ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ಪ್ರಬಂಧಮಂಜರಿ-ಎರಡನೆಯ ಭಾಗ ಲಾಯರುಗಳೂ ವರ್ತಕರೂ ಆಗಬಹುದು. ಲೋಕವ್ಯವಹಾರಜ್ಞಾನವೂ ವಾಲ್ಪಟುತ್ವವೂ ಹೆಚ್ಚಾಗಿರುವವರು ಲಾಯರುಗಳಾಗುವುದು ಒಳ್ಳೆಯದು, ಸ್ವತಂತ್ರ ಜೀವನಗಳಲ್ಲೆಲ್ಲಾ ವ್ಯಾಪಾರಜೀವನಕ್ಕೆ ಸಮಾನವಾವುದೂ ಇಲ್ಲ, ಇದಕ್ಕೆ ಇಂಗ್ಲೆಂಡ್ ಜಪಾನ್ ದೇಶಗಳ ಜನರೇ ದೃಷ್ಟಾಂತ, ಸೇವಾವೃತ್ತಿ ಒಗ್ಗ ತಕ್ಕವರು ಸರ್ಕಾರದ ಕೆಲಸಕ್ಕೆ ಸೇರಬಹುದು. ನಮ್ಮ ದೇಶದವರಿಗೆ ಇದು ಬಲು ಅನುಕೂಲವಾಗಿ ಕಂಡುಬಂದಂತೆ ತೋರುತ್ತಿದೆ. ಇದರಲ್ಲಿ ಬುದ್ದಿ ಶಾಲಿಗಳಿಗೂ ಮಢರಿಗೂ ಅವಕಾಶವುಂಟು. ಕಾಲಕ್ಕೆ ಸರಿಯಾಗಿ ಕೃಷ್ಣ ವಾದ ಸಂಬಳವೂ, ಸರ್ವಿಸ್ಟಾದ ಮೇಲೆ ಪೆನ್ಷನ್ನೂ ಸರ್ಕಾರದ ನೌಕರಿ. ಯಲ್ಲಿ ಆಸೆಯನ್ನುಂಟುಮಾಡುವುವು. ಇದರಲ್ಲಿ ಬಗೆಬಗೆಯ ಕಸಬಿನ ಹಲವು ಇಲಾಖೆಗಳಿವೆ. ಭಾಷಾಗ್ರಂಥಗಳಲ್ಲಿ ವಿಶೇಷ ಆಸಕ್ತಿಯ ಪರಿಶ್ರಮವೂ ಉಳ್ಳವರು, ಬೋಧನಾ ಶಕ್ತಿಯನ್ನೂ , ತಾಳ್ಮೆಯನ್ನೂ, ಹುಡುಗರನ್ನು ವಶ ದಲ್ಲಿಟ್ಟು ಕೊಳ್ಳುವ ಸಾಮರ್ಥವನ್ನೂ ಹೊಂದಿದ್ದರೆ, ವಿದ್ಯಾಭ್ಯಾಸದ ಇಲಾಖೆಗೆ ಸೇರಬಹುದು. ಕೈಕೆಲಸದಲ್ಲಿ ಚಮತ್ಕಾರವುಳ್ಳವರು ಇಂಜನಿಯ. ರಿಂಗ್ ಇಲಾಖೆಗೆ ಹೋಗಬೇಕು. ಹೆಚ್ಚಿನ ತಾಳ್ಮೆ ಯೂ, ಪರೋಪಕಾರಬುದ್ದಿ ಯೂ, ದಯೆಯೂ ಇರುವವರು ವೈದ್ಯರಾಗಬೇಕು, ಹೀಗೆ ಅವರವರ ಯೋಗ ತಾನುಸಾರ ಕಸಬುಗಳನ್ನಾರಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ವಿದ್ಯಾವಂತರು ಈ ರೀತಿ ನಡೆದುಕೊಳ್ಳದೆ ಎಲ್ಲರೂ ಸರ್ಕಾರದ ನಾಕರಿಗೆ ನುಗ್ಗುವುದರಿಂದ, ಎದೆ ಗೆ ತಕ್ಕ ಸಂಬಳ ದೊರೆಯದೆ ಅನೇಕರಿಗೆ ಜೀವನ ನಡೆವುದೇ ಕಷ್ಟವಾಗಿದೆ. ತಮಗೆ ಇದೇ ಸರಿಯೆಂದು ಜಂಭದಿಂದ ಇನ್ನಾವುದಕ್ಕೂ ಪ್ರವರ್ತಿಸುವುದಿಲ್ಲ ಹೀಗೆ ಒಂದೇ ಕಡೆ ಸೇರುವುದಕ್ಕಿಂತ ಲೂ ವ್ಯವಸಾಯ, ವ್ಯಾಪಾರ ಮೊದಲಾದುವುಗಳಿಗೆ ಹೊರಡುವುದು ಒಳ್ಳೆ ಯದು. ಇದರಿಂದ ತನಗೂ ಇತರರಿಗೂ ವಿಶೇಷವಾದ ಪ್ರಯೋಜನವುಂಟು. 31. ವೃತ್ತಾಂತ ಪತ್ರಿಕೆಗಳು ಚರಿತ್ರೆಯು ಆಯಾ ದೇಶದಲ್ಲಿ ನಡೆದ ಪೂರ್ವ ಕಾಲದ ವೃತ್ತಾಂತವನ್ನು ತಿಳಿಸುತ್ತದೆಯೆನ್ನು ವುದು ಎಲ್ಲರಿಗೂ ತಿಳಿದೇಯಿದೆಯಷ್ಟೆ. ಆದರೆ ವೃತ್ತಾಂತ ಪತ್ರಿಕೆಗಳಿಲ್ಲದಿದ್ದರೆ ನಮ್ಮ ಕಾಲದಲ್ಲಿ ಏನೇನು ನಡೆವುದೋ ನಮಗೆ ತಿಳಿಯ ತಿ