ಪುಟ:ಪ್ರಬಂಧಮಂಜರಿ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ಪ್ರಬಂಧಮಂಜ-ಎರಡನೆಯ ಭಾಗ ವುದು, ದೇವರ ಧ್ಯಾನ ಮುಂತಾದ ಸತ್ಕಾರ್ಯಗಳು, ಮತ್ತಾವ ಕೆಲಸವೂ ಇಲ್ಲದ ಕಾಲದಲ್ಲಿ ಪರಮಾಪ್ತನೂ ಸದ್ಗುಣಿಯೂ ಆದ ಮಿತ್ರನೊಡನೆಮಾತು ನಾಡುವುದು ಬಹೂಪಯೋಗಕಾರಿಯು, ತನಗೆ ಉಪಯುಕ್ತವೂ ಇತರರಿಗೆ ಅಬಾಧಕವೂ ಆಗಿರುವ ಅ೦ಗಸಾಧನೆಯ ಆಟಗಳಲ್ಲಿ ಕಾಲವನ್ನು ಕಳೆಯುವುದೂ ಸರಿಯೆ, ಇಸ್ಪೇಟು ಮುಂತಾದ ಆಟಗಳಲ್ಲಿಯೇ ದಿನಕ್ಕೆ ಹತ್ತು ಹನ್ನೆ - ರಡು ಘಂಟೆಗಳನ್ನು ಕೆಲವರು ಕಳೆವುದುಂಟು. ಇವುಗಳಿಂದ ಇತರರಿಗೆಬಾಧೆ ಯೇನೂ ಆಗುವುದಿಲ್ಲವಾದರೂ ಯಾರಿಗೂ ಪ್ರಯೋಜನವೇನೂ ಇಲ್ಲ. ಇಂಥ ಆಟವಾಡುವವರು ಯಾವ ಕೆಲಸಮಾಡುವುದಕ್ಕೂ ವಿರಾಮವಿಲ್ಲ ಎಂದು ಪೇಚಾಡಿದರೆ ತಿಳಿದವರು ಇದನ್ನು ಕೇಳಿ ಹಾಸ್ಯ ಮಾಡಲಾರರೆ ? ನಾಟಕವನ್ನು ನೋಡುವುದೇನೋ ಒಳ್ಳೇದೆ; ಆದರೆ ಈಗಿನ ನಾಟಕಗಳು ಉದ್ದೇಶಕ್ಕನುಸಾರವಾಗಿ ನಡೆಯದಿರು ವುದರಿಂದ ನಾಟಕ ನೋಡುವು ದೂ ಈಗ ವೃಥಾ ಕಾಲಹರಣಕ್ಕೆ ಸೇರುವುದು. ಸೋಮಾರಿತನದಲ್ಲಿ ಎಂದಿಗೂ ಕಾಲಹರಣ ಮಾಡಬಾರದು. ಯಾವ ಒಳ್ಳೆಯ ಕೆಲಸವನ್ನೂ ಮಾಡದೆ ಸೋಮಾರಿಯಾಗಿ ಸುಮ್ಮನೆ ಕುಳಿತಿದ್ದರೆ, ಕೆಟ್ಟ ಕೆಲಸ ಮಾಡುವುದಕ್ಕೆ ಬುದ್ದಿಯುಂಟಾಗುವುದು ಮನುಷ್ಯನಿಗೆಸ್ವಭಾವ ಸಿದ್ದವು. ಆದುದರಿಂದ ಪ್ರತಿದಿನವೂ ತಂತಮ್ಮ ಕೆಲಸಗಳನ್ನು ತಾವು ಬಿಡದೆ ನೆರವೇರಿಸುತ್ತಿರಬೇಕು. ಮೇಲೆ ಹೇಳಿದ ಎಲ್ಲಾ ವಿಧಗಳಿಗಿಂತ ಜ್ಞಾನವನ್ನು ಸಂಪಾದಿಸಿಕೊಳ್ಳುವುದು ಅತ್ಯುತ್ತಮ. ಪ್ರಸಿದ್ದರಾದಹಲವು ಕವಿಗಳಗ್ರಂಥ ಗಳೂ ಶಾಸ್ತ್ರಗಳೂ ಹೇರಳವಾಗಿರುವುವು. ಇವಕ್ಕೆ ಪಾರವೇ ಇಲ್ಲ. ಇವು ಗಳನ್ನೋದಿಜ್ಞಾನವನ್ನು ಜೀವಮಾನದ ಕೊನೆವರೆಗೂಹೆಚ್ಚಿಸುತ್ತ ಬರಬೇಕು 30. ಕಸಬುಗಳಲ್ಲಿ ಆವುದನ್ನು ಆಶ್ರಯಿಸಿಕೊಳ್ಳಬೇಕು? | ಯಾವ ಕಸಬಿನಲ್ಲಿ ತುಂಬಾ ಆದಾಯವಾಗಿ ನಾವು ಉನ್ನತಸ್ಥಿತಿಗೆ ಬರಬಹುದೋ ಅಂಥ ಕಸಬನ್ನು ಆರಿಸಿಕೊಳ್ಳಬೇಕು. ನಮ್ಮ ಏಳಿಗೆಗೆ ಅನುಕೂಲವಾದ ಕಸಬನ್ನು ಹೇಗೆ ಕಂಡುಹಿಡಿವುದು ? ಸಿಕ್ಕಿದುದನ್ನು ಅವಲಂಬಿ. ಸಿದರೆ ನಮ್ಮ ಉದ್ದೇಶವು ನೆರವೇರುವುದೆ? ಎಂದಿಗೂ ಇಲ್ಲ. ಯಾವುದಾದರೂ ಒಂದು ಕಸಬನ್ನು ಅವಲಂಬಿಸುವುದಕ್ಕೆ ಮೊದಲು ಬಹಳ ಆಲೋಚಿ