ಪುಟ:ಪ್ರಬಂಧಮಂಜರಿ.djvu/೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪ ಪ್ರಬಂಧಮಂಜರಿ-ಪದಲನೆಯ ಭಾಗ (3) ಕಾಡಿನಲ್ಲಿ ಆನೆಗಳು ಹಿಂಡು ಹಿಂಡಾಗಿ ತಿರುಗುತ್ತವೆ. ಹಿಂಡಿನ ಅಧಿಪತಿ ಸಲಗ, ನೀರಿನಲ್ಲಿ ಮುಳುಗುವುದು ಬಹಳ ಇಷ್ಟ. ಕಾಡಿನಲ್ಲಿ ನೀರಿನ ಹತ್ತರವೇ ವಾಸಿಸುವುದು, ಹೊಟ್ಟೆಯಲ್ಲಿ ನೀರನ್ನು ತುಂಬಿಕೊಂಡು ಬೇಕಾದಾಗ ಸೊಂಡಿಲಿನಿಂದ ಈಚೆಗೆ ತೆಗೆದು ಬೆನ್ನಿನಮೇಲೆ ಎರಚಿಕೊಳ್ಳುವುದು ಸ್ವಭಾವವಾಗಿ ದುಷ್ಟ ಜಂತುವಾದರೂ ಪಳಗಿಸಿದ ಮೇಲೆ ಸಾಧುಗುಣವುಇದ್ದು, ಯಜಮಾನನು ಹೇಳಿದಂತೆ ಕೇಳುತ್ತದೆ. ಬಹಳ ಸೂಕ್ಷ್ಮಬುದ್ದಿ, ಅನೇಕ ಕಾರ್ಯಗಳನ್ನು ಕಲಿಸಬಹುದು, ಮಾವಟಿಗನ ಮಾತನ್ನೂ ಸನ್ನೆಗಳನ್ನೂ ತಿಳಿದು ಅದರಂತೆ ನಡೆಯುವ ತದೆ, ಮೋಸಮಾಡಿದವರನ್ನೂ ಹಿಂಸಿಸಿದವರನ್ನೂ ಮರೆಯದೆ ಹೊಟ್ಟೆ ಕಿಚ್ಚು ತೀರಿಸಿಕೊಳ್ಳುತ್ತದೆ. ಸೊಂಡಿಲನ್ನು ಸೂಜಿಯಿಂದ ಚುಚ್ಚಿದ ದರ್ಜಿಯ ಕಥೆ, ನಿಶ್ಚಲವಾಗಿ ನಿಲ್ಲದೆ ಮೈಯನ್ನು ಒಂದು ವಿಧವಾಗಿ ಅಲ್ಲಾಡಿಸುತ್ತಲೇ ಇರುವುದು, 100-150 ವರ್ಷ ಬದುಕುತ್ತದೆ. ಆಹಾರಹುಲ್ಲು, ಜೊಂಡು, ಎಲೆ, ಮರದ ರೆಂಬೆ, ಧಾನ್ಯ, ಹಣ್ಣು, ಗಡ್ಡೆ ; ಕಬ್ಬಿನಮೇಲೆ ಬಹಳ ಆಸೆ (4) ಪೂರ್ವಕಾಲದಲ್ಲಿ ಆನೆಯು ಸೈನ್ಯದ ಒಂದು ಮುಖ್ಯಾಂಗ, ಭಾರವನ್ನು ಹೊರುವುದು, ಯುದ್ದದಲ್ಲಿ ಪಿರಂಗಿ ಮುಂತಾದ ಭಾರವಾದ ವಸ್ತುಗಳನ್ನು ಎಳೆಯುವುದು, ಅಡವಿಯಿಂದ ಮರದ ದಿಮ್ಮಿಗಳನ್ನು ಎಳೆಯುವದು, ಮರಗಳನ್ನು ಬುಡಮುಟ್ಟ ಉರುಳಿಸುವುದು, ನೆಲವನ್ನು ಮಟ್ಟ ಮಾಡುವುದು, ಇದಕ್ಕೆಲ್ಲಾ ಆನೆಯನ್ನು ಈಗ ಉಪಯೋಗಿಸುವರು, ರಾಜರು ಉತ್ಸವಕಾಲದಲ್ಲಿ ಆನೆಯ ಮೇಲೆ ಅಂಬಾರಿಯಲ್ಲಿ ಕುಳಿತು ಸವಾರಿಮಾಡುವರು. ದೇವಸ್ಥಾನ ಮಠ, ಅರಮನೆಗಳಲ್ಲಿ ಮರ್ಯಾದೆಗೋಸ್ಕರ ಇಟ್ಟಿರುವರು, ಸತ್ತ ಮೇಲೆ ಆನೆಯ ಮಾಂಸವು ಕೆಲವರಿಗೆ ಆಹಾರ, ದಂತದಿಂದ ಬಾಚಣಿಗೆ, ಭರಣಿ, ಚದುರಂಗದ ಕಾಯಿ, ಚೂರಿ ಮುಂತಾದುದರ ಹಿಡಿ ; ಚರ್ಮದಿಂದ ಗುರಾಣಿ, ಎಕ್ಕಡ ಆಗುವುದು. ತಿ, ವನಸ್ಪತಿ, 1. ಬೆಳೆವ ಸ್ಥಳ; 2. ವರ್ಣನೆ; 3. ಬೆಳೆವ ಕ್ರಮ; 4. ಉಪಯೋಗ ಉದಾ.-ಹತ್ತಿಯಗಿಡ. (1) ಅಮೆರಿಕಾ ಖಂಡದ ಸಂಯುಕ್ತ ಸಂಸ್ಥಾನಗಳು, ಇಂಡಿಯಾ,ಚೀನಾ, ಪಶ್ಚಿಮದೀಪ, ಗಳು, ಉಷ್ಣ ಅಥವಾ ಸಮಶೀತೋಷ್ಣ ದೇಶಗಳಲ್ಲಿಯೇ ಹೊರತು ಶೀತದೇಶಗಳಲ್ಲಿ ಬೆಳೆವುದಿಲ್ಲ, (8) ಹೊಲದ ಹತ್ತಿಯಗಿಡ ಎರಡು ಮರಡಿ ಎತ್ತರ, ಕೆಲವು ಜಾತಿಯ ಹುಗಿಡಗಳು ಇಪ್ಪತ್ತಡಿ ಎತ್ತರ, ಕಾಡುಹುಯಗಿಡದ ಎತ್ತರ ನೂರಡಿಯ ವರೆಗೆ ಎಲೆಗಳು ಅಗಲ, ಕರೀಛಾಯೆಯ ಹಸುರುಬಣ್ಣವುಳ್ಳವು, ತುದಿಯಲ್ಲಿ ಎಲೆಗಳಿಗೆ ಐದು ವಿಭಾಗಗಳು-ಸಾಮಾನ್ಯವಾಗಿ ಹೂಗಳು ದೊಡ್ಡವು, ಹಳದಿಯಬಣ್ಣ, ಕೆಲವು ಊದಾಬಣ್ಣ, ಎಸಳುಗಳು ಬೇಗ ಬಿದ್ದು ಹೊ