ಪುಟ:ಪ್ರಬಂಧಮಂಜರಿ.djvu/೧೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸತ್ಯ ೧೬೭ ಸಿಕ್ಕಿ ಬಿದ್ದು ನರಳುವವರಿಗೆ ಪದ್ಧತಿಯನ್ನು ಕೊಡದೆ ಅವರ ದುಷ್ಪದ್ದತಿ ಅವರಿಗೆ ತಕ್ಕ ಶಿಕ್ಷೆಯನ್ನು ಮಾಡುವುದು, ಒಬ್ಬೊಬ್ಬ ಮನುಷ್ಯನಲ್ಲಿ ಹೇಗೋ ಹಾಗೆಯೇ ಜನಸಮುದಾಯದಲ್ಲಿಯೂ ಪದ್ದತಿ ಪರಿಣಮಿಸುತ್ತದೆ. ಒಂದು ದೇಶದ ಜನರು ಒಂದು ಆಚರಣೆಯನ್ನು ಕೆಲವು ವರ್ಷಗಳ ವರೆಗೆ ಮಾಡುತ್ತಿದ್ದರೆ, ಕೊನೆಗೆ ಅದು ಅವ ರಿಗೆಲ್ಲ ಪದ್ಧತಿಯಾಗುವುದು. ಅದನ್ನೆ ಕೆ ಮಾಡಬೇಕೆಂದು ವಿಚಾರಮಾಡದೆ, ಆ ಕೆಲಸವನ್ನು ಮಾಡುತ್ತಾ ಬರುವರು, ಪ್ರತಿಯೊಂದು ನಡೆವಳಿಯನ್ನೂ ತತ್ಕಾಲದಲ್ಲಿ ಯಾವುದಾದರೂ ಒಂದುದ್ದೇಶದಿಂದ ರೂಢಿಯಲ್ಲಿ ತರುತ್ತಾರೆ. ಕೆಲವು ಕಾಲ ಕಳೆದಮೇಲೆ, ಆ ಉದ್ದೇಶವನ್ನು ಮರೆತು ಚಿರ. ಕಾಲದಿಂದಲೂ ಅದು ರೂಢಿಯಲ್ಲಿದೆಯಲ್ಲ ಎಂಬೊಂದು ಕಾರಣದಿಂದಲೇ ಅದನ್ನು ಆಚರಿಸುವರು, ಹೀಗೆ ಜನರು ನಿಷ್ಟ್ರಯೋಜನವಾದ ಪದ್ದತಿಗಳು ನ್ನು ಅನುಸರಿಸಿರುವುದುಂಟು. ಹಿಂದೂ ಜನರಷ್ಟು ಪದ್ಧತಿಗೆ ಸಿಕ್ಕಿಬಿದ್ದು ನರಳುವವರು ಲೋಕದಲ್ಲಿ ಮತ್ತಾರೂ ಇಲ್ಲ. ಹಿಂದೂಗಳು ನೂರಾರು ವರ್ಷಗಳ ಕೆಳಗೆ ಇದ್ದ ಪದ್ಧತಿಗಳನ್ನು ಈಗಲೂ ಬಿಡದೆ ಅನುಸರಿಸುತ್ತಿರುವರು. ಅವುಗಳ ಪ್ರಥಮೋದ್ದೇಶವೇನೋ ಅದನ್ನು ಸ್ವಲ್ಪವೂ ಅರಿಯದೆ ಅವುಗಳಿಂದ ಈಗ ಎಷ್ಟು ಬಾಧೆಯಿದ್ದರೂ, ಅವರ ಹಿರಿಯರು ಮಾಡುತ್ತಿದ್ದಂತೆ ತಾವೂ ಮಾಡಬೇಕೆಂದು ಹಳೆಯ ಪದ್ಧತಿಗಳನ್ನಿಟ್ಟು ಕೊಂಡಿದ್ದಾರೆ, ಅಪ್ಪ ಹಾಕಿದ ಆಲದಮರವೆಂದು ನೇಣುಹಾಕಿಕೊಳ್ಳಲಾದೀತೆ?” ಮೊಟ್ಟಮೊದಲು ಮಹಮ್ಮದೀಯರ ಕಾಟಕ್ಕಾಗಿ ಬಾಲ್ಯ ವಿವಾಹವನ್ನು ಮಾಡುತ್ತಿದ್ದರು;ಅಂತಹ ಭೀತಿಯು ತೊಲಗಿ ಎಷ್ಟೋ ಕಾಲವಾದರೂ, ಆ ಪದ್ದತಿಯನ್ನಿ ಗಲೂ ಬಿಟ್ಟಿಲ್ಲ. ಇಂತಹ ನೂರಾರು ದುಪ್ಪದ್ದತಿಗಳು ಹಿಂದೂಗಳಲ್ಲಿವೆ. ಇವುಗಳಿಂದಾಗುತ್ತಿರುವ ಬಾಧೆಗಳು ಈಗೀಗ ಗೊತ್ತು ಹತ್ತುತ್ತಲಿವೆ. ಆದುದರಿಂದ ನಿಷ್ಟ್ರಯೋಜನವಾಗಿಯೂ ಬಾಧಕವಾಗಿಯೂ ಕಂಡುಬಂದಪದ್ಧತಿಗಳನ್ನು ಎಷ್ಟು ಹಳದಾಗಿದ್ದರೂ ಬಿಟ್ಟು ಬಿಟ್ಟರೆ ಶ್ರೇಯೋಭಿವೃದ್ಧಿಯಾಗುವುದು.

  • 60, ಸತ್ಯ, ಸುಗುಣಗಳಲ್ಲಿ ಸತ್ಯವು ರತ್ನ ಪ್ರಾಯವಾದುದು. ಸತ್ಯವಂತರನ್ನು ಮ. ಪ್ಯಾದೆಯಿಂದ ಕಾಣುವಷ್ಟು ಮತ್ತೆ ಯಾರನ್ನೂ ಕಾಣುವುದಿಲ್ಲ. ಮನಸ್ಸಿನ ಲೆಣಿಸಿದಂತೆ ಮಾತಿನಲ್ಲಿಯೂ ಆಡುವುದು, ಮಾತಿನಲ್ಲಾಡಿದಂತೆ ಕೆಲಸ