ಪುಟ:ಪ್ರಬಂಧಮಂಜರಿ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೯ ಪೋಸ್ಟಾಫೀಸುಗಳು, ಸೇನಾದರೂ ಮಿಕ್ಕರೆ, ಕಷ್ಟಕಾಲಕ್ಕೊದಗುವಂತೆ ಸೇರಿಸಿಡುವುದಕ್ಕನು. ಕೂಲವಾಗಿ ಸೇವಿಂಗ್ಸ್ ಬ್ಯಾಂಕ್ ಎಂಬುದನ್ನು ಪೋಸ್ಟಾಫೀಸುಗಳೆಲ್ಲ ಒಳಗೊಂಡಿವೆ. ಸೇವಿಂಗ್ಸ್ಬ್ಯಾಂಕು ಬಂದುದರಲ್ಲಿ ಸ್ವಲ್ಪ ಮಿಗಿಸಬೇಕೆಂಬ ಅಭಿಲಾಷೆ ಹುಟ್ಟಿಸಿ ಜನರಲ್ಲಿ ಮಿತವ್ಯಯವೆಂಬ ಸುಗುಣವನ್ನು ಂಟುಮಾಡುವುದು. ಇವಲ್ಲದೆ, ಸಮಾಚಾರಗಳನ್ನು ತಂತಿಯಮೂಲಕ ಕಳುಹುವುದಕ್ಕೆ ತಕ್ಕಂತೆ ತಂತಿ ಆಫೀಸೂ ಪೋಸ್ಟಾಫೀಸುಗಳಲ್ಲಿಯೇ ಇದೆ. ಮತ್ತು ಈಚೆಗೆ ಕ್ವಿನೈನ್ ಎಂಬ ಜ್ವರಹರವಾದ ಪುಡಿಯನ್ನೂ ಪೋಸ್ಟಾಫೀಸುಗಳಲ್ಲಿಯೇ ಮಾರುವಂತೆ ಮಾಡಿದ್ದಾರೆ, ಪೋಸ್ಟಾಫೀಸು ಜನರಿಗೆ ಇಷ್ಟು ಸೌಕರವನ್ನುಂಟುಮಾಡಿರುವುದು ಪೋಸ್ಟೇಜುಸ್ಟಾಂಪುಗಳಿಂದಾಗಿದೆ. ಸರ್ ಗೋಲೆಂಡ್ ಹಿಲ್ ಎಂಬಸಾಹೇಬನು ಸ್ಟಾಂಪುಗಳನ್ನು ಏರ್ಪಡಿಸಿದಂತೆ ಹೇಳುತ್ತಾರೆ.ನಾವಂಟಿಸುವಸ್ಟಾಂಪ ಕಾಗದವನ್ನು ಕೊಂಡೊಯ್ದು ವಿಳಾಸದಾರನಿಗೆ ತಲಪಿಸುವುದಕ್ಕಾಗಿ ಕೊಡಬೇಕಾದ ಕೂಲಿಯನ್ನು ತೋರಿಸುವುದು. ಸ್ಟಾಂಪು ಹಚ್ಚುವುದರಿಂದಪೋಸ್ಟಾಫೀಸಿನವರಿಗೆ ದುಡ್ಡು ವಸೂಾಡುವ ತೊಂದರೆ ತಪ್ಪುವುದು, ಸ್ಟಾಂಪಿನ ಮೇಲೆತ್ತುವ ಮುದ್ರೆ ಬೇಕಾದ ಹಣ ಸಂದಿದೆಯೆಂದು ತೋರಿಸುತ್ತದೆ. ಪೋಸ್ಟೇಜು ಸ್ಯಾಂಪು ಏರ್ಪಾಡಾಗುವುದಕ್ಕೆ ಮುಂಚೆ ವಿಳಾಸದಾರನಿಗೆ ಕಾಗದವನ್ನು ತಲಪಿಸಿದಾಗಲೇದುಡ್ಡನ್ನೂ ವಸೂಾಡುವ ಪದ್ಧತಿಯಿದ್ದಿತು. ಈ ಪದ್ಧತಿಯಿಂದ ಕಾಗದ ತಲಪಿಸುತ್ತಿದ್ದ ಪೋಸ್ಟಾಫೀಸು' ಜವಾನನಿಗೆ ಬಲು ತೊಂದರೆಯ ಜವಾಬುದಾರಿಯೂ ಇರುತ್ತಿದ್ದುವು. ಮತ್ತು ಕಾಗದವನ್ನು ಪೋಸ್ಟಾಫೀಸಿಗೆ ತೆಗೆದುಕೊಂಡುಹೋಗಿ, ಮೊಬಲಗನ್ನು ಕೊಟ್ಟು ಕಾಗದವನ್ನು ಅವರ ವಶಪಡಿಸಿ, ಅವರಿಂದ ಅದಕ್ಕೆ ಬದಲಾಗಿ ರಶೀದಿಯನ್ನು ಪಡೆವ ಸಂಪ್ರದಾಯವೂ ಇದ್ದಿತು. ಈಗಿರುವ ಪೋಸ್ಟಾಫೀಸು ಇಂಗ್ಲಿಷರು ಲೋಕಕ್ಕೆಲ್ಲಾ ಮಾಡಿರುವ ಒಂದು ದೊಡ್ಡ ಉಪಕಾರವಾಗಿದೆ. ನಾಗರಿಕತೆಯುಳ್ಳ ಎಲ್ಲಾ ಸೀಮೆಗಳ ಸರ್ಕಾರದವರೂ ಇಂಥ ಪೋಸ್ಟಾಫೀಸುಗಳನ್ನು ತಂತಮ್ಮ ದೇಶಗಳಲ್ಲಿಏರ್ಪಡಿಸಿಕೊಂಡಿದ್ದಾರೆ, ಈಚೆಗೆ ಯಾವ ದೇಶಕ್ಕೆ ಬೇಕಾದರೂ ಕಳುಹುವಂತೆ ಪೋಸ್ಸು ಕಾರ್ಡುಗಳನ್ನು ಮಾಡಿದ್ದಾರೆ.ನಾವು ಕೊಡುವ ಮೊಬಲಗುನಮ್ಮ