ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾ ಟಕ ಕಾನ್ಸ್ ಕಲಾನಿಧಿ, ಕುಶಲವೇ ನಳನ್ನ ಪತಿ ಬಾರೆ ! ಶಶಿಕುಲೋದ್ಭವ ನಿನ್ನ ಪಿತನಿ | ವಸುಧಿಗಧಿಪತಿ ವೀರಸೇನನು ಪರಮಸಖನೆಮಗೆ | ಒಸೆದು ಬೇಡುವ ಕಾರವಿದು ಭರ | ವಸದಿ ಬಂದೆವು ನಮಗೆ ಫಲಸಿ | ದ್ಧಿಸಿದುದುಪಕಾರಾರ್ಥ ನಿನ್ನಿಂದಾಗಬೇಕೆಂದ | ಕರಿಗಮನ ಚಿತ್ತವಿಸು ನಾವೇ ! ನರರು ನಿಮಗಂತರವೆ ಸಾಕಂತಿ | ರಲಿ ನಿಮ್ಮ ಸದಾ ದರುಶನವಾಯಿತಿಂದಿನಲಿ | ಹರುಷದಿಂದೆನಗೇನು ಬುದ್ದಿಯ | ಕರುಣಿಸುವಿರದ ನಾಳೆನೆನೆ ಶಚಿ ! ಯರಸನಾನುಡಿಗೆ ನಗುತಿಂತೆಂದನಾತ್ಪಪಗೆ | ಭೂತಳದೊಳಿಪ ಸತಿಯರಲಿ ರೂ ! ಪಾತಿಶಯ ದಮಯಂತಿಯೆನಲಾ | ಮಾತಿನಲಿ ಮನವೊಲಿದುದವಳಲ್ಲಿ ನೀ ಪೋಗಿ || ಆತಳೆದರಿಗುಚಿತವಚನ | ಪ್ರೀತಿಪೂರ್ವಕದಿಂದ ಸತಿಯಳ | ನೀ ತಿಳುಹಿಯನುಕೂಲವನು ಮಾಡೆಂದನನರೇಂದ) | - ಈತ ವಿತ್ತ ಪತಿಯಮರಸತಿ ತಾ | ನೀತ ವರುಣನು ವಾಯುವಿತನು | ಮಾತ ಮನ್ನಿಸು ಮಾಡು ತನಗುಪಕಾರವನು ನೀನು || ಈತಮಾಕ್ಷಣದೃಶ್ಯ ವರವನು | ಪ್ರೀತಿಯಿಂದೊಲಿದಿತ್ತೆ ಎಂದಿನೊ | ೪ಾತಳದರಿಯೊಲಿವ ಹದನನು ಮಾಡು ಹೋಗೆಂದ || ಕೇಳಿದಾಮಾತಿನಲಿ ಚಿಂತೆಯ ತಾಳಿದನು ಚಿತ್ರದಲಿ ನಳನೃಪ | ಲೋಲಲೋಚನೆ ತನ್ನನೇ ಪತಿಯೆಂದು ಬಯಸಿಹಳು |