ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಾದಂಬರೀ ಸಂಗ್ರಹ
ಪೊಡವಿಯಲ್ಲಿ ಮಹೇಶನೆಂಬುವ| ಪೊಡವಿಪಾಲಕನಾಗಿ ಲೋಕದೆ|
ಪಡೆದು ಜಸವಂತನ್ನ ಮನೆಯೊಳ್ಸುಖದೆ ನೆಲಸಿರಲು || ೧೫ ||
ಗುರುವುಸುರಪುರ ದತ್ತಣಿಂದಲಿ| ಬರಲುಕಂಡನು ಬಳಿಕ ವಿಧಿಯಿಂ।
ಗುರುವನರ್ಚಿಸಲವನು ನಲಿಯುತ ನೃಪನಿಗಳಿದನು||
ನರಪನಿನಗೆಣೆವರ್ಷದೊರೆಗಳ್ | ತಿರೆಯೊಳೊಲ್ವರು ಮಿಲ್ಲ ಸಗ್ಗದೆ |
ಮೆರೆಗು ನಿನ್ನಯಜಸವು ನೀಂಸುರವಂದ್ಯನಾಗಿರುವೆ || ೧೬ ||
ಅರಸಕೇಳೆಂದೊರೆಯೆ ಜೀವನು | ನರಪನಾಲಿಸಿ ಗುರುವೆನಿನ್ನ ಯ|
ಹರಿಕಸತ್ಯವಿದೆಂದಿಗಕ್ಕು ಮೊ ಪೇಳುಗೀಷ್ಪತಿಯೆ ||
ದೊರೆಯನುಡಿಯನು ಕೇಳ್ದು ಜೀವನು!ಕರಿಯಜನುಮವ ಪಡೆದು ನೀನವ|
ತರಿಸಲಂದಿನ ಕಾಲಕಂನಿಜ ಮಕ್ಕು ಮಾನುಡಿಯು || ೧೭ ||
ಸ್ಮರನವೈರಿಯು ನಿನಗೆ ಮುಕ್ತಿಯನಿರದೆ ಕೊಡುವನು ಕೇಳೆನುತೊರೆದು|
ಸುರಪುರೋಹಿತನಮರನಗರಿಗೆ ತೆರಳೆಬಳಿಕಿ||
ಧರಣಿಪಾಲಕ ನಾಡನಾಳು | ತ್ತಿರೆ ಕೃಪಾನ್ವಿತನಾಗಿ ಮಾರ್ಗದೆ |
ಪೊರಮಡುತ್ತಿರಲೊಮ್ಮೆ ನಾರದಮುನಿಯು ನೋಡಿದನು || ೧೮ ||
ನಿರುಕಿಸುತ್ತಂ ಗಣನೆಮಾಡದೆ| ತೆರಳೆ ನರಪನು ಮುನಿಯು ಕೋಪಿಸಿ|
ದೊರೆಯೆಗರ್ವದೆ ನಡದೆಯದರಿಂ ನೀನು ಕರಿಯಾಗು||
ಮರಳಿ ಜನ್ಮಾಂತರದೊಳುದಿಸುವೆ| ವರಗಜಾಸುರನೆಂದು ಮೆರೆಯುವೆ|
ಭರದೊಳಾಗಲೆ ಶಿವನಿವಾಸಸ್ಥಾನ ಮಹುದೆಂದು || ೧೯ ||
ಮುನಿಯುಶಾಪವ ನಿತ್ತು ನಡೆಯ | ಲ್ಕನಿತರೊಳಗೆ ಮಹೇಶರಾಜನು |
ನೆನೆದು ಜೀವನ (1) ದೇವಮುನಿಯಾ ನುಡಿಗೆಬೆರಗಾದ ||
ದಿನವು ಕಳೆಯಲು ಬಳಿಕ ಮರಣವ| ಜನಪನೊಂದಿಯ ಬನದಬಳಿಯೊಳ್ |
ಜನುಮವಾಂತನು ಪಿಡಿಯ (2)ಬಸಿರೊಳು ಕಂದಕೇಳೆಂದ || ೨೦ ||
ಕರಿಯರೂಪವತಾಳು ಮೊಗದೊಳು| ಧರಿಸಿ ಮಾನುಷರೂಪ ಮುಳಿದೆಡೆ |
ಸುರನರೋರಗರಲ್ಲಿ ತನಗೆಣೆಯಿಲ್ಲ ಮೆರನೆಮೆರೆದು ||
ತಿರುಗುತೊರ್ಮಯೆನತ್ತು ಗುಡಿಯನು ಮುರಿದನರಿದುಂನೆನೆಯುತಿರ್ದನು|
ಗುರುವ ಮಾತನು ಮನ್ನ ನಿಂತುಂನಾಗದೈತ್ಯ || ೨೧ ||
(1) ಬೃಹಸ್ಪತಿ (2) ಹೆಣ್ಣಾನೆ