ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಾದಂಬರಿ ಸಂಗ್ರಹ ೩೫
ಇವನು ಬೊಮ್ಮನು ವೇದಜಡನೈ| ಜವದೆ ಸೃಷ್ಟಿಯ ಮಾಡೆತೊಡಗಿ| ರ್ಪಿವನು ಶಾಸ್ತ್ರ ಪುರಾಣವೇದಂಗಳನು ಪಠಿಸುವನು || ಬವರಮೇತಕ್ಕಿವಗೆ ಬಗೆವೊಡೆ| ಜವದೆಕೈಲಾಸಕ್ಕೆ ಪೋಪುದು| ಶಿವನು ಗಿರಿಜಾಯುಕ್ತನಿರ್ಪನು! ಸೆಣಸು ನೀನಲ್ಲಿ || ೧೫ || ಹರಿಯನುಡಿಯನು ಕೇಳಿದನುಜನು| ಹರಿಸದಿಂದಲಿ ಬವರ ಮೆಸಗ| ಲ್ಕಿರದೆ ಪಾರಿದನಂದು ಕೈಲಾಸಾದ್ರಿನಿಕಟಕ್ಕೆ|| ಸುರವಿರೋಧಿಯು ಚಿಗಿದರಭಸಕೆ| ಸುರರು ಮನುಜರು ಯಕ್ಷನಾಗರು| ಗಿರಿಯುನದಿಗಳು ನಡುಗಿಪೋದುವು ಭಗಣಮುರುಳಿದುದು || ೧೬ || ತೆರಳುತಲ್ಲಿಂಜಪವ ಮಾಡುವ ಹರನಕಂಡನು ನೊಸಲಬೂದಿಯ| ಕೊರಳರುದ್ರಾಕ್ಷೆಗಳ ವಾಮಾಂಕಸ್ಥೆಯಂಬಿಕೆಯ|| ದುರುಳನಾಹರನಪ್ಪೆ ಮನದೊಳ್| ಭರದೆ ಚಿಂತಿಸಿಯವನ ಮಡದಿಯ| ನಿರದೆಪಾತಾಳಕ್ಕೆ ಮುಯ್ವೆನೆನುತ್ತೆ ಬರೆಸೆಳದ || ೧೭ ||
ಗಿರಿಜೆಯಾಗಳೆ ನೆಲಕುರುಳ್ದಳು| ಮೊರೆದು ಮೂರ್ಛಿತಳಾಗಿ ನಾಥನೆ| ದುರಳನೀತನು ಮೆನ್ನಬಲ್ಮೆಯೊಳೀಗ ಸೆಳೆದುಯ್ವಂ || ಹರನೆ ! ನೋಡಿಯು ಮುಸಿಕನಿಹೆಯೊ| ತ್ತರಿಸಿ ಮೌನಧ್ಯಾನಗಳ ನೀ| ಮರೆಯಿಸೈ ಭುಜದಳವ ಪರಿಹರಿಸೆನ್ನ ಬಂಧವನು || ೧೮ ||
ಇಲ್ಲದಿರಲಿವನೆನ್ನ ಮುಟ್ಟುತ| ಮಿಲ್ಲಿವಹ್ನಿಗೆ ವಶವನೆಸಪನು| ಖುಲ್ಲನೆಂದೆನೆ ಗಿರಿಜೆ, ಗಣಗಳು ಬೇಗಬೊಬ್ಬಿರಿಯೆ || ನಿಲ್ಲದಾಂಕಣ್ಗಳನು ತೆರೆಯಲ| ವೆಲ್ಲ ಗಣಗಳು ನುಡಿದು ವೀಶನೆ| ಸೊಲ್ಲನಾಲಿಸು ? ಜಪವಮಾಣಿನ್ನು ಮೆಗೆ ಶೋಕಿಪೆವು || ೧೯ ||
ನಿನ್ನ ಶಕ್ತಿಯತೋರ್ದು ಬೇಗನೆ| ಬನ್ನ ವಂ ನೀಂ ಹರಿಸು ಶಿವನೆ| ಮುನ್ನಮೆರಗುವೆವೆನಲು ಕೇಳ್ದೆನು ಗಣದರೋದನವ|| ಖಿನ್ನನಾಗುತೆ ತಿಳಿದನಾದೊಡೆ | ಬನ್ನ ಮೇಂ ನಿಮಗೆಂದು| ಲೈನ್ನನೋಡಿಯೆ ದುರುಳನುಮೆಯನುಕೊಂಡು ಸಾರಿದನು || ೨೦ ||
ಎನಲು ಕೇಳ್ದಾ ಭೂತಗಣದಾ | ಧ್ವನಿಯ ನಂದಿಯನೇರಿ ಬೇಗನೆ| ವಿನುತಶೂಲವಡಮರುವನು ಪಿಡಿದೋಡಿ ಪೊಯ್ದಾಡಿ || ಜನುಮಜರೆಯಲ್ಕುಮೆಯ ಮುದಿಯನು| ದನುಜತೊಥೆಯ್ಞ ಪೋಗಣಂರಾ| ಮpnameಗೆದ್ದುಕೊಳ್ಳ