ಉಪನಯನ ಲಗ್ನಪತ್ರಿಕೆ ១៩ ದುರದೃಷ್ಟ, ನಾನೇನು ಮಾಡಲಿ? ತಮ್ಮಂಥವರ ಸಮಯಕ್ಕೆ ಆಗುವ ಪುಣ್ಯವು ನನಗಿಲ್ಲದೆ ಹೋಯಿತಲ್ಲಾ ಎಂದು ಸಂಕಟಪಡುತ್ತೇನೆ, ನನ್ನ ಅಪರಾಧವನ್ನು ಕ್ಷಮಿಸಬೇಕು, ತಿಳಿದವರಿಗೆ ವಿಶೇಷ ಬರೆಯಲು ಶಕ್ತನಲ್ಲ . ಇಂತೀ ವಿಜ್ಞಾಪನೆ. ಮೈಸೂರು 15-6-1912 ಶ್ರೀರಸ್ತು, 4, ಉಪನಯನ ಲಗ್ನ ಪತ್ರಿಕಾ. ಮ| ರಾ|| ವಾಸುದೇವಯ್ಯನವರ ಸಮಕ್ಷಮಕ್ಕೆ, ಬೆಂಗಳೂರು ಜನರಲ್ ಅಂಡ್ ರೆವೆನ್ಯೂ ಸೆಕ್ರೆಟರಿಯವರ ಆಫೀಸು ಟ್ರಾನ್‌ಸ್ಟ್ರೇಟರು ಎಮ, ಲಕ್ಷ್ಮೀನಾರಣಪ್ಪನ ವಿಜ್ಞಾಪನೆಗಳು.-ಇದುವರೆಗೆ ಉಭಯ ಕುಶಲೋಪರಿ ಸಾಂjc ಪರೀಧಾವಿ ಸಂವತ್ಸರದ ಚೈತ್ರ ಶುದ್ಧ ೭ ಸೋಮವಾರ (25-3-1912) ಪ್ರಾತಃಕಾಲ 84 ಘಂಟೆಗೆ ಸರಿಯಾಗಿ ಸಲ್ಲುವ ವೃಷಭಲಗ್ನದಲ್ಲಿ, ನನ್ನ ತಮ್ಮ ರಾ|| ಕೆ. ಸಖರಯ್ಯನ ' ಕುಮಾರ ಚಿ|| ಸುಬ್ಬಯ್ಯನಿಗೆ ಉಪನಯನ ಮುಹೂರ್ತ ನಡೆಯಬೇಕೆಂದು ಹಿರಿಯರು ನಿಶ್ಚಯಿಸಿರುವುದರಿಂದ ತಾವು ಈ ಶುಭಮುಹೂರ್ತಕ್ಕೆ ಎರಡು ದಿನ ಮುಂಚಿತವಾಗಿಯೇ ಸಕುಟುಂಬ ಸಪರಿವಾರರಾಗಿ ದಯಮಾಡಿಸಿ ವಟುವಿಗೆ ಆಶೀರ್ವದಿಸಿ ಮನಸ್ಸಂತೋಷಪಡಿಸಬೇಕಾಗಿ ಕೋರುತ್ತೇನೆ. ಬೆಂಗಳೂರು, 19-3-1912 | ಎಮ್. ಲಕ್ಷ್ಮಿ ನಾರಣಪ್ಪ, ---
ಪುಟ:ಪ್ರಬಂಧಮಂಜರಿ.djvu/೨೦೭
ಗೋಚರ