ಪುಟ:ನಿರ್ಮಲೆ.djvu/೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ 12 ಇಲ್ಲಿಗೆ ಹೊರಟಿದ್ದು, ಇಂತಹ ಸಮಯವು ಇನ್ನು ದೊರೆಯಲಾರದೆಂದು ನಾನೂ ಅವನೊಡನೆ ಹೊರಟೆನು, ನಾವು ತಂದಿರುವ ಕುದುರೆಗಳ ದಣಿವು ಆರಿದೊಡನೆಯೇ, ನಾವಿಬ್ಬರೂ ಚ೦ದ್ರನಗರಿಗೆ ಹೋಗಿ ವಿವಾಹಿತರಾಗುವ ! ಅಲ್ಲಿ, ಗುಲಾಮರಲ್ಲಿಯೂ ವಿವಾಹಸಂಬಂಧವಾದ ನ್ಯಾಯನಿಯಮಗಳಿಗೆ ಗೌರವವುಂಟು. ಕಮ:--ನಾನು ನಿನ್ನ ಆಜ್ಞಾಧಾರಕಳೇ ಆದರೂ ನನ್ನ ಅಲ್ಪ ಮನವು ಐಶ್ವರ್ಯವನ್ನು ಬಿಟ್ಟು ಹೊರಡ, ಹಿಂದೆಗೆಯುತ್ತಿರುವುದು, ನನ್ನ ಐಶ್ವರ್ಯವೆಲ್ಲವೂ ಜವಾಹಿರಿಯ ರೂ 5ದಲ್ಲರುವದು, ಅದನ್ನು ಧರಿಸಲು ನಮ್ಮ ಅತ್ತೆಯ ಅನುಜ್ಞೆಯನ್ನು ಬೇಡುತ್ತಿರುವೆನು, ಅವಳು ಅನುಮತಿ ಯನ್ನು ಕೊಡುವ ಸಂಭವವೂ ಇರುವದು. ಆ ನಗಗಳೆಲ್ಲವನ್ನೂ ನನ್ನ ವಶಕ್ಕೆ ಕೊಟ್ರೊಡನೆಯೆ, ಅವೂ, ನಾನೂ, ಎಲ್ಲವೂ, ನಿನ್ನ ವೇ ! ಪ್ರಿಯ:-ನಿನ್ನ ಆ ಒಡವೆಗಳು ಹಾಳಾಗಲಿ, ನಾನು ನಿನ್ನ ನೈ ಪ್ರೀತಿಸುವುದು ಆ ನಗನಾಣ್ಯಗಳನ್ನಲ್ಲ, ನನಗೆ ಬೇಕಾದ ವಸ್ತುವು ನೀನೊಬ್ಬಳೇ ! ಈಗಲೇ ನಾವು ಇಲ್ಲಿನ ನಿಜಸ್ಥಿತಿಯನ್ನು ರಾಮವರ್ಮನಿಗೆ ತಿಳಿಸಬಾರದು, ನಮ್ಮ ಅಭಿಪ್ರಾಯವ ತಪ್ಪಾದರೆಂದು ಈಗಲೇ ಹೇಳಿ ಬಿಟ್ಟರೆ, ಅವನ ವಿಚಿತ್ರ ಸ್ವಭಾವಗಳನ್ನು ನಾನು ಒಲ್ಲೆನ-ನನ್ನ ಇಷ್ಟಾರ್ಥವು ಕೈಗೂಡುವುದರೊಳಗಾಗಿಯೇ, ಇಲ್ಲಿಂದ ಹೇಳುತಿ ಇಳದೆ, 4ರನು ಓಡಿ ಹೋಗುವನು. ಕಮ:- ಅವನಿಗೆ ತಿಳಿಯದಂತೆ ಈ ವಿಷಯ ವನ್ನು ಗೋಪ್ಯವಾಗಿ ಇಟ್ಟಿರುವುದು ಹೇಗೆ ? ಹೊರಗೆ ಸುತ್ತಾಡಲು ಹೋಗಿದ್ದ ನಿರಲೆಯು ಈಗ ತಾನೆ ಬಂದಿರುವಳು, ನಾವು ರಾಮವರ್ಮಸಿಗೆ ಇನ್ನೂ ಸ್ವಲ್ಪ ಕಾಲ ಮೋಸಮಾಡಿದರೆ ಆಗುವುದಾದರೂ ಏನು? ಹೀಗೆ ಬಾ ! ಅಲ್ಲ ಯಾರೋ ಬರುತ್ತಿರುವರು.