ರೈಲು, ೧೦೫ ರಾಜತಂತ್ರ ವಿಚಾರವನ್ನು ಚರ್ಚಿಸಲು ಅದರ ಎಡಿಟರಿಗೆ ಗಡೀಪಾರ್' ಮಾಡಿಸಿದರು. ಈಗ ಅಂಥ ಭಯವೇನೂ ಇಲ್ಲ. ಯಾವ ವಿಷಯದಲ್ಲಿ ಬೇಕಾದರೂ ನ್ಯಾಯವನ್ನ ತಿಕ್ರಮಿಸದೆ ಚರ್ಚಿಸುವ ಸ್ವಾತಂತ್ರವನ್ನು ಇಲ್ಲಿನ ಪತ್ರಿಕೆಗಳು ಕಾಲಕ್ರಮವಾಗಿ ಹೊಂದಿವೆ. ನಮ್ಮ ದೇಶವನ್ನು ಅನ್ಯದೇಶೀಯರು ಆಳುತ್ತಿರುವುದರಿಂದ ಪ್ರಭುಗಳ ವಿಷಯವನ್ನು ಪ್ರಜೆಗ. ಳಿಗೂ, ಪ್ರಜೆಗಳ ಸಂಗತಿಗಳನ್ನು ಪ್ರಭುಗಳಿಗೂ ತಿಳಿಯಪಡಿಸುವುದಕ್ಕೆ ವೃತ್ಕಾಂತಪತ್ರಿಕೆಗಳೆಂಬ ಮಧ್ಯಸ್ಥಗಾರರಿರುವುದು ಅತ್ಯಾವಶ್ಯಕವು. - 32, ರೈಲು, ರೈಲುಗಾಡಿ ಮೊಟ್ಟ ಮೊದಲು ಕಂಡುಹಿಡಿಯಲ್ಪಟ್ಟಾಗ ಈಗಿನಸ್ಥಿತಿಯ ಇರಲಿಲ್ಲ. ಜಾರ್ಜ್ ಸ್ಟೀವನ್ ಸನ್ ಎಲಬ ಸಾಹೇಬನು ನೀರಿನ ಆವಿಗೆ ಚಲನವನ್ನುಂಟುಮಾಡುವ ಶಕ್ತಿಯಿದೆಯೆಂಬುದನ್ನು ಕಂಡುಹಿಡಿದನು. ಈ ಅಂಶವನ್ನು ಪ್ರಯೋಗಿಸಿ ಜೇಮ್ಸ್ ವ್ಯಾಟ್ ಎಂಬುವನು 1765 ರಲ್ಲಿ ಎಂಜಿನನ್ನು ಮಾಡಿದನು. ಈಚೆಗೆ ಒಂದ ಶಾಸ್ತ್ರಜ್ಞರು ವ್ಯಾಟ್ ಮಾಡಿದ ಎಂಜಿ೩ ನಲ್ಲಿ ಹಲವು ವ್ಯತ್ಯಾಸಗಳನ್ನು ಮಾಡಿ ಅದನ್ನು ಈಗಿನ ಸ್ಥಿತಿಗೆ ತಂದಿ. ರುವರು. ರೈಲುಗಾಡಿ ಲೋಕಕ್ಕೆ ಮಾಡಿರುವ ಉಪಯೋಗಗಳು ಅಮೂಲ್ಯವಾದುವು. ನಮ್ಮ ದೇಶದಲ್ಲಿ ಈಗ ಮಾಡುವ ಪ್ರಯಾಣದ ರೀತಿಯನ್ನು ಪೂರ್ವಕಾಲದಲ್ಲಿ ಮಾಡಬೇಕಾಗಿದ್ದ ಪ್ರಯಾಣದ ರೀತಿಯೊಡನೆ ಹೋಲಿಸಿ ನೋಡಿದರೆ ಈ ಉಪಯೋಗಗಳು ವ್ಯಕ್ತವಾಗುವುವು. ಪೂರ್ವಕಾಲದಲ್ಲಿ ನಮ್ಮ ದೇಶದಲ್ಲಿ ಚಾಪೆಗಾಡಿಗಳಲ್ಲಿಯೂ, ಒಡ್ಡಬಂಡಿಗಳಲ್ಲಿಯೂ, ಎತ್ತು ಕುದುರೆಗಳ ಮೇಲೆಯೂ, ಕಾಲ್ಕಡೆಯಿಂದಲೂ ಊರಿಂದೂರಿಗೆ ಪ್ರಯಾಣಮಾಡಬೇಕಾಗಿದ್ದಿತು. ಈಗ ರೈಲಿನಮೂಲಕ ಒಂದೆರಡು ಘಂಟೆಗಳ ಕಾಲದಲ್ಲಿಯೇ ಆಗುವ ಪ್ರಯಾಣಕ್ಕೆ ಒಂದು ದಿನವೆಲ್ಲಾ ಹಿಡಿಯುತ್ತಿದ್ದಿತು. ಒಂದೆರಡು ದಿನಗಳಲ್ಲಿ ರೈಲಿನ ಮಾರ್ಗವಾಗಿ ಈಗ ಮುಗಿಸಬಹುದಾದ ದಾರಿಗೆ ಒಂದೆರಡು ತಿಂಗಳು ಬೇಕಾಗಿತ್ತು. ಹೀಗೆ ಕಾ ಲವಿಳಂಬವಾದರೂ ಆಗಲಿ, ಚಿಂತೆಯಿಲ್ಲ, ಎನ್ನ ಬಹುದು, ಆದರೆ ದಾರಿಯಲ್ಲಿ ಕಳ್ಳರಿಂದ ಮಾನಹಾನಿಯೂ, ಅರ್ಥಹಾನಿಯೂ, ಪ್ರಾಣಹಾನಿಯೂ ಉಂ
ಪುಟ:ಪ್ರಬಂಧಮಂಜರಿ.djvu/೧೨೩
ಗೋಚರ