೧೦೧ ಕಸಬುಗಳಲ್ಲಿ ಆವುದನ್ನು ಆಶ್ರಯಿಸಬೇಕು? ಸಬೇಕು. ದೇಶಕಾಲಗಳನ್ನು ಪರ್ಯಾಲೋಚಿಸಿ ಯಾವ ಕಸಬಿನಲ್ಲಿ ನಮ್ಮ ಬುದ್ದಿ ಕೌಶಲ್ಯವು ಓಡುವುದೋ ಅಂಥದನ್ನು ಹಿಡಿಯುವುದು. ಆದುದರಿಂದ ತಾಯ್ತಂದೆಗಳು ಕಸಬುಗಳಿಗೆ ಬೇಕಾದ ವಿದ್ಯೆಗಳನ್ನು ತಮ್ಮ ಮಕ್ಕಳಿಗೆ ಕಲಿಸುವುದರಲ್ಲಿ ಬಲು ಎಚ್ಚರಿಕೆಯಿಂದಿರಬೇಕು. ತಾವು ಅವಲಂಬಿಸಿರುವ ಅಥವಾ ತಾವು ಒಡಂಬಟ್ಟಿರುವ ಕಸಬನ್ನೇ ತಮ್ಮ ಮಕ್ಕಳೂ ಹೊಂದಬೇಕೆಂದು ಅವರನ್ನು ಬಲಾತ್ಕರಿಸುವುದು ಅನುಚಿತವು. ಒಂದುವೇಳೆತಂದೆಯ ಕಸಬು ಮಗನಿಗೆ ಒಂಟಿದರೆ ಸರಿ, ಇಲ್ಲದಿದ್ದರೆ ಗತಿಯೇನು? ಕಲಿಸಿದ ವಿದ್ಯೆ ವ್ಯರ್ಥವಾಗುವುದಲ್ಲದೆ ಮಗನ ಪಾಡು ಕೆಟ್ಟು ಹೋಗುವುದು.ಆದುದರಿಂದ ಮಗನಿಗೆ ಯಾವ ಕಸಬಿನಲ್ಲಿ ಅಭಿರುಚಿಯಿದೆಯೋ ಅದನ್ನು ಕಂಡುಕೊಂಡು, ಅವನನ್ನು ಅದಕ್ಕೆ ಬಿಟ್ಟು, ಅದರಲ್ಲಿ ಮುಂದಕ್ಕೆ ಬರುವುದಕ್ಕೆ ತಕ್ಕ ಒತ್ತಾಸೆ ಕೊಡಬೇಕು, ಮೇಲಣ ವಿಧಿಯನ್ನು ಇಂಗ್ಲೆಂಡಿನಲ್ಲಿ ತಾಯ್ತಂದೆಗಳೆಲ್ಲ ಅನುಸರಿಸುವರು. ತಮ್ಮ ಮಕ್ಕಳಿಗೆ ತಕ್ಕ ಕಸಬನ್ನು ಆರಿಸಿಕೊಡುವುದು ಬಹಳ ಕಷ್ಟವಾದ ಕೆಲಸವೆಂಬುದು ಅವರಿಗೆ ಚೆನ್ನಾಗಿ ಗೊತ್ತುಂಟು, ಆದುದರಿಂದಲೇ ಅವರು ತಮ್ಮ ಮಕ್ಕಳ ಬುದ್ದಿ ಚಾತುರ್ಯಾದಿಗಳನ್ನು ಪರೀಕ್ಷಿಸಿತಕ್ಕಂತೆಕಸಬು ಗಳನ್ನು ತೋರಿಸಿಕೊಡುವವಾಡಿಕೆಯನ್ನಿಟ್ಟುಕೊಂಡಿದ್ದಾರೆ.ಬಹುಕಾಲದಿಂದ ಲೂ ಹೀಗೆ ನಡೆದುಕೊಂಡು ಬಂದಿರುವುದರಿಂದಲೇ ಇಂಗ್ಲಿಷರುಹಿಡಿದಕಸಬುಗಳಲ್ಲಿ ಬಹಳ ಏಳಿಗೆಗೆ ಬಂದು, ಎಲ್ಲರೂ ಬಲು ಸಿರಿವಂತರಾಗಿರುವರು. ಆದರೆ ಹಿಂದೂದೇಶದಲ್ಲಿ ಜನರನ್ನು ವರ್ಣಗಳಾಗಿ ವಿಂಗಡಿಸಿ ಇಂಥವರ್ಣದವರು ಈ ಕೆಲಸವನ್ನೇ ಮಾಡಬೇಕು ಎಂದು ಗೊತ್ತು ಮಾಡಿರುವುದರಿಂದ, ಇಂಗ್ಲಿಷರಂತೆ ನಮ್ಮಲ್ಲಿಕಸಬುಗಳ ವಿಚಾರದಲ್ಲಿ ಆಲೋಚನೆಯ ತೊಂದರೆ ಯೆ ಚಿರಕಾಲದಿಂದಲೂ ಇಲ್ಲ. ಆದರೂ ಈಚೆಗೆ ಇಂಡಿಯಾದಲ್ಲಿಯೂ ವಿದ್ಯಾವಂತರು ತಮ್ಮ ತಂದೆಗಳು ಮಾಡುತ್ತಿದ್ದ ಕೆಲಸವನ್ನೇ ಮಾಡದೆ ಹೊಸದಾಗಿ ಬೇಕಾದ ಕಸಬನ್ನು ಆರಿಸಿಕೊಳ್ಳಲು ಅವಕಾಶವುಂಟಾಗಿದೆ. ಕಸಬುಗಳಲ್ಲಿ ಹಲವು ಬಗೆಗಳುಂಟು. ಸ್ವತಂತ್ರವಾಗಿ ಜೀವಿಸಬೇಕೆಂದಿರುವವರು ವ್ಯವಸಾಯ, ಕೈಗಾರಿಕೆ, ಇವುಗಳನ್ನನುಸರಿಸಬಹುದು;ಅಥವಾ
ಪುಟ:ಪ್ರಬಂಧಮಂಜರಿ.djvu/೧೧೯
ಗೋಚರ