ಪುಟ:ಪ್ರಬಂಧಮಂಜರಿ.djvu/೧೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪೨ ಪ್ರಬಂಧಮಂಜರಿ-ಎರಡನೆಯ ಭಾಗ ಲ್ಲಿಯಾಗಲಿ, ಫ್ರಾನ್ಸಿನಲ್ಲಿಯಾಗಲಿ,ಒಬ್ಬನುಅಂಗಡಿಗೆಬಂದು ಒಂದುವಸ್ತು. ವನ್ನು ಕೇಳಿದರೆ, ಅಂಗಡಿಯವನು ಅದರ ಬೆಲೆಯನ್ನು ಒಡನೆಯೇ ಗೊತ್ತಾಗಿ ಇಷ್ಟೆಂದು ಹೇಳುತ್ತಾನೆ ಆ ವಸ್ತುವನ್ನು ಮನಸ್ಸು ಬಂದರೆ ತೆಗೆಯಬಹುದು; ಬೆಲೆ ಹೆಚ್ಚೆಂದು ತೋರಿದರೆ ಎರಡನೆಯ ಮಾತೇ ಇಲ್ಲದೆ ಹೊರಟು ಹೋಗಬೇಕು ನಮ್ಮ ದೇಶದಲ್ಲಿ ಅಂಗಡಿಯವನು ಮೊಟ್ಟಮೊದಲು ಹೇಳಿದಬೆಲೆಯನ್ನೆ ಕೊಟ್ಟುಬಿಡುವವನು ಹುಚ ನೆನಿಸಿಕೊಳ್ಳುವನು, ಏಕೆಂದರೆ, ಬಲುಹೊತ್ತು ಚೌಕಾಸಿ ಮಾಡಿದರೆ, ಕೊನೆಗೆ ಮೊದಲು ಹೇಳಿದ ಬೆಲೆಯಲ್ಲಿ ಅರ್ಧ ಅಥವಾ ಮೂರರಲ್ಲೊಂದುಪಾಲಿಗೆ ಇಳಿಸಿಬಿಡುತ್ತಾನೆಹೀಗೆ ಚೌಕಾಸಿ ಮಾಡುವುದಕ್ಕೆ ಬಹಳಕಾಲವೂ ತುಂಬಾ ತಾಳ್ಮೆಯೂ ಬೇಕು. ಆದರೆ ನಮ್ಮ ದೇಶದವರಿಗೆ ಕಾಲವೆಂದರೆ ಲಕ್ಷ್ಯವಿಲ್ಲ; ಮತ್ತು ನಮ್ಮ೦ಗಡಿಯವರಿಗೂ ಜನರಿಗೂ ತುಂಬಾ ತಾಳ್ಮೆ ಯಿರುವಂತೆ ತೋರುತ್ತದೆ. ಹೀಗೆ ಚೌಕಾಸಿಮಡುವುದರಲ್ಲಿ ಹಲವು ವೇಳೆ ಬಲುಗದ್ದಲವೂ ಆಗುವುದುಂಟು. ಕೆಲವು ವೇಳೆ ವ್ಯಾಪಾರಗಾರರು ತಾವು ಮೊಟ್ಟಮೊದಲು ಹೇಳಿದ ಬೆಲೆಯನ್ನು ಸ್ವಲ್ಪ ಸ್ವಲ್ಪ, ವಾಗಿ ಕಡಮೆ ಮಾಡುತ್ತಾ, ಕೊಳ್ಳದೆ ಅಂಗಡಿ ಬಿಟ್ಟು ಹೋದವರನ್ನು ಎರಡು ಮೂರುಸಾರಿಹಿಂದಕ್ಕೂ ಮುಂದಕ್ಕೂ ಆಸೆಯಿಂದ ತಿರುಗಾಡಿಸುವುದುಂಟು ಇದು ನೋಡುವವರಿಗೆ ಬಹಳ ವಿನೋದವಾಗಿರುವುದು. ಇದಲ್ಲದೆ ಒಂದೆಅಂಗಡಿಯಲ್ಲಿ ಒಲುಹೆಚ್ಚು ವ್ಯಾಪಾರಮಾಡುವವರನ್ನೂ ಬಳುಕಡಮೆ ವ್ಯ, ಪಾರಮಾಡುವವರನ್ನೂ ಒಟ್ಟಿಗೆ ನೋಡಬಹುದು ಅಕ್ಕಿ, ಉಪ್ಪು, ಎಣ್ಣೆ, ತುಪ್ಪ ಮುಂತಾದುವನ್ನು ಮಾರುವ ಚಿಲ್ಲರೆ ಅಂಗಡಿಯಲ್ಲಿ ಕುಳಿತುಕೊಂಡರೆ, ಮೂಟೆಮೂಟೆ ಅಕ್ಕಿ, ಮಣಗಟ್ಟೆ ಎಣ್ಣೆ, ತುಪ್ಪ ಇವುಗಳನ್ನು ತೆಗೆವರನ್ನೂ ; ಒಂದು ವಾವಕ್ಕಿ, ಒಂದೊಂದು ಕಾಸಿಗೆ ಎಣ್ಣೆ ಮತ್ತು ಉಪ್ಪು, ಮೂರು ಕಾಸಿಗೆ ತುಪ್ಪ ಇವುಗಳನ್ನು ಕೇಳುತ್ತಾ ನಿಂತಿರುವವರನ್ನೂ ಒಂದೇಸಾರಿ ಕಾಣಬಹುದು. ಹೀಗೆ ಒಂದು ಕಾಸಿನ ವ್ಯಾಪಾರವು ಗಂದಿಗೆಯಂಗಡಿಗಳಲ್ಲಿ ಹೇರಳವಾಗಿ ನಡೆವುದು. ಮತ್ತೊಂದು ವಿಶೇಷವೇನೆಂದರೆ, ಹಿಂದೂಧೇಶದ ಅ೦ಗಡಿಬೀದಿಯಲ್ಲಿ ನಾನಾ ದೇಶದವರು ಬಂದು, ತಮ್ಮ ತಮ್ಮ ದೇಶದ ಉಡುಪುಗಳನ್ನು ಟ್ಟು ತಮ್ಮ ತಮ್ಮ ಭಾಷೆಗಳನ್ನಾಡುತ್ತ ತಿರುಗಾಡುತ್ತಿ. ರುವುದು ಬಲುಚೆನ್ನಾಗಿ ಕಾಣುತ್ತದೆ ಹಿಂದೂಗಳು ಮತಾಚಾರಗಳಲ್ಲಿಯೂ, ನಡೆನುಡಿಗಳಲ್ಲಿಯೂ, ಊಟ ಉಪಚಾರಗಳಲ್ಲಿಯೂ ನೂರಾರುವರ್ಷಗಳಹಿಂದೆಹೇಗಿದ್ದ ರೋಹಾಗೆಯೇ