ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮ ೫ ಸ್ವದೇಶಾಭಿಮಾನ, ಉನ್ನತಸ್ಥಿತಿಗೆ ಬಂದುವು. ಹಿಂದೂದೇಶದಲ್ಲಿಯೂ ಪೂರ್ವದಲ್ಲಿ ರಾಜಪುತ್ರರೂ ಮರಾಟೆಯವರೂ ಸ್ವದೇಶಕ್ಕಾಗಿ ಪ್ರಾಣಗಳನ್ನು ಒಪ್ಪಿಸಿರುವರು. ಈಗಿನ ಕಾಲದಲ್ಲಿ ಇಂಗ್ಲೆಂಡ್, ಸ್ವಿಡ್ವರ್ಲೆಂಡ್, ಜಪಾನ್ ದೇಶಗಳ ಜನರು ಸ್ವದೇಶಾಭಿಮಾನಕ್ಕೆ ಪ್ರಸಿದ್ಧರು. ಜಪಾನ್ ದೇಶದ ಪ್ರತಿಯೊಬ್ಬ ಪುರುಷನೂ ಸ್ತ್ರೀಯ ಸ್ವದೇಶಕ್ಕಾಗಿ ಪ್ರಾಣಕೊಡಲು ಸಿದ್ಧರಾಗಿರುವರು. ಕೆಲವು ವರ್ಷಗಳ ಕೆಳಗೆ ಜಪಾನಿಗೂ ರಷ್ಯಾ ಕ್ಕೂ ನಡೆದ ಯುದ್ಧದಲ್ಲಿ ಲಕ್ಷಾಂತರ ಜಪಾನ್ ದೇಶೀಯರು ಹೊಡೆದಾಡಿ ಪ್ರಾಣಗಳನ್ನೂ ಪ್ಪಿಸಿದ್ದ. ರಿಂದಲೇ ಅವರ ಕಡೆ ಅದ್ಭುತವಾದ ಜಯವಂಟಾಯಿತು ಆ ಯುದ್ಧದಲ್ಲಿ ಮನೆಮನೆಗೂ ಒಬ್ಬರಿಗೂ ಕಡಮೆಯಿಲ್ಲದೆ ಕಾಳಗಕ್ಕೆ ತಾವಾಗಿಯೇ ನುಗ್ಗಿದರು. ಒಂದು ಮನೆಯಲ್ಲಿ ತಾಯಿಗೆ ಒಬ್ಬನೇ ಮಗನಿದ್ದನು. ಎಲ್ಲರಂತೆ ತಾನೂ ಯುದ್ಧ ಸನ್ನದ ನಾಗಿದ್ದರೂ, ಆತನು ತನ್ನ ತಾಯನ್ನು ದಿಕ್ಕಿಲ್ಲ ಬಿಟ್ಟು ಹೋಗಲಾರದೆ ಚಿಂತಿಸುತಿದ ನು ಇದನರಿತು ಆತನ ತಾಯಿ ನಿನ್ನ ದೇಶವು ನನಗಿಂತ ಹೆಚ್ಚು ಪ್ರೀತಿಗೆ ಪಾತ್ರವಾದುದು. ಅದಕ್ಕೆ ಮಹಾ ವಿಪತ್ತು ಬಂದಿರುವಲ್ಲಿ ನಿನ್ನ ಕರ್ತವ್ಯವನ್ನು ಮಾಡದೆ ಹಿಮ್ಮೆಟ್ಟಕೂಡದು. ಎಂದು ಹೇಳುತ್ತಾ ತನ್ನ ಪ್ರಾಣವನ್ನು ಕಳೆದುಕೊಂಡು, ಮಗನು ಯುದಕ್ಕೆ ಹೋಗಲು ಅನುಕೂಲ ಮಾಡಿಕೊಟ್ಟಳು. - ಸ್ವದೇಶಾಭಿಮಾನವನ್ನು ತೋರಿಸಲು ಎಲ್ಲರೂ ಸಿಪಾಯಿಗಳಾಗಿ ಪ್ರಾಣಬಿಡಬೇಕಾದುದಿಲ್ಲ. ಸ್ವದೇಶಾಭಿಮಾನವು ಎಂಥ ಕೆಲಸ ಮಾಡುವನಲ್ಲಾ. ದರೂ ಇರಬಹುದು. ಯಾರು ತನ್ನ ದೇಶಕ್ಕೆ ಕೆಟ್ಟ ಹೆಸರು ಬಾರದೆ ಎಚ್ಚರಿಕೆಯಾಗಿರುವನೋ, ಯಾರು ತನ್ನ ಕಾವ್ಯಗಳಿಂದ ತನ್ನ ದೇಶಕ್ಕೆ ಗೌರವವೂ ಯಶಸ್ಫೂ ಒರುವಂತೆ ನಡೆದುಕೊಳ್ಳುವನೋ ಅವನು ಸ್ವದೇಶಾಭಿಮಾನವುಳ್ಳವನು. ಸ್ವದೇಶಾಭಿಮಾನಿಯು ಎಷ್ಟೇ ಕೀಳುತರದ ಕೆಲಸ ಮಾಡುತ್ತಿರಲಿ, ಅದನ್ನು ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿ ಚೆನ್ನಾಗಿ ಮಾಡುವನು. ಎಂದಿಗೂ ಸನ್ಮಾರ್ಗವನ್ನು ಬಿಟ್ಟು ಹೋಗನು.ಸ್ವದೇಶೀಯರನ್ನು ತನ್ನ ಸಹೋ ದರರಂತೆ ಪ್ರೀತಿಸುವನು. ತನ್ನ ಒಳ್ಳೆಯ ನಡತೆಯಿಂದ ಎಲ್ಲರಿಗೂ ಮೇಲ್ಪ. “ಯಾಗಿರುವನು. ಇತರರಲ್ಲಿ ಕಂಡುಬರುವ ದೋಷಗಳನ್ನು ತಿದ್ದುವುದಕ್ಕೆ ಪ್ರಯತ್ನಿ ಸುವನು. ಒಬ್ಬರಿಗೆ ಮೋಸಮಾಡಿ ಲಾಭ ಸಂಪಾದಿಸನು.