಿಂದಲೂ, ಮೋಕ್ಷವೆಂಬ ಫಲದಿಂದಲೂ ಕೂಡಿ ಮಹರ್ಷಿಗಳಿಂದ ರಕ್ಷಿಸಲ್ಪಡುತ್ತಿತ್ತು. ಹೀಗೆಯೇ ಬಹಳಕಾಲ ನಡೆಯಿತು, ಅನಂತರ, ಅಂದರೆ ಈಗ್ಗೆ ಸುಮಾರು ೧೨೦೦ ವರುಷಗಳ ಹಿಂದೆ (ಶಂಕರದೇಶಿಕರು ಇದ್ದ ಕಾಲ ವನ್ನು ಸರಿಯಾಗಿ ನಿಷ್ಕ, ಒಬ್ಬೊಬ್ಬರ ಮತವು ಒಂದೊಂದು ವಿಧ ವಾಗಿರುತ್ತದೆ. ಅದರಲ್ಲಿ ಕೆಲವನ್ನು ವಾಡಕರ ಅವಗಾಹನೆಗಾಗಿ ವಿವರಿಸಿದೆ :- ಇಂಕರದೇಕರ ಕಾಲವಿಚಾರ. (1) « ಪ್ರೊಫೆಸರ್, ಎಷ್ಟು ಮಹಾದೇವಪಾಠಕ' ರೆಂಬುವರು, ಶ್ರೀಮಜ್ಝಂಕರ ಭಗವತ್ಪಾದರು ಕ್ರಿ. ಶ. 788 ರಲ್ಲಿ ಅವತಾರಮಾಡಿ ಕ್ರಿ. ಶ. 820 ರಲ್ಲಿ ವೃಷಭಾ ರೂಢರಾಗಿ ಕೈಲಾಸಗತರಾದರೆಂದು [ಕ್ರಿ. ಶ. 1882 ನೇ ರ್ಜು 6 ರಲ್ಲಿ ಪ್ರಸಿದ್ಧ ವಾಗಿರುವ (ಇಂಡಿರ್ಯಆಂಟಿಕ್ವರಿ-Indian Antiquary) ದಕ್ಷಿಣಹಿಂದೂ ಸ್ಥಾನೇತಿಹಾಸದ 11 ನೇ ಗ್ರಂಥದಲ್ಲಿ ಹೇಳುತ್ತಾರೆ. (2) CC ತಾರಾನಾಧತರ್ಕ ವಾಚಸ್ಪತಿಮಿಶ್ರ, ಬಿ. ಎ.” ಎಂಬುವರು ತಾವು ಮಾಡಿ ರುವ ಬುದ್ಧನ ಚರಿತ್ರೆಯಲ್ಲಿ, ಕ್ರಿ. ಶ. 700 ಮತ್ತು 750 ರಲ್ಲಿ ಉತ್ಪನ್ನ ನಾದ ಕುಮಾರಿಲಭಟ್ಟನಿಗಿಂತ ಮುಂಚೆಯೇ ಶಂಕರಾಚಾರರಿದ್ದರೆಂದು ತಿಳಿಸುತ್ತಾರೆ. (3) ( ಡಾಕ್ಟರ್, ಬರ್ನಲ್ ” ಎಂಬುವರು, ಕ್ರಿ. ಶ. 650 ಮತ್ತು 700 ವರುಷಗಳ ಮಧ್ಯದಲ್ಲಿ ಶಂಕರದೇಶಿಕರಿದ್ದರೆಂದು ತಿಳಿಸುತ್ತಾರೆ. (4) ಡಾಕ್ಟರ್‌, ಟೇಲರ್ ” ಎಂಬುವರು ಶಂಕರಯ 900 ವರುಷಗಳಿಗಿಂತಲೂ ಹಿಂದೆ ಇದ್ದರೆಂದು ತಿಳಿಸುತ್ತಾರೆ. (6) I ಪಂಡಿತ್, ಕೊಲಬೂಕ್ ?” ಎಂಬುವರು ಶಂಕರಭಗವತ್ಪಾದರು 1000 ವರುಷಗಳಿಗಿಂತ ಹಿಂದೆ ಇದ್ದರೆಂದು ತಿಳಿಸುತ್ತಾರೆ.