ಪುಟ:ನಿರ್ಮಲೆ.djvu/೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫ ತಿ ನಿರ್ಮಲೆ ಅವನಮೇಲಿರುವ ಕಿಚ್ಚನ್ನು ತೀರಿಸಿಕೊಳ್ಳಲು ಇದೇ ತಕ್ಕುದಾದ ಸಮ ಯವು, ಆದರೆ, ನನ್ನ ಗತಿ ? ಗತಿಯೇನು ? ನನಗೇಕೆ ಹೆದರಿಕೆ ? ನನಗೆ ನನ್ನ ಆಸ್ತಿಯಮೇಲಿನ ಪೂರ್ಣಾಧಿಕಾರವು ಬರುವುದು, ಅದನ್ನು ತಪ್ಪಿಸಲು ಆ ಮುದಿಗೌಡ್ಡಿಗೆ ಸಾಮರ್ಥವಿರುವುದೇನೋ, ನೋಡುವೆ. [ಗೃಹಾಧ್ಯಕ್ಷರು, ರಾಮವರ್ಮ ಪ್ರಿಯಸೇನನೊಡನೆ ಬರುವನು] ರಾಮ:-ಇದೇನು ? ಇಂದು ಇಷ್ಟು ಗೋಳು ? ಪ್ರಯಾಣದ ಬೇಸರವನ್ನೂ ತೊಂದರೆಯನ್ನೂ ಎಷ್ಟು ಹೇಳಿದರೂ ತೀರದು, ಅಡ್ಡ ದಾರಿಯಲ್ಲಿ ಪ್ರಯಾಣಮಾಡಿದರೆ ನಲವತ್ತು ಮೈಲಿ ಇರುವುದೆಂದು ಹೇಳಿದರು. ಅರವತ್ತು ಮೈಲಿಗಿಂತ ಹೆಚ್ಚಾಗಿಯೇ ಅಲೆದಿರುವೆವು. ಪ್ರಿಯ:-.ಮಾತನಾಡಿದರೆ ಮುತ್ತು ಸುರಿವುದೆಂದು ಹೆದರುತ್ತ ಜನರ ಗುಂಪಿಗೆ ದೂರವಾಗಿರುವ ನಿನ್ನ ಈ ವಿಚಿತ್ರ ಸ್ವಭಾವದಿಂದ ಈ ದುರವ ಸ್ಥೆಯು ಪ್ರಾಪ್ತವಾಗಿದೆ. ದಾರಿಹೋಕರನ್ನು ಆಗಾಗ ವಿಚಾರಿಸಿಕೊಂಡು ಬಂದಿದ್ದರೆ, ನಾವು ಸರಿಯಾದ ದಾರಿಯಲ್ಲೇ ಇರುತ್ತಿದ್ದೆವು ! ರಾಮ:-ಮಾರ್ಗದಲ್ಲಿ ಕಂಡ ಕಂಡವರಿಂದ ಉಪಕಾರವನ್ನು ಪಡೆದು ಅವರಿಗೆಲ್ಲಾ ಕೃತಜ್ಞನಾಗಿರುವುದೂ ಅಲ್ಲದೆ, ಕೆಲವರಿಂದ ಅವಮರ್ಯಾದೆ 'ಕರವಾದ ಉತ್ತರವನ್ನೂ ಕೇಳುವುದು ನನಗೆ ಸತ್ಯವಾಗಿಯ ಹಿತವಲ್ಲದ ಕಾರ್ಯವು. ಪ್ರಿಯ:- ಈಗ ನಮ್ಮ ಪ್ರಶ್ನೆಗೆ ಉತ್ತರವನ್ನು ಕೊಡುವವರೇ ದಿಕ್ಕಿ ಲವಲ್ಲ ? ದುರ್ಮ:-ಸ್ವಾಮಿ ! ಅಸಮಾಧಾನಪಡಬೇಡಿರಿ ! ನೀ ವು ಈಪ್ರಾಂ ತದಲ್ಲಿ ದೇವದತ್ತನೆಂಬುವನು ಇರುವನೇ?” ಎಂಬದಾಗಿ ವಿಚಾರಿಸುತ್ತಿರುವಿರೆಂದು ಕೇಳಿದೆನು. 'ಈಗೆ ನೀವು ಎಲ್ಲಿರುವಿರಿ ?” ಎಂಬುದು ನಿಮಗೆಗೊತ್ತುಂಟೆ ? ಪ್ರಿಯ.- ನಮಗೆ ತಿಳಿಯದು. ದಯವಿಟ್ಟು ಹೇಳಿದರೆ, ಕೃತಜ್ಞ ರಾಗಿರುವೆವು.