ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

c ಜೆ. ಸಿ. ಆರ್ಲ, ಎಮ್, ಎ, ” ಎಂಬುವರು "ಇ. ಡಬ್ಲೂ, ಥಾಂರ್ಸ, ಎಮ್, ಎ,”. ಎಂಬುವರು ಹೇಳುವಂತ ಶಂಕರಾಚಾರ್ಯರು 8 ನೇ ಶತಮಾನದಲ್ಲಿದ್ದ ರೆಂದು ತಿಳಿಸುವರು. (6) "ಪಂಡಿತ್, ರಾಮಮೋಹನರಾಯ” ಎಂಬುವರು ಶಂಕರಾಚಾರ್ಯರಿಂದ ಪರಂಪರೆಯಾಗಿ ಬಂದಿರುವ ಆಚಾರ್ಯರ ಚರಿತ್ರೆಯನ್ನು ಲೆಕ್ಕ ಮಾಡುವಲ್ಲಿ ಶಂಕರಭಗ ವತ್ಪಾದರು ಕ್ರಿ. ಶ. 700 ಮತ್ತು 800 ರಲ್ಲಿ ಇದ್ದರೆಂದು ತಿಳಿಸುತ್ತಾರೆ. (7) "ಪಂಡಿತ್, ವಿಲ್ಸ‌” ಎಂಬುವರು ಈ ಮೇಲಿನ ಮೂವರ ಮತವನ್ನೂ ತಿಳಿಸಿ "ಶಂಕರದೇಶಿಕರು 8 ನೇ ಶತಮಾನದ ಅಂತ್ಯದಲ್ಲಿ ಇದ್ದರೆಂದು ತಿಳಿಸುತ್ತಾರೆ. ಇದರಿಂದ ಶಂಕರರು 1200 ವರುಷಗಳ ಹಿಂದೆ ಇದ್ದರೆಂದು ತಿಳಿಯುತ್ತದೆ?" (8) ಜಿನವಿಜಯದಲ್ಲಿ ಶಂಕರಾಚಾರ್ಯರು 2000 ವರುಷಗಳ ಹಿಂದೆ ಇದ್ದ ರೆಂದು ಇದೆ. (9) .'ಕಲ್ಯಾದಿನೇಮಹಾದೇವಿ ಸಹಸ್ರದ್ವಿತಯಾತ್ಪರಮ್ ' ಎಂಬ ಶಿವರಹ ಸ್ಯದ ವಚನದಂತೆ ಶಂಕರಾಚಾರ್ಯರ: 2000 ವರುಷಗಳ ಹಿಂದೆ ಇದ್ದರೆಂದು ತಿಳಿಯ ಬರುತ್ತದೆ. (10) ಧರ್ಮೇಧ್ವಾ ವಿಂಶತಿಶಕೆ ಸಪ್ತಶದ್ವಿ ಸಹಸ್ರಕೇ ' ಎಂದು ಸದಾನಂದ ಪಂಡಿತರು ಹೇಳುತ್ತಾರೆ. ಇದರಿಂದ ಆಚಾರ್ಯರು ಸುಮಾರು 2000 ವರುಷಗಳ ಹಿಂದೆ ಇದ್ದರೆಂದು ತಿಳಿಯಬರುತ್ತದೆ.) ಕಲಿಮಹಿಮೆಯಿಂದಲೂ, ದುರ್ಮತಸಂಜಾತರೂ, ಕೂರಕರ್ಮಿಗಳೂ ಆದ ಕ್ರಕಚರು, ಕಪಾಲಿಕರು, ಶಾಕ್ತರು, ಶೈವರು, ವೈಷ್ಣವರು ಇತ್ಯಾದಿ ಜನರ ಪ್ರಾಬಲ್ಯದಿಂದ ಪರಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಆ ಚತುರ್ವೇದವೆಂಬ ವೃಕ್ಷವು ನಾಶವಾಗುವ ಸಮಯಬಂದಿತು. ಯಜ್ಞಯಾಗಾದಿಗಳನ್ನು ಮಾಡತಕ್ಕ ವರಿಲ್ಲದೆ ದೇವತೆಗಳೆಲ್ಲಾ ನಿರಶನವ್ರತ ವನ್ನು ಕೈಗೊಳ್ಳಬೇಕಾಯಿತು. ಆಗ ದೇವತೆಗಳು ಬ್ರಹ್ಮ ಸಹಿತರಾಗಿ ಪರಮೇಶ್ವರ ನಲ್ಲಿಗೆ ಹೋಗಿ ಭೂಲೋಕದ ಅನಾಚಾರವನ್ನೆಲ್ಲಾ ತಿಳಿಸಿದರು.

         ಆಚಾರ್ಯರ ಅವತಾರಕಾರಣ.            ಆಗ ಕರುಣಾಳುವೂ ಭಕ್ತಜನರಕ್ಷಕನೂ ಆದ ಮಹೇಶ್ವರನು---(1)"ಕಲೌರುದ್ರೋ ಮಹಾದೇವೋ ಲೋಕಾನಾಮಿಾಶ್ವರಃಪ್ರಭುಃ |

ತದೈವ ಸಾಧಯೇನೋಣಾಂ ದೇವತಾನಾಂಚ ದೈವತಮಮ್ ||೧||