೨೬ ಪ್ರಬಂಧಮಂಜರಿ-ಮೊದಲನೆಯ ಭಾಗ () ಆಸ್ಟ್ರೇಲಿಯ, ಕ್ಯಾಲಿಫೋರ್ನಿಯ, ದಕ್ಷಿಣ ಆಫ್ರಿಕಾ,ದಕ್ಷಿಣ ಅಮೆರಿಕಾ, ಮೆಕ್ಸಿಕೊ, ಇಂಡಿಯಾ, ಈ ದೇಶಗಳಲ್ಲಿ ನದಿಗಳ ಪಾತ್ರಗಳಲ್ಲೂ ಪರ್ವತಗಳಲ್ಲೂ ಆಸ್ಟ್ರೇಲಿಯಾದೇಶದ ಚಿನ್ನ ಬಹು ಸ್ವಚ್ಛವಾದುದು, (3) ಚಿನ್ನ ಬೆರೆತಿರುವ ಮಣ್ಣನ್ನೂ ಮರಳನ್ನೂ ನೀರಿನಲ್ಲಿ ಚೆನ್ನಾಗಿ ಜಾಲಿಸಿದರೆ, ಹಗುರವಾದ ಮಣ್ಣ ಮಠಳೂ ಹೋಗಿ ಭಾರವಾದ ಚಿನ್ನದ ದೂಳೂ ಕಣಗಳೂ ನಿಲ್ಲುತ್ತವೆ. ಬೆಣಚುಕಲ್ಲಿನ ಬಂಡೆಗಳಲ್ಲಿರುವ ಚಿನ್ನವನ್ನು ಪ್ರತ್ಯೇಕಿಸಲು, ಆ ಬಂಡೆಗಳನ್ನು ಒಡೆದು ಯಂತ್ರಗಳಿಂದ ಪುಡಿಮಾಡಿ, ಆ ಪುಡಿಯನ್ನು ನೀರಿನಲ್ಲಿ ಜಾಲಿಸಬೇಕು ಆಗ ಕಲ್ಲೂ ಮಣ್ಣ ಕೊಚ್ಚಿ ಹೋಗಿ ಚಿನ್ನ ಮಾತ್ರ ನಿಲ್ಲುವುದು ಚಿನ್ನದ ದೂಳೂ ಕಣಗಳೂ ಬಹಳ ಸಣ್ಣವಾಗಿದ್ದರೆ, ಪಾದರಸವನ್ನು ಸೇರಿಸಿ ನೀರಿನಲ್ಲಿ ಜಾಲಿಸುತ್ತಾರೆ. ಪಾದರಸವು ಚಿನ್ನದ ದೂಳೂ ಕಣಗಳೊಂದಿಗೆ ಸೇರಿಕೊಂಡು, ಇತರ ಕಲ್ಯಷಗಳು ನೀರಿನಲ್ಲಿ ಕೊಚ್ಚಿ ಹೋಗುತ್ತವೆ. ಪಾದರಸ ಮಿಶ್ರವಾದ ಚಿನ್ನವನ್ನು ಕಾಯಿಸಿದರೆ, ಪಾದರಸವು ಆವಿಯಾಗಿ ಹೋಗಿ ಚಿನ್ನ ಮಾತ್ರ ಉಳಿವುದು, ಬೆಳ್ಳಿಯೊಡನೆ ಮಿಶ್ರವಾದ ಬಂಗಾರವನ್ನು ಕರಗಿಸಿ ಕರಗಿದ ಲೋಹವನ್ನು ಒಂದು ನೀರು ತುಂಬಿದ ಪಾತ್ರಗೆ ಎತ್ತರದಿಂದ ಸುರಿದು ನುಚ್ಚಾಗುವಂತೆ ಮಾಡುವರು, ನುಚ್ಚಾದುದನ್ನು ಕಬ್ಬಿಣದ ಪಾತ್ರೆಯಲ್ಲಿಟ್ಟು ಗಂಧಕ ದ್ರಾವಕವನ್ನು ಬೆರೆಸಿ ಕುದಿಸುವರು, ಬೆಳ್ಳಿಯು ದ್ರಾವಕವಾಗಿ ಕರಗಿ ಚಿನ್ನವು ಪುಡಿಯಾಗಿ ಕೆಳಗೆ ಬೀಳುವುದು, (4) ಹೊಳೆವ ಅರಸಿನ ಬಣ್ಣವುಳ್ಳುದು-ಲೋಹಗಳಲ್ಲೆಲ್ಲಾ ಬಹು ಭಾರ, ಬೆಲೆಯುಳ್ಳು. ದು - ಅಪ್ಪಟವಾದ ಚಿನ್ನ ಬಹಳ ಮೃದು, ಬಹಳ ತರುವಾದ ತಗಡಾಗಿ ಬಡಿಯಬಹುದು ; ಸುಮಾರು ಮೂರುಲಕ್ಷ ರೇಕುಗಳನ್ನು ಒಂದರಮೇಲೊಂದು ಅಡಕಿದರೆ, ಒಂದಂಗುಲಗಾತ್ರವೇ ಆಗುವುದು. ಬಹಳ ಸಣ್ಣ ತಂತಿಯಾಗಿ ಎಳೆಯಬಹುದು-ಬಹಳ ಜಿಗಟಾದ ಲೋಹ ತುಕ್ಕು ಹಿಡಿವುದಿಲ್ಲ, ಮಾಸುವುದಿಲ್ಲ ; ಬಹಳ ಹೊಳೆಯುತ್ತಿರುತ್ತದೆ-ಶುದ್ಧವಾದ ಚಿನ್ನವು ಇತರ ಲೋಹಮಿಶ್ರವಾದ ಚಿನ್ನಕ್ಕಿಂತ ಕರಗುವುದು ತಡ, (6) ನಾನಾ ವಿಧವಾದ ಒಡವೆಗಳು, ಬಟ್ಟಲು, ತಟ್ಟೆ ಮುಂತಾದ ಪಾತ್ರಗಳು, ನಾಣ್ಯಗಳು, ಬೆಳ್ಳಿಯ ಪದಾರ್ಥಗಳಿಗೆ ಮುಲಾಮು, ಜರತಾಂಬಟ್ಟೆ ಇವುಗಳನ್ನು ಚಿನ್ನದಿಂದ ಮಾಡುವರು. ಹಿಂದೂದೇಶದ ವೈದ್ಯರು ಚಿನ್ನದ ಭಸ್ಮವನ್ನು ಮಾಡಿ ಔಷಧವಾಗಿ ಉಪಯೋಗಿಸುವರು, ಸೂಚನೆ:-ಮೇಲೆ ಆನೆ, ಚಿನ್ನ ಇವುಗಳ ವಿಷಯವಾಗಿ ಬರೆದಿರುವುದರಲ್ಲಿ ಮುಕ್ಕಾ. ಶುಪಾಲು ಪ್ರತಿಯೊಬ್ಬ ವಿದ್ಯಾರ್ಥಿಗೂ ತಿಳಿದಿರಬಹುದು ತಿಳಿದಿರುವುದನ್ನು ವಿಶದವಾಗಿ ತಪ್ಪಿ,
ಪುಟ:ಪ್ರಬಂಧಮಂಜರಿ.djvu/೪೪
ಗೋಚರ