ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಬೆನಕೆನ ಮಹಿಮೆ ೨೦
ತರುಣಿವೇಷವಧರಿಸಿ ತೇಜವು| ಚರಿಸೆಮುಂಗಡೆಯೊಳಗೆ ಕಪಿಲನು|
ಪಿರಿದುಮೆಲ್ಲೆಡೆಯೊಳಗೆ ಕಾಣುವ ಮಾಯೆಗಂಜುತ್ತ ||
ನಿರುಕಿಸಿರ್ದುದಿದೇನು? ಚಿಂತಿಸೆ| ದೊರಕಿತೇನಿದು ? ಮೆಂದುತನ್ನೊಳೆ |
ಭರದೆಚಿಂತಾಕ್ರಾಂತನಾಗಲು ಮಾಯೆಪೇಳಿದಳು || ೩||
ಮುನಿಪಕೇಳೈಪಿಂತೆದೈತ್ಯನು| ನೆನೆದುಜಪವನು ಮಾಡಿಶಿವನಾ|
ದನುವರಂಗಳಪಡೆದು ತರಿದನುಮೂರುಲೋಕವನು ||
ಬೆನಕನಲ್ಲದೆ ಗಣನವಧಿಸಲು| ತನಗೆಸಾಧ್ಯವದಲ್ತುಮಿಕ್ಕಾ।
ವಿನುತಸುರರಿಗೆ ನಿಜವು ಕೇಳೈಜತಿಯೆ ! ಪೇಳುವೆನು ||೪ ||
ಜಗವನೆಲ್ಲವ ಪಡೆದವನೇ। ಜಗವನೆಲ್ಲ ವ ಪೊರೆವನವನೇ |
ಜಗವನೆಲ್ಲವ ಕೊಲ್ವನಾತನು ಪುಸಿಯಮಾತಲ್ಲ ||
ಮಿಗಿಲುಬೆನಕನು ಪಟ್ಟಿ ಬೇಗನೆ| ಮುಗಿಸಿಕೊಂಬನು ದೈತ್ಯಗಣನನು|
ಜಗದೊಳಾರ್ಗ೦ಸಾಧ್ಯವಿಲ್ಲೆನು ತೊರೆದಳಾ ಮಾಯೆ ||೫||
ಅದನುಕೇಳ್ದಾ ಮುನಿಯು ಒನನಿಯೆ ! | ಮದನುಕೂಲಕ್ಕೊಸೆದು ನೀಂ ಪೇ ||
ಳ್ವುದುವಿನಾಯಕನೆಹಗೆ ಜಗದೊಳು ಜನ್ಮವೆತ್ತುವನು ||
ಸದಯೆ ! ಪೇಳೆನೆಮಾಯೆ ನುಡಿದಳು| ಮುದದೇಸೇಎಸೆ ನೀನು ಬೆನಕನ|
ಹೃದಯಪದ್ಮದೆ, ನಿನ್ನ ಮನೆಯೊಳಗವನು ಪುಟ್ಟುವನು ||೬||
ಎಂದಮಾಯೆಯ ವಚನಸಾರವ |ನಂದುಸವಿದನು ಮುನಿಯು ನುಡಿನೀ।
ಮಿಂದು ಬೆನಕನುಪುಟ್ಟೆ ಹೇತುವನೆನಗೆ ಬೆಸ ಸೀಗ ||
ಈ ಸಂದಭಕ್ತಾದರದೆ ಸೇವೆಯ | ನಿಂದುಮಾಳ್ಪೆ ನೆನುತ್ತೆಬೆಸಗೊ|
ಮಂದಹಾಸದೆ ಮಾಯೆಮಂತ್ರವ ಪೇಳ್ದಳಾಮುನಿಗೆ ||೭||
ಮಂತ್ರವಿದು ಬಲುಸಿದ್ಧಿದಾಯಕ | ಮಂತ್ರಕೃತನೇ ! ಜಪಿಸುಮೌನದೆ |
ಮಂತ್ರವರವನು ನೀನು ಮೋಂಕಾರಾದಿಯಂಮನದೆ ||
ಮಂತ್ರವನು ಪದಿನೆಂಟುಲಕ್ಷದೆ| ಮಂತ್ರಿಸೈವಿಧಿಯಿಂ ದಶಾಂಶದ|
ಮಂತ್ರಭಾಗದೆ ಹೋಮಮಾಡಿ ದಶಾಂಶದಿಂತಣಿಸು || ೮ ||
ಚರಿಸುಪಗಲಿರುಳೊ೦ದರಲ್ಲಿಯೆ| ನೆರೆಸಮಾಹಿತನಾಗಿ ಕುಂಡಾ೦|
ತರದೊಳೊಗೆವನು ನಾಲ್ಕು ಬಾಹುವಿನಿಂದಲಾಬೆನಕ ||
ಧರಿಸಿದಿವ್ಯಾಂಬರವಭೂಷಣ| ವಿರದೆಸಿಂಹಾರೂಢನಾಗುತೆ |
ಬೇಗೆಗೇಸಿವಾ೦ಬರವಭುಷಣ|ವಿರದೆಸಿ೦ಹಾರೂಢನಾಗುತೆ| || ೯||
3