ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೬೬
ಕಾದಂಬರೀಸಂಗ್ರಹ ಆಗ ಶಿಷ್ಯರು "ಈ ಚಾಡ್ಯಪರಿಹಾರವಾಗುವಂತೆ ಏನಾದರೂ ಮಾಡಬೇಕು" ಎಂದು ಆಚಾರ್ಯರನ್ನು ನಿರ್ಬಂಧದಿಂದ ಪ್ರಾರ್ಥಿಸಲು, ಆಚಾರ್ಯರು ಅವರ ನಿರ್ಬಂಧ ವನ್ನು ಸಹಿಸಲಾರದೇ ಮಹಾದೇವನಂ ಪ್ರಾರ್ಥಿಸಲಾದೇವದೇವನಾಜ್ಞೆಯಿಂದ ಅಶ್ವಿ ನೀದೇವತೆಗಳು ದ್ವಿಜವೇಷದಿಂದ ಆಚಾರ್ಯರವರ ಸಮಿಾಪಕ್ಕೆ ಬಂದು "ಎಲೈ, ಯತಿಯೆ! ನಿನ್ನ ಈ ರೋಗವು ಅನ್ಸರಕೃತ್ಯದಿಂದ ಉತ್ಪನ್ನ ವಾದ ಕಾರಣ ಚಿಕಿತ್ಸೆ ಮಾಡಲಶಕ್ಯವು” ಎಂದು ಹೇಳಿ ಹೊರಟುಹೋದರು. ಅನಂತರ ಕೋಪವನ್ನು ಹೊಂದಿದ ಪದ್ಮಪಾದರು, ಶತ್ರುಗಳ ವಿಷಯದಲ್ಲಿ ಯೂ ದಯಾದ್ರರಹೃದಯವುಳ್ಳ ಗುರುಗಳಿಂದ ತಡೆಯಲ್ಪಟ್ಟರೂ, ತಮ್ಮ ಗುರುವಿನ ರೋಗ ನಾಶಕ್ಕೆ ಇನ್ನೊಂದು ಮಂತ್ರವನ್ನು ಜಪಿಸಲು ಅದರಿಂದ ಅಭಿನವಗುಪ್ತನೂ ನಾಶವಾ ದನು; ಆಚಾರ್ಯರ ರೋಗವೂ ನಾಶವಾಯಿತು. ಬಳಿಕ ಸ್ವಸ್ಥರಾದ ಶಂಕರರು, ಒಂದುದಿನ ಸಾಂಯಂಕಾಲ ಗಂಗಾನದಿಯ ಮರಳಿನಮೇಲೆ ಬ್ರಹ್ಮಾನುಸಂಧಾನವನ್ನು ಮಾಡುತ್ತಿರಲು ಅವರ ಗುರುಗಳಾದ ಗೌಡಪಾದರು ಬಂದು ಆಚಾರ್ಯರಿಗೆ ದರ್ಶನವಿತ್ತು, ಆಚಾರ್ಯರ
ಭಾಷ್ಯಾದಿಗಳನ್ನು ನೋಡಿ ಸಂತೋಷಪಟ್ಟು ಮುಂದರಿದರು.
ಅನಂತರ ಶಂಕರರು ಜಂಬೂದ್ವೀಪದ ಭರತಖಂಡದಲ್ಲಿ, ಕಾಶ್ಮೀರದಲ್ಲಿರುವ, ಸರ್ವಜ್ಞ ಶಾರದಾಪೀಠವನ್ನಾ ರೋಹಿಸದೇ, ಅಲ್ಲಿ ನವರ ಪ್ರಶ್ನೆಗಳಿಗೆ ಸದುತ್ತರವನ್ನಿತ್ತು ಸರ್ವಜ್ಞ ಪೀಠವಿರುವ ಶಾರದಾಸದನದ ಬಾಗಿಲುಗಳನ್ನು ತೆರೆಯಿಸದೇ ಸರ್ವಜ್ಞತ್ವವು ಬರುವುದಿಲ್ಲವೆಂದು ಕೇಳಿ ಸಶಿಷ್ಯರಾಗಿ ಅಲ್ಲಿಗೆ ಹೊರಟು, ದಕ್ಷಿಣದ್ವಾರವನ್ನು ಸೇರಿ ಸಕಲ ಮತವಾದಿಗಳನ್ನೂ ಸೋಲಿಸಿ ಒಳಗೆ ಪ್ರವೇಶಿಸಿ, ಸನಂದನನ ಹಸ್ತವನ್ನು ಹಿಡಿ ದುಕೊಂಡು ಸರ್ವಜ್ಞ ಪೀಠವನ್ನು ಹತ್ತಲುದ್ಯುಕ್ತರಾದ್ದನ್ನು ಕಂಡು ಅಶರೀರವಾ ಣಿಯು "ಎಲೈ, ಯತಿಯೇ ! ನಿನಗೆ ಸರ್ವಜ್ಞತ್ವವಿಲ್ಲದಿದ್ದರೆ ಬ್ರಹ್ಮಾವತಾರಿಯಾದ ಮಂಡನಮಿಶ್ರನು ನಿನಗೆ ಹೇಗೆ ಶಿಷ್ಯನಾಗುತ್ತಿದ್ದನು ? ಈ ಪೀಠವನ್ನು ಹತ್ತಲು ಸರ್ವ ಜ್ಞತ್ವ ವೊಂದೇಕಾರಣವಲ್ಲ. ಏಕೆಂದರೆ ಶುದ್ಧತ್ವವೂ ಬೇಕು; ಕಲಾರಹಸ್ಯವನ್ನು ತಿಳಿ ಯಲಿಚ್ಛಿಸಿದ ನೀನು ಸ್ತ್ರೀಸಂಭೋಗವನ್ನು ಮಾಡಿದ್ದರಿಂದ ನೀನು ಹೇಗೆ ಶುದ್ಧನು ? ಎನ್ನಲು ಶಂಕರರು "ಮಾತಃ ! ನಾನು ಅಮರುಕರಾಯನ ದೇಹದಿಂದ ಹೋಗಿ ಕಲಾ ಶಾಸ್ತ್ರವನ್ನು ಕಲಿತೆನೇ ಹೊರತು ಯತಿಯ ದೇಹದಿಂದಲ್ಲ; ಆದ್ದರಿಂದ ನಾನು ಹೇಗೆ ಅಶುದ್ಧನು ” ಎಂದರು.