ಪುಟ:ಪ್ರಬಂಧಮಂಜರಿ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭3 ಪ್ರಬಂಧಮಂಜರಿ-ಎರಡನೆಯ ಭಾಗ ಚರ್ಮದ ಸಿಂಬಿಗಳು, ಹೆಜ್ಜೆಯಿಡುವಾಗ ಮೈಯ ಭಾರಕ್ಕೆ ಸಿಂಬಿ ಹರಡಿಕೊಳ್ಳುತ್ತದೆ. ಕುತ್ತಿಗೆ ಉದ್ದ, ತಲೆ ಉದ್ದ : ಹಲ್ಲು ದೊಡ್ಡದು, ಗಟ್ಟಿ ಮೂಗಿನ ಸೆಕ್ಸೆಗಳು ಉದ್ದ, ಬೇಕಾದಾಗ ಮುಚ್ಚಿಕೊಳ್ಳುತ್ತದೆ, ಇದರಿಂದ ಪ್ರಯೋಜನ. ಮೇಲಿನ ತುಟಿ ಎರಡು ಪಾಲಾಗಿ ಒಂದರ ಮೇಲೊಂದಿದೆ. ಬಾಲ ಮೊಟು, ತಳು. ಮೈಯ ಕೆಲವು ಭಾಗಗಳಲ್ಲಿ ಮಾಂಸದ ಮುದ್ದೆಗಳಿವೆ ಒಂಟೆಯಲ್ಲಿ ಎರಡು ಜಾತಿ-ಒಂದು ಡುಬ್ಬವುಳ್ಳ ಅರಾಬಿ ದೇಶದ್ದು, ಎರಡು ರುಬ್ಬವುಳ್ಳ ಬ್ಯಾಯಾ ಸೀಮೆಯದು, (2) ಮರಳುಕಾಡುಳ್ಳ ಉಷ್ಣ ದೇಶಗಳಲ್ಲೆಲ್ಲಾ ಸಿಕ್ಕುತ್ತದೆ. ಅರಾಬಿ, ಉತ್ತರ ಆಫ್ರಿಕಾ, ತುರ್ಕಿಸ್ಥಾನ ; ಇಂಡಿಯಾದಲ್ಲಿ ಕೆಲವು ಭಾಗ, (3) ಆಹಾರ-ಪೊದೆ, ಎಳೆಯ ಗಿಡಗಳು, ಧಾನ್ಯ, ಹುಲ್ಲು, ಸೊಪ್ಪು, ಯಾವ ಜಂತುವೂ ಮುಟ್ಟದ ಮುಳ್ಳು, ಕಾಡುಕಂಟಿ, ಎರಡು ಹೊಟ್ಟೆಗಳು: ಒಂದರಲ್ಲಿ ಯಥೇಚ್ಛವಾಗಿ ನೀರು ಕುಡಿದು ತುಂಬಿಕೊಂಡು ಮರಳುಕಾಡಿನಲ್ಲಿ ಪ್ರಯಾಣ ಮಾಡುವಾಗ ಆ ನೀರನ್ನು ಉಪಯೋ, ಗಿಸುತ್ತದೆ. ಬೇರೆ ನೀರು ಕುಡಿಯದೆಯೇ 21 ದಿನ ಪ್ರಯಾಣ ಮಾಡಬಲ್ಲುದು' ಬೆನ್ನ ಮೇಲೆ ಇರುವ ಡುಬ್ಬದಲ್ಲಿ ಕೊಬ್ಬು ತುಂಬಿದೆ. ಬಹಳ ಹೊತ್ತು ಆಹಾರವಿಲ್ಲದಿದ್ದರೆ, ಅದಕ್ಕೆ ಪ್ರತಿ ಯಾಗಿ ಈ ಕೊಬ್ಬು ದೇಹದೊಳಕ್ಕೆ ಹೋಗಿ ಡುಬ್ಬವು ಸಣ್ಣದಾಗುತ್ತದೆ. ಸ್ವಭಾವ-ತಾಳ್ಮೆಯುಳ್ಳ ಸಾಧುವಾದ ಜಂತು; ಕೆಲವು ವೇಳೆ ಹೊಟ್ಟೆ ಕಿಚ್ಚು ತೀರಿಸಿಕೊಳ್ಳುತ್ತದೆ; ಇದಕ್ಕೆ ಕಥೆ, ಕಷ್ಟ ಪಟ್ಟು ಕೆಲಸ ಮಾಡುತ್ತದೆ. ಮೂಟೆ ಹೊರಿಸುವಾಗ ಮೊಳಕಾಲೂರುತ್ತದೆ. ಮರಳ. ಕಾಡಿನಲ್ಲಿ ಬಿರುಗಾಳಿ ಬಂದಾಗ, ಮೊಳಕಾಲೂರಿ ನಿಂತು ಮಗನ್ನು ಮರಳಿನಲ್ಲಿ ಹೂಳುತ್ತದೆ. ನಡೆ ನಿಧಾನ, ಗಂಟೆಗೆ ಸುಮಾರು 3 ಮೈಲಿ, ಆದರೂ ಒಂದೇ ಉಸಿರಿನಲ್ಲಿ 50-60 ಮೈಲಿ, ಕಣ್ಣು, ಕಿವಿ ಬಹು ಸೂಕ್ಷ್ಮ , (4) “ಮರಳುಕಾಡಿನ ಹಡಗು,” ಹಾಲನ್ನು ಕುಡಿಯುವರು, ಸವಾರಿ, ಸತ್ಯಮೇಲೆ ಅದರ ಕೂದಲಿನಿಂದ ಬಟ್ಟೆಗಳನ್ನೂ ಕೂರ್ಚಗಳನ್ನೂ ಮಾಡುವರು, ಮಾಂಸವನ್ನು ತಿನ್ನುವರು. ಚರ್ಮದಿಂದ ತಗಲು.” 3. ಕೂತಿ, (1) ಮನುಷ್ಯರನ್ನು ಬಲುಮಟ್ಟಿಗೆ ಹೊಲುವ ಜಂತು ನಾನಾ ವಿಧ-ಕಲವಕ್ಕೆ ಬಾಲವಿಲ್ಲ, ಕೆಲವಕ್ಕೆ ಬಾಲ ಮೋಟು, ಇನ್ನು ಕೆಲವಕ್ಕೆ ಬಹಳ ಉದ್ದ, ಮೊದಲನೆಯವೇ ಮನುಷ್ಯರನ್ನು ಹೋಲುವುದು, ಗೊರಿಲ್ಲಾ ”, ಗಾತ್ರದಲ್ಲೂ ಭೇದವುಂಟು. ಸಾಮಾನ್ಯವಾಗಿ ಬೂದುಬಣ್ಣ, ಎಲ್ಲಾ ಉಷ್ಣ ದೇಶಗಳಲ್ಲೂ ಇವೆ, ಮುಖ್ಯವಾಗಿ ದಟ್ಟವಾದ ಕಾಡುಗಳಲ್ಲಿ ಜೀವಿಸುವುವು. ತಲೆ ಗುಂಡು, ಮತಿ ಸ್ವಲ್ಪ ಮುಂದಕ್ಕೆ ಬಂದಿದೆ. ಕಿವಿ ಚಿಕ್ಕದು. ಕಣ್ಣು ಸಣ್ಣಗೆ ಉರುಟು, ಮನುಷ್ಯರಿಗಿರುವಂತ ಹುಬ್ಬು, ಎರಡು ದವಡೆಗಳಲ್ಲೂ ಹಲ್ಲು, ಕೋತಿಯ ಹಲ್ಲು ಮೊನೆ, ಉದ್ದ, ಕಳಗ ದವಡೆಯಲ್ಲಿ ಎರಡು ಕಡೆಯಲ್ಲೂ ಎರಡು ಚೀಲ ಕುತ್ತಿಗೆ ನೋಟು, ಚರ್ಮವು ಬೆಕ್ಕಿನ ಚರ್ಮದಂತ ಸಡಿಲ, ಚರ್ಮದ ಮೇಲೆ ಮೃದುವಾದ ಕೂದಲು.