ಪುಟ:ಪೈಗಂಬರ ಮಹಮ್ಮದನು.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

IX, ಮಕ್ಕಾ ನಗರಕ್ಕೆ ಪ್ರಯಾಣ ೮೫ ವುದೋ ಎಂದು ಮಕ್ಕಾ ನಗರದಲ್ಲಿದ್ದ ಶತ್ತು) ಪಕ್ಷದವರಿಗೆ ಭೀತಿಯು ತಲೆದೋರಿತು. ಇದರಿಂದ, ಮಕ್ಕಾ ನಗರದ ಯಾವ ಮಹಮ್ಮದೀಯ ನಾದರೂ ಮದೀನಾ ನಗರಕ್ಕೆ ಹೋಗಿ ನೆಲೆಸಲು ಅವಕಾಶವಿರುವಂತೆ ಶತ್ರು ಪಕ್ಷದವರು ತಾವಾಗಿಯೇ ಒಪ್ಪಂದದ ಷರತ್ತುಗಳನ್ನ ಮಾರ್ಪಡಿಸಿದರು. ಮಹಮ್ಮದನು ತಾಳ್ಮೆಯಿಂದಿದ್ದು ತನಗೆ ಪ್ರತಿಕೂಲವಾಗಿದ್ದ ಷರತ್ತುಗಳಿಗೂ ಒಪ್ಪಿದುದರ ದೆಸೆಯಿಂದ ಪರಿಣಾಮದಲ್ಲಿ ಸಲವೇ ಉಂಟಾಯಿತು. ಮಹಮ್ಮದನು ತನಗೆ ಸ್ವಲ್ಪವೂ ಒಪ್ಪಂದದ ಪರಿಣಾಮ ಫಲ ಅನುಕೂಲವಲ್ಲದ ಷರತ್ತುಗಳಿಗೂ ಒಪ್ಪಿಕೊಂಡು ತಾನು ಮೆದೀನಾ ನಗರಕ್ಕೆ ಹೋದಮೇಲೆ ಕೂಡ ಸ್ವಸ್ಥಾನದಲ್ಲಿ ಮತ್ತೆ ಬಲಶಾಲಿಯಾಗಿ ಕುಳಿತಮೇಲೆ ಕೂಡ ಅವ್ರ ಗಳನ್ನು ತಪ್ಪದೆ ಪ್ರತಿಪಾಲಿಸಿದುದನ್ನು ಕಂಡು, ಅವನು ಸತ್ಯಸಂಧ ನೆಂಬ ಅಭಿಪ್ರಾಯವು ಜನರಲ್ಲಿ ದೃಢಗೊಂಡಿತು. ಮಹಮ್ಮದನು ಬಹಳ ಹಿಂದಣಿಂದಲೂ ನಡೆದುಬಂದಿದ್ದ ಮತ ಸಂಪ್ರದಾಯಗಳಿಗೆ ವಿರುದ್ಧ ವಾದ ಚಳವಳವನ್ನೆಬ್ಬಿಸಿದ ಪಾಷಂಡನೆಂದು ಅಭಿಪ್ರಾಯಪಟ್ಟಿದವರು ಕೂಡ ಅವನ ಸದ್ಗುಣಗಳನ್ನು ಪ್ರತ್ಯಕ್ಷವಾಗಿ ತಿಳಿಯಲು ಅವನ ಈ ಪ್ರಯಾಣದಿಂದ ಅವಕಾಶ ದೊರೆಯಿತು. ಯಾವ ಅರಬ್ಬಿಯವರು, ಇಸ್ಲಾಂ ಮತವೂ ಹೊಸದೆಂಬ ಕಾರಣದಿಂದ ಅದನ್ನು ದ್ವೇಷಿಸಿ, ಮಹಮ್ಮದನನ್ನು ಕೊಲ್ಲಲು ಸಿದ್ದರಾಗಿದ್ದರೋ ಅದೇ ಅರಬ್ಬಿಯವರಲ್ಲಿ ಅನೇಕರು ಅದರ ಉದಾತ್ತ ತತ್ವಗಳನ್ನರಿತು ಬದ್ದಾದರರಾಗಿ ಆ ಮತ ನನ್ನವಲಂಬಿಸಿ ಮಹಮ್ಮದನ ಪ್ರಿಯ ಶಿಷ್ಯರಾದರು. ಸುಮಾರು ಒಂದೂ ವರೆ ವರುಷದ ಮೇಲೆ ಮಹಮ್ಮದನು ಮತ್ತೆ ಮಕ್ಕಾ ನಗರಕ್ಕೆ ಹೊರಡುವ ವೇಳೆಗೆ, ಮೊದಲಣ ಸಾವಿರದ ನಾನ್ನೂರು ಮಂದಿ ಮಹಮ್ಮ ದೀಯರಿಗೆ ಬದಲಾಗಿ ಹತ್ತು ಸಾವಿರ ಮಂದಿ ಮಹಮ್ಮದೀಯರು ಅವನ ಹಿಂದೆ ಹೋಗುವಂತಾಯಿತು. ಶತು) ವರ್ಗಕ್ಕೆ ಸೇರಿದ್ದ ವೀರಾ ಗಣಿಗಳಾದ ಕಾದಿರ್ ಮುಂತಾದವರು ಕೂಡ ಅವನ ಶಿಷ್ಯರಾದರೆಂದ ಮೇಲೆ ಮಹಮ್ಮದನ ಆನಂದಕ್ಕೆ ಪಾರವುಂಟೆ ?