ನಲ್ಲಿ ನಾನು ಮಾಡಿದ ಔದಾಸೀನ್ಯಕ್ಕೆ ಈಗ ಅವನು ತಕ್ಕ ಪ್ರತೀಕಾರವನ್ನು ಮಾಡಿದನು. ಇನ್ನಾವುದಕ್ಕೂ ನಾನು ಅಷ್ಟು ಚಿಂತಿಸಿ ಸಂತಾಪಪಡುವುದಿಲ್ಲ. ಮಾಧವನು ತನ್ನ ಪ್ರಾಣೋತ್ಕ್ರಮಣ ಕಾಲದಲ್ಲಿಯೂ ಕೂಡ, ನಿರ್ಘಣಳಾಗಿಯೂ ಪಾಪಿನಿಯಾಗಿಯೂ ಇರುವ ನನ್ನನ್ನು ಸ್ಮರಿಸಿಕೊಂಡು, ನಾನು ಅವನಿಗೆ ಮಾಡಿದ ತಿರಸ್ಕಾರವನ್ನು ಮನಸ್ಸಿನಲ್ಲಿಡದೆ, ಈ ದ್ರವ್ಯವನ್ನು ನಿನ್ನ ಮೂಲಕ ಕಳುಹಿಸಿರುವುದೇ, ನನಗೆ ಮರ್ಮೋದ್ಘಾಟನೆ ಮಾಡಿದಂತೆ ದುಸ್ಸಹವಾದ ಸಂತಾಪವನ್ನುಂಟು ಮಾಡುತಿರುವುದು. ಅಯ್ಯಾ ! ಪರಂತಪ ! ನನಗೆ ದ್ರವ್ಯದ ಮೇಲೆ ಸ್ವಲ್ಪವೂ ಅಪೇಕ್ಷೆಯಿಲ್ಲ. ಯಾವ ಸಂಪತ್ತೂ ನನಗೆ ಬೇಕಾಗಿಲ್ಲ. ಆ ದುರಾತ್ಮನಾದ ಶಂಬರನಿಗೆ ಅಧೀನಳಾಗದ ಹಾಗಾದರೆ, ಅದೇ ಸಾಕು. ಸೇವಾವೃತ್ತಿಯಿಂದಲಾದರೂ ಜೀವಿಸುತ್ತ ಕಾಲವನ್ನು ಕಳೆಯುವೆನು. ನನ್ನ ಆಯಃಪರಿಮಾಣ ಮುಗಿಯುವವರೆಗೂ ಮಾಧವನಿಗೆ ದ್ರೋಹ ಮಾಡಿದೆನೆಂಬ ಅನುತಾಪವು ನನಗೆ ಹೋಗತಕ್ಕುದಲ್ಲ. ಮಾಧವನು ನನಗೋಸ್ಕರ ಕೊಟ್ಟಿರ ತಕ್ಕ ದ್ರವ್ಯವನ್ನು ನಿನ್ನ ಶ್ರಮಕ್ಕೆ ಪ್ರತಿಫಲವನ್ನಾಗಿ ಮಾಡಿಕೊಂಡು, ನನಗೆ ಈ ಬಂಧಮೋಚನವನ್ನು ಮಾಡಿದರೆ, ನಾನು ನಿನಗೆ ಮರಣಾಂತವಾಗಿ ಕೃತಜ್ಞಳಾಗಿರುವೆನು.
ಪರಂತಪ-ಪ್ರತಿಫಲವನ್ನಪೇಕ್ಷಿಸದೆ ಪರೋಪಕಾರವನ್ನು ಮಾಡುವುದೇ ಧರ್ಮವು. ಹೀಗಿರುವಲ್ಲಿ, ನಾನು ದೃವ್ಯಾರ್ಥಿಯಾಗಿ ಎಂದಿಗೂ ಉಪಕಾರ ಮಾಡತಕ್ಕವನಲ್ಲ. ಮಾಧವನು ಕೊಟ್ಟಿರುವ ದ್ರವ್ಯವು ನಿನ್ನದಾಗಿದೆ. ಈ ದ್ರವ್ಯ ಸಹಾಯದಿಂದಲೇ ಬಂಧಮೋಚನವನ್ನು ಮಾಡಿಕೊಳ್ಳಬೇಕೆಂಬ ಸಂಕಲ್ಪವು ನಿನಗಿದ್ದರೆ, ಅಂಥ ಧನಾಕಾಂಕ್ಷಿಗಳಾದ ಇತರರು ಯಾರನ್ನಾದರೂ ನೋಡಬಹುದು. ನನ್ನಿಂದಲೇ ಈ ಕಾರ್ಯವಾಗಬೇಕಾಗಿದ್ದರೆ, ನಾನು ಧರ್ಮಾರ್ಥವಾಗಿ ಮಾಡತಕ್ಕವನೇ ಹೊರತು, ಎಂದಿಗೂ ಪ್ರತಿ ಫಲವನ್ನಪೇಕ್ಷಿಸತಕ್ಕವನಲ್ಲ.
ಕಾಮಮೋಹಿನಿ-ಆರ್ಯನೇ! ನನ್ನ ಮಾತುಗಳಿಂದ ನಿನಗೆ ಕ್ರೋಧವುಂಟಾದಂತೆ ತೋರುವುದು. ನನ್ನ ಅಪರಾಧವನ್ನು ಕ್ಷಮಿಸು, ದುಃಖಾತಿಶಯದಿಂದ ನಾನು ಯುಕ್ತಾಯುಕ್ತ ವಿವೇಚನೆಯಿಲ್ಲದೆ ಆಡಿದ ಮಾತಿಗೆ ನೀನು ಕೋಪಿಸಿಕೊಂಡರೆ, ನಿನ್ನ ದಯಾಳುತ್ವವೇನಾಯಿತು ? ಅನಾಥಳಾಗಿ ಸಂಕ
ಪುಟ:ಪರಂತಪ ವಿಜಯ ೨.djvu/೪೪
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೩೪
ಪರಂತಪ ವಿಜಯ