ಪುಟ:ಪ್ರಬಂಧಮಂಜರಿ.djvu/೧೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦೭ ಪೋಸ್ಟಾಫೀಸುಗಳು, ಮಾಡಬೇಕಾಗಿ ಬರುವುದರಿಂದ, ತಾವು ಮೇಲು, ಅವರು ಕೀಳು ಎಂಬ ಅಭಿಪ್ರಾಯಗಳು ಹೋಗಿ ಜನರಲ್ಲಿ ಅನ್ಯೂನ್ಯಭಾವವುಂಟಾಗುವುದು. ಇಷ್ಟು ಉಪಯುಕ್ತವಾಗಿದ್ದರೂ ಹುಳುಕನ್ನೇ ಹುಡುಕುವ ಕೆಲವರು ರೈಲನ್ನು ನಿರಾಕರಿಸುವುದುಂಟು, ಅವರೆನ್ನು ವುದೇನಂದರೆ'-(ಸಾಮಾನ್ಯವಾಗಿ ರೈಲುಬಂಡಿ ಎಲ್ಲಿಯೂ ಬಹಳ ಹೊತ್ತು ನಿಲ್ಲುವುದಿಲ್ಲವಾದುದರಿಂದ ಜನರಿಗೆ ಊಟ ಮುಂತಾದುವುಗಳಿಗೆ ಅವಕಾಶವಿಲ್ಲದೆ ಬಲು ತೊಂದರೆಯಾಗುವುದು, ಇದರ ಅತಿವೇಗವೂ ಸಕೆಯೂ ಕೆಲವರಿಗೆ ಒಗು ವುದಿಲ್ಲ. ಅಂಟು. ರೋಗವು ಒಂದೆಡೆಯಿದ್ದರೆ, ರೈಲಿನಿಂದ ನಾಲ್ಕು ಕಡೆಗೂ ಹರಡುತ್ತದೆ, ಅಲ್ಲದೆ ರೈಲುದಾರಿಯಲ್ಲಿ ಆಗಾಗ್ಗೆ ಅಪಾಯಗಳು ಸಂಭವಿಸುವುದುಂಟು. ಈ ಮಾತುಗಳು ಸ್ವಲ್ಪ ಮಟ್ಟಿಗೆ ದಿಟವಾಗಿದ್ದರೂ, ರೈಲಿನ ದೋಷಗಳಿಗೂ ಅದರಿಂದಾಗುವ ಅಪಾರವಾದ ಪ್ರಯೋಜನಗಳಿಗೂ ಅಜಗಜಾಂತರವಿರುವುದು. ಮುಖ್ಯವಾಗಿ ರೈಲಿಗಿಂತಲೂ ಸುಖಕರವಾಗಿಯೂ, ಕಾಲದ್ರವ್ಯಗಳಲ್ಲಿ ಸ್ವಲ್ಪ ವೆಚ ವನ್ನು ಮಾಡುವುದಾಗಿಯ, ನಿರುಪಾಧಿಕವಾಗಿಯೂ ಇರುವ ಪ್ರ" ಯಾಣಸಹಕಾರಿಯಾದ ವಸ್ತು ವಿನ್ಯಾ ವುದೂ ಸದ್ಯದಲ್ಲಿ ದೊರೆಯಲಾರದು, 33. ಪೋಸ್ಟಾಫೀಸುಗಳು, ಒಂದೂರಿನಿಂದ ಮತ್ತೊಂದೂರಿಗೆ ಅತಿಸ್ವಲ್ಪ ದ್ರವ್ಯದ ವೆಚ್ಚದಿಂದ ಯೋ. ಗಮಸಮಾಚಾರಗಳನ್ನು ತಿಳುಹು ನಾಗರಿಕರಾದ ಜನರು ಮಾಡಿ - ಕೊಂಡಿರುವ ಉಪಾಯಕ್ಕೆ - ಪೋಸ್ಟಾಫೀಸು ಎಂದು ಹೆಸರು, ಒಬ್ಬನು ಒಂದೇ ಪಟ್ಟಣದಲ್ಲಿ ವಾಸಿಸುತ್ತಿರುವ ತನ್ನ ಮಿತ್ರನಿಗೆ ಕಾಗದವನ್ನು ಕಳುಹ ಬೇಕಾದರೆ, ಜವಾನನನ್ನು ಕಳುಹುವನು. ಕಾಗದವನ್ನು ಕೊಂಡೊಯ್ದ ಕೆಲಸಕ್ಕಾಗಿ ಜವಾನನಿಗೆ ಕೂಲಿ ಕೊಡಬೇಕು. ಆಳಿಗೆ ಕೊಡುವ ದುಡ್ಡು ದೂರಕ್ಕೆ ತಕ್ಕಂತೆ ಹೆಚ್ಚುತ್ತದೆ. ಒಂದು ವೇಳೆ ಒಬ್ಬ ಆಳು ಮೈಸೂರಿಂದ ಬೊಂಬಾಯಿಗಾಗಲಿ ಕಲ್ಕತ್ತೆಗಾಗಲಿ ಒಂದು ಕಾಗದವನ್ನು ತಲಪಿಸಬೇಕಾಗಿ ಒಂದಲ್ಲಿ ದೂರಕ್ಕೆ ತಕ್ಕಂತೆ ತುಂಬಾ ಹಣವನ್ನು ಕೇಳುವನು. ಒಂದು ಕಾಗದವನ್ನು ಕಳುಹುವುದಕ್ಕಾಗಿ ಅಷ್ಟು ಹಣವನ್ನು ಕೊಡತಕ್ಕವರು ಯಾರೂ ಇರಲಾರರು. ಆದರೆ ಪೋಸ್ಟಾಫೀಸಿನ ಸಹಾಯದಿಂದ, ಅರ್ಧಾಣೆಯನ್ನಾ ಗಲಿ ಕಾಲಾಣೆಯನ್ನಾಗಲಿ ವೆಚ್ಚ ಮಾಡಿದರೆ, ಈ ಕೆಲಸವನ್ನು ಯಾವನಾದರೂ