ಪುಟ:ನನ್ನ ಸಂಸಾರ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೨ ಕಾದಂಬರೀಸಂಗ್ರಹ ತ್ತಲಿದಾರೆ, ನಾನು ಯೋಗಸಾಮರ್ಥ್ಯದಿಂದ ಆ ರಾಜನ ದೇಹಕ್ಕೆ ನನ್ನ ಆತ್ಮವನ್ನು ನುಗ್ಗಿಸಿ ಅವರಿಂದ ಕಳಾಶಾಸ್ತ್ರವನ್ನೆಲ್ಲಾ ಕಲಿತುಬರುವೆನು ” ಎನ್ನಲು ಸನಂದನನು ಗುರುಗಳನ್ನು ಕುರಿತು, “ ಆಚಾರ್ಯರೇ ! ಮತ್ಸ್ಯೇಂದ್ರಯೋಗಿಯೆಂಬುವನು ಪರಕಾಯ ಪ್ರವೇಶವಿದ್ಯಾಬಲದಿಂದ ತನ್ನ ದೇಹವನ್ನು ಶಿಷ್ಯನಾದ ಗೋರಕ್ಷನ ಬಳಿ ಇಟ್ಟು ಆತ್ಮ ವನ್ನು ಮೃತನಾಗಿರುವ ಓರ್ವ ಮಹಾರಾಜನ ದೇಹಕ್ಕೆ ನುಗ್ಗಿ ಸಲು, ಶವವು ಎದ್ದ ದ್ದನ್ನು ಕಂಡು ಎಲ್ಲರೂ ಭಯಾಶ್ಚರ್ಯಯುಕ್ತರಾಗಿ ಆ ದೇಹಕ್ಕೆ ಸಂಸ್ಕಾರಾದಿಗಳಂ ಮಾಡಿ ಪಟ್ಟಣಕ್ಕೆ ಕರೆದುಕೊಂಡುಹೋದನಂತರದಲ್ಲಿ ಮಂತ್ರಿಗಳು ಯಾರೋ ಯೋಗಿಗಳು ನಮ್ಮ ರಾಜನ ಸತ್ತ ದೇಹದಲ್ಲಿ ಸೇರಿ ವಿಲಾಸತೋರಿಸುತ್ತಿರುವುದರಿಂದಲೇ ದುರ್ಭಿಕ್ಷವು ದೇಶದ ಯಾವಭಾಗದಲ್ಲಿಯೂ ಇಲ್ಲ ವೆಂದೂಹಿಸಿ ಆತನು ರಾಜಶರೀರ ವನ್ನು ಬಿಟ್ಟ ಹೋಗದೇ ಇರುವಹಾಗೆ ಮಾಡಲು, ನವಯೌವನಸಂಪನ್ನೆ ಯರಾದ ಅನೇ ಕಸುಂದರೀಮಣಿಗಳನ್ನು ಕೂಡಿಹಾಕಿ ತನ್ಮೂಲಕ ಆ ಯತಿಗೆ ಮೋಸಗೊಳಿಸಲು ಆ ಯತಿಯು ತನ್ನ ಸಮಾಧಿಯನ್ನು ಮರೆತು ಕಾಮಕ್ರೀಡಾಲಾಲಸನಾಗಿರುವ ಸಮ ಯದಲ್ಲಿ ಗೋರಕ್ಷನು ಗುರದೇಹವನ್ನು ಬೇರೆಜನರ ರಕ್ಷಣೆಯಲ್ಲಿಟ್ಟು; ತಾನು ಭರ ತಾಚಾರ್ಯನಂತೆ ವೇಷಧರಿಸಿ ಸರಿಯಾದ ಸಮಯದಲ್ಲಿ ರಾಜನಿಗೆ ತತ್ವೋಪದೇಶವಂ ಮಾಡಿ ಯತಿಯನ್ನು ಆ ದೇಹವನ್ನು ಬಿಟ್ಟು ಬರುವಹಾಗೆ ಮಾಡಿದನೆಂಬ ಕಥೆಯು ಪ್ರಸಿದ್ಧವಾಗಿಲ್ಲವೆ ? ಎಂದನು. ಅದನ್ನು ಕೇಳಿ ಆಚಾರ್ಯರು ಎಲೈ ಶಿಷ್ಯನೇ ! ಕೃಷ್ಣ ನುರತಿಕ್ರೀಡಾಲೋಲನಾಗಿದ್ದರೂ ವಜ್ರೋಲಿಯೆಂಬ ಯೋಗದ ಮಹಿಮೆಯಿಂದ ಇಂದ್ರಿ ಯಸ್ಖಲನವಿಲವಿಲ್ಲದವನಾಗಿ ಅನಾದ್ರಿ ಹ್ಮಚಾರಿ ಎಂಬ ಹೆಸರನ್ನು ಹೊಂದಲಿಲ್ಲವೆ? ಇದಲ್ಲದೇ ಇಂದ್ರನು ಯತಿಗಳನ್ನು ಕೊಂದು ತೋಳಗಳಿಗೆ ಹಾಕಿ ತ್ವಷ್ಟೃಬ್ರಹ್ಮನ ಮಗನನ್ನು ಕೊಂದನು. ಹೀಗೆ ಯತಿ ಹತ್ಯೆ ಬ್ರಹ್ಮ ಹತ್ಯೆಗಳೆಂಬ ಮಹಾ ಪಾಪಗಳನ್ನು ಮಾಡಿದರೂ ತನ್ನ ಒಂದು ರೋಮವೂ ನೋಯಲಿಲ್ಲವೆಂದು ಆತ್ಮಜ್ಞಾನಪ್ರಭಾವ ವನ್ನು ಹೇಳಿರುವುದು ಖಗ್ವೇದದಿಂದ ತಿಳಿದುಬರುತ್ತದೆ, ಮತ್ತು ಜನಕನು ಅನೇಕ ದಕ್ಷಿಣೆಗಳಿಂದ ಯುಕ್ತಗಳಾದ ಕ್ರತುಗಳನ್ನು ಮಾಡಿ ದೇವತೆಗಳನ್ನೂ ಬ್ರಾಹ್ಮಣರನ್ನೂ ತೃಪ್ತಿಪಡಿಸಿದನು. ಹೀಗೆ ಮಾಡಿದಾಗ್ಯೂ ತತ್ಫಲಭೋಗಾರ್ಹವಾದ ಶರೀರವು ಬರದೇ ಮೋಕ್ಷವು ಬಂದಿತೆಂದು ಕಾಣ್ವಶಾಖೋಪನಿಷತ್ತುಗಳಿಂದ ತಿಳಿಯಬರುತ್ತದೆ. ಆದ್ದ ರಿಂದ ವ್ರತಭಂಗಶಂಕೆಯು ಬರಲಾರದು. ಎಂದು ಹೇಳಿ ತಮ್ಮ ದೇಹವನ್ನು ಒಂದು