ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚನನಮಹಿಮ
ಸತಿಯವಾಕ್ಯವ ಕೇಳ್ದುಮೋದಿಸಿ| ಸತಿಯನರ್ಧಾಂಗಕ್ಕೆ ಸೇರಿಸಿ|
ಸುತನೆ! ನಂದಿಯನೇರಿ ನಡೆದೆನು ಧರೆಗೆ ಗಣವೆರಸಿ ||
ಹಿತದಬಳಸುತ ರಮ್ಯ ವಿಪಿನತ |ಗತಿಯಕಾಣದೆ ಬಳಲಿಯೊಂದೆಡೆ |
ವಿತತವಿಪಿನವ ಕಂಡೆನದರಾಸರಿಯ ಪೇಳುವೆನು || ೯ ||
ತರುಸಮೂಹದ ಖಗದವಿಸರದೆ ಹರಿತರಕ್ಷುಗಳಿಂದೆ ನಾನಾ |
ಪರಿಯ ಮೃಗಗಣದಿಂದ ಕೆರೆಕೊಳಹಳ್ಳ ಕೊಳ್ಳದಲಿ ||
ಪಿರಿದು ಸಂಪಗೆಜಾಜೆಯಿಂ ತಾ। ವರೆಮೊದಲಹಸುಪುಷ್ಪವೃಕ್ಷದೆ|
ಪರಭ್ಋತಾ ಸೊಗಯಿಸಿದತ್ತು ಪೆರ್ಕಳದಿಂ ||೧೦||
ಇನಿಯಮಾವಣ್ಣಿಂದೆ ಜಂಬೀ| ರನಿವಹಂಗಳಿನಲ್ಲಿ ಮೆರೆವಾ।
ಘನದ ಸಿರಿಫಲದಿಂದೆ ಜಂಬೂಸನಸ ತರುಗಳಲಿ ||
ಎನುತ ಚಂದನದಿಂದ ಕಿಂಶುಕ | ಬನವು ತಿಂದುಕ ಕಲ್ಪವೃಕ್ಷದ|
ಬನಗಳಿಂದಲಿ ಮೆರೆವತಾಣದೊಳಿರ್ದೆ ಸತಿಯೊಡನೆ || ೧೧ ||
ಗಣಗಳೆಲ್ಲವು ಗಾನಗೈದುವು| ಕುಣಿದ ರೆಲ್ಲ ರ್ಘನದ ಬನದೊಳು |
ಗಣಗಳಿಂದಲಿ ಗಿರಿಜೆಯಿಂದಲಿ ಕೂಡಿನಾನಲ್ಲಿ ||
ತಣಿದು, ಸೊಗಯಿಪ ಬಳ್ಳಿವನೆಯೊಳು| ಮುಣುತಲಿರ್ದೆನು ಸೊಗವನಾ ದು|
ರ್ಗುಣಿ ಗಜಾಸುರನೆನ್ನ ಭಕ್ತನು ಮದನು ಮುರಿದಿಟ್ಟ || ೧೨ ||
ಮುಕುತಿಗಾಶಿಪ ನಾಗದೈತ್ಯನು| ಬಕುತನಾಗಿಯೆ ನೆನೆದು ಜಾತಿಯ |
ನಿಕಟದಲ್ಲಿಯೆ ಜಪಿಸುವೆನ್ನನೆ ನೋಡಿಕುಂಜವನು ||
ಶಕಲಗೈದನು ಕುವರಕೇಳೆ | ಯಖಿಳವೆಂದೆನೆ ಕೇಳ್ದು ತಾಗುಹ|
ನುಕುತುಕದೊಳೆಂತು ಗಜನಾದನು ನಿನ್ನ ಕಿಂಕರನು || ೧೩ ||
ನೆನೆದನೆಹಗೃತನ್ನ ಜಾತಿಯ| ದನುಜಸಿಂತಣ ಭವದೊಳಾರವ|
ತನಗೆ ಪೇಳೆನೆ ಸುತನಮಾತನು ಕೇಳಿಶಂಕರನು ||
ತನುಜಕೇಳ್ಐಎ ಸಾವಧಾನದೆ| ದನುಜನಾತನುವೂರ್ವ ಯುಗದೊಳ್ |
ಜನಪನಾದನು ಲೋಕಪಾಲಕನಾಗಿ ನೀತಿಯಲಿ || ೧೪ ||
ನಡೆದು ಸಿರಿಯನು ಸಾರ್ದುರೂಪವು ಪಡೆದು ಶಾಸ್ತ್ರದೆ ಕೋವಿದನೆನಿಸಿ||