ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚನನಮುಹಿಮ

    ಜಾನುಮಧ್ಯದೆ ಪಾರ್ವನೈತಂ| ದೇನುದೈತ್ಯನೆ | ಸೆಣಸುಶಿವನೊಡೆ|
ನೀನು ಗೆಲ್ಲೊಡೆಶಿವೆಯ ಕೈಕೊಳ್ಳಿದಕೆ ನಿಮ್ಮೊಳಗೆ ||
    ನಾನು ಮಧ್ಯಸ್ಥಾನವಾಂಪೆನು | ಮಾನಿಯೆನ್ನುತೆ ಪರಶುಮಧ್ಯ|
ಸ್ಥಾನದಲ್ಲಿಡೆ ಚಿರದೊಳಿರ್ವರು ಕಾದಿಸೆಣಸಿದವು                  || ೨೨ ||
     ಪರಶುಧಾವಿಸಿ ಬರುವ ದೈತ್ಯನಿ| ಗುರದೆ ನಾಂಟುತಲವಗೆ ಹಿಂಸೆಯ| 
ಮರೆಯೊಳಾಚರಿಸುತ್ತೆ ಬಲವನವಂಗೆ ತಳ್ಗಿಸಿತ||
     ಮರಳಿ ಪಾರ್ಛನು ಶಿವನೆ! ಗೆಲ್ದನು| ದುರುಳ ! ದೇವಿಯನಿತ್ತು ಬೇವಿಸು|
ಬರಿದೆ ಶೂಲದಬಾಯ್ಗೆ ಸಿಲ್ಕುತೆ ಸಾಯಬೇಡೆಂದ                 || ೨೩ ||
    ಖಳನು ಕೇಳುತೆ ಭಯದೋಳುಳಿದನು | ಮುಳಿದು ಶಿವೆಯನು ನಾಗಲೋಕ |
ಕ್ಕಿಳಿದು ಪೋದನುಬಳಿಕ ಪಾರ್ವತಿಪಾರ್ವನಂ ನೋಡಿ||
   ಗಳಿಗೆಮಾತ್ರದೆ ನೀನು ದೈತ್ಯನ| ಗೆಲಿದು ತಪ್ಪಿಸಿಸೆರೆಯನೆನಗಂ|
ಬಳಿಕ ಕಾಯ್ದೆ ನಿನ್ನ ಮನೆಯೆಲ್ಲಿಹುದು ನೀನಾರು                  || ೨೪ ||
   ಎನುತ ಪೇಳ್ದಾಶಿವೆಯ ಮಾತಿಗೆ| ತೊನೆದುವಾರ್ವನು ತನ್ನ ರೂಪದ| 

ಘನತೆಮೆರೆಯಿಸೆ ಗೌರಿಬೆಕ್ಕ ಸಮೆಯ್ದಿ ಬಗೆಯೊಳಗೆ ||

    ವಿನತಳಾಗಿಯೆ ನಾಲ್ಕು ತೋಳಿನ ವಿನುತ ಸಿಂಹಾಸೀನ ಸುಮುಖನ|
ಧನುವನಾಂತನ ನೋಡಿ ನಲಿದಿರೆ ಬಳಿಕ ಗಣಪತಿಯು             || ೨೫ ||
 
    ಮೇನಕಾತ್ಮಜೆ ಕೇಳಜಾದ್ಯರು| ಮೌನಿಮುಖ್ಯರು ಜಂತುನಿವಹಂ|
ಧ್ಯಾನದಿಂದ ವಿರೋಧದಿಂದಲಿ ಭವವದಾಂಟುವರು ||
    ನಾನು ಸಿಂಧುರ ದೈತ್ಯಹನನಕೆ | ಮಾನಿನೀಮಣಿ ನಿನ್ನ ಜಠರದೆ| 
ಸಾನುರಾಗದೊಳೊಗೆವೆನೆನೆ ನಾವ್ ಬಂದೆವೀಸ್ಥಳಕೆ                || ೨೬ ||
     ಇಂತು ಸ್ಕಾಂತಪುರಾಣಾಂತರ್ಗತಮಾದ ವಿನಾಯಕ ಮಹಾಮಹಿಮೆಯೊಳ್
                 ಒಂಭತ್ತನೆಯ ಪ್ರಕರಣವು ಮುಗಿದುದು.
                     
                         ಹತ್ತನೆಯ ಕರಣ.
 ಸೂ|| ಗಿರಿಜೆಯುದರದೊಳೊಗೆದು ದೇವನು
      ವರಗಜಾನನನಿರಿದು ದೈತ್ಯನ|
      ಸುರರ ಪಾರ್ವರಾಯ್ದ ನೆನ್ನುತೆ ಗುಹಗೆ ಶಿವನೆರೆದ||
  ರಸೆಯೊಳೆಲ್ಲರ ದೈತ್ಯನಳಿಸುತೆ | ವಸುಧೆಯೊಡೆಯರ ವೀರಮುಖ್ಯರ|
ಹೊಸೆದು ಬಾಧಿಸಿ ಮತ್ತೆ ನಾಲ್ವರ ವೇದನಿಷ್ಟರನು ||
  ಆಸುಗಳೆದು ಪೆಣ್ಗ ಳನಪಹರಿಸಿ| ವಸತಿಗಗ್ಗಿ” ಯನಿಕ್ಕಿ ಮುರಿದನು | ಮಸಗಿಯಜ್ಞ-ಮಹೀಜ-ಕಾಸಾರಾದಿಮಂಟಪವ                                ||೧||