ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

VIII, ವಿಜಯೋತ್ಸಾಹ ೭೭ ರೆಲ್ಲರೂ ಅಪ್ರತಿಭರಾಗಿ ಆತನಿಗೆ ದೈವ ಸಹಾಯವುಂಟೆಂದು ನಂಬಿದರು. ಇಸ್ಲಾಂ ಮತವು ರೂಢವಲವಾಗಿ ನೆಲೆಗೊಳ್ಳಲು ಅಲ್ಲಿಂದ ಮುಂದೆ ಅನುಕೂಲವಾಯಿತು. ಮಹಮ್ಮದೀಯರು ಶತ್ರು) ಮಂಡಲಿಯವರ ಸೊಕ್ಕನ್ನು ಮುರಿದುದರಿಂದ ಮಹಮ್ಮದನ ಪ್ರಾಬಲ್ಯವ ದಿನ ದಿನಕ್ಕೆ ಹೆಚ್ಚುತ್ತ ಬಂದಿತು ; ಅವನ ಆಧಿಪತ್ಯಕ್ಕೆ ಹೊಸ ಹೊಸ ಪ್ರದೇಶಗಳು ಸೇರುತ್ತ ಬಂದುದರಿಂದ ಅವನ ರಾಷ್ಟ್ರವೂ ಹೆಚ್ಚು ವಿಸ್ತಾರವಾಯಿತು ; ಹೊಸಬರನೇಕರು ಇಸ್ಲಾಂ ಮತವನ್ನವಲಂಬಿಸಿದುದರಿಂದ ಅವನ ಮತವು ಅಭಿವೃದ್ಧಿಗೊಂಡಿತು.