ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೆನಕವಮಹಿಮೆ

    ಮಾನಹೀನನೆ ನಿನ್ನ ನಿರಿವನು| ತಾನು ಬೆನಕನು ಜನಿಸುತಿಲ್ಲಿಯ|
ದೀನಪೋಷಕನೆಂದು ಪೇಳಲು ದುರುಳಗರ್ಜಿಸಿದ||            || ೮ || 
   
    ವಿಷ್ಟರವ ಬಿಟ್ಟಿದ್ದು ಬೇಗನೆ| ವಿಷ್ಟರಶ್ರವನಲ್ಲಿಗೇಳಲು| 
ದೃಷ್ಟಿಗೊಡೆಯನು ತಾನು ಸಿಂಧುರಬೆನ್ನನಟ್ಟಿದನು ||
    ದೃಷ್ಟಿಸುತ್ತ ಜನೆರಗಿ ಶೌರಿಗೆ| ನಿಷ್ಟೆಯಿಂದಲಿನುತಿಸೆ ಮುರಹರ|
ನಿಷ್ಟ ಪುತ್ರನ ಮೊಗದಕುಂದನು ದಿಟ್ಟಿಸುತನುಡಿದ             || ೯ ||
    
    ಏಕೆಚಿಂತಿಪೆಸುತನೆ! ಪೇಳೈ| ಸಾಕುಕಡುಸುಯ್ ನಿನ್ನ ಪಿಂದಿ|
ರ್ಪಾ ಕುಮಾರಕ ನಾರುಪೇಳೆಂದಾತಬೆಸಗೊಳಲು ||
    ನಾಕಜಾಧಿಪನಾನು ಜೃಂಭಿಸ|ಲೀ ಕುಮಾರನು ಚಾರುಗಂಧನು|
ಮೀಕುಮಂಡಲದೊಗೆದು ಪಡೆದನು ಸಿಂಧುರಾಖ್ಯೆಯನು         || ೧೦ || 
   
    ಇವನು ಬೇಡಲು ಸುಂದರಸ್ಥಾ| ನವನು ಕೊಟ್ಟೆನು ಮತ್ತಮೀತಂ|
ಬುವಿಯೊಳಾರನು ತಳ್ಕಿಸಲ್ಕವನಂದು ಸುಟ್ಟಪನು ||
    ಕವಿಯದಂತೆಯೆ ಸೋಲಮೇಗಳ್ | ದಿವಿಷದರ್ಕಳಿ ನಿಳೆಯನೃಪರಿಂ|
ದಿವಗೆ ಕೊಟ್ಟೆನು ವರವನೆನ್ನು ಮನಪ್ಪಲೈತಂದ              || ೧೧ ||
    
    ಅದುವೆಕಾರಣಮಳ್ಕನಾಂತಾಂ| ಪದುಮನಾಭನೆ! ಬಂದೆನಿಲ್ಲಿಗೆ|
ಪದೆದುಕಾವುದು ವರದನಿಜಕಾಂ ಲಕ್ಷ್ಮವಾಗಿಹೆನು ||
    ಸದಯಕೇಳೆಂದೊರೆಯೆ ಶೌರಿಯು| ಬಿದಿಯೆಚಿಂತಿಸದಿಂತು ಮೆಲ್ಲವಿ|
ಬುಧಸಮೂಹಕೆ ಭಯವ ಮೂಳ್ಪೀವರವನೇಕಿತ್ತೆ             || ೧೨ || 
    
    ಇದುವರೆಗೆ ಕಂಡಿಲ್ಲ ಕೇಳ್ದಿ| ಲ್ಲದನು ಬೊಮ್ಮನೆ ನಿನ್ನ ನುಡಿಯುಂ|
ತೊದಳು ಮಲ್ಲಿವ ನೆಮ್ಮಯಾಬಲ ಪೌರುಷಂಗಳನು ||
    ಪದೆದು ನೋಡಿದನೆಲ್ಲವ ಸುರನು| ಮೊದಲವರದಾಬಲಕೆ ಲೋಕವ|
ನದುರಿಪಂಗಡ! ಶಿವನು ಕರುಣಿಸಲಿವನು ಮಡಿಯುವನು       || ೧೩ ||
    ಹರಿಯು ನುಡಿಯಲ್ಕಿಂತು ಸಿಂಧುರ| ನಿರದೆ ಹರಿಯನು ಕರೆಯೆಕೊಳಗೊಳ| 
ಕೆರಗದಿರ್ದೊಡೆ ನಿನ್ನ ನೀಬಿದಿಸಹಿತ ದಹಿಸುವೆನು ||
    ಮುರನಿಷೂದನ ಕೇಳುನೀನೆನೆ| ನಿರುಕಿಸುತ್ತೆಲೆ ಶಕ್ತಿಹೀನರು|
ನೆರೆನಿರೀಹರು ಬಗೆವೊಡೆಂತುಟುಕಾದಲೆಳಸುವರು            || ೧೪ ||