ಪುಟ:ಪ್ರಬಂಧಮಂಜರಿ.djvu/೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರಬಂಧಮಂಜರಿ ಎರಡನೆಯ ಭಾಗ ತದೆ. ಆತನಲ್ಲಿಯೂ ಆತನ ಜನರಲ್ಲಿಯೂ ಬಹಳ ಪ್ರೀತಿಯನ್ನು ತೋರಿಸುತ್ತದೆ. ಮಾಡಿದ ಉಪಕಾರವನ್ನು ಎಂದಿಗೂ ಮರೆಯದು ಅನ್ನ ಹಾಕಿದವರ ಮನೆಯ ಮುಂದೆಯೇ ಬಿದ್ದಿರುತ್ತದೆ. ಹೊಸಬರು ಯಾರನ್ನೂ ತನ್ನೊಡೆಯನ ಮನೆಗೆ ಬರಲೀಯದು, ಕಳ್ಳರು ಮನೆಯಹತ್ತರ ಸುಳಿದರೆ ಗಟ್ಟಿಯಾಗಿ ಬಿಗುಳಿ ಆತನನ್ನು ಎಚ್ಚರಿಸುವುದು. ಆತನಿಗಾಗಿ ಧೈರ್ಯದಿಂದ ಜಗಳವಾಡುವುದು, ಕೆಲವು ವೇಳೆ ಸಾಕಿದವನಿಗೋಸ್ಕರ ಪ್ರಾಣವನ್ನಾದರೂ ಬಿಡುವುದು. ನಾಯಿಯ ಕಣ್ಣೂ ಕಿವಿಯೂ ಬಹಳ ಸೂಕ್ಷ್ಮ ; ಮಗು ಇವಕ್ಕಿಂತಲೂ ಸೂಕ್ಷನರಿ ಮೊಲ ಮೊದಲಾದುವನ್ನು ವಾಸನೆಯಿಂದಲೇ ಕಂಡು ಹಿಡಿವುದು. ಇದಕ್ಕೆ ಬೆವರು ನಾಲಗೆಯಲ್ಲಿ ಸುರಿವುದು. ಇದು ನೀರನ್ನು ನಾಲಗೆಯಿಂದ ನೆಕ್ಕಿ ಕುಡಿಯುತ್ತದೆ. ತಿಂಡಿ ತಿನ್ನುವ ವಾಗ ಕೆಳಗಣ ದವಡೆಯನ್ನು ಮೇಲಕ್ಕೂ ಕೆಳಕ್ಕೂ ಅಲ್ಲಾಡಿಸುತ್ತದೆ;ಪಕ್ಕಗಳಿಗೆ ಅಲ್ಲಾಡಿಸುವುದಿಲ್ಲ. ಮಾಂಸಾಹಾರಿಯಾದರೂ ಅಪ್ಪಣೆಯಿಲ್ಲದೆಒಡೆ. ಯನಕುರಿ ಕೋಳಿ ಮುಂತಾದುವುಗಳ ಗೋಜಿಗೆ ಹೋಗುವುದಿಲ್ಲ.ಹೊಗಳಿದಾಗ ಅಥವಾ ಸಂತೋಷವಾದಾಗ ಬಾಲವನ್ನು ಅಲ್ಲಾಡಿಸುತ್ತದೆ. ಯಾರಾದರೂ ತನ್ನ ನ್ನು ಗದರಿಸಿದರೆ, ಇಲ್ಲವೆ ತನಗೆ ಅವಮಾನವಾದರೆ ಬಾಲ. ವನ್ನು ಹಿಂಗಾಲುಗಳ ನಡುವೆ ಮದರಿಕೊಂಡು ಓಡುವುದು, ಕೋಪಬಂದಾಗ ಗುರುಗು ಟುತ್ತ ಹಲ್ಲುಗಳನ್ನು ತೋರಿಸುತ್ತದೆ. ಕೆಲವುವೇಳೆ ನಾಯಿಗಳಿಗೆ ಹುಚ್ಚು ಹಿಡಿವುದುಂಟು; ಆಗ ಅವು ಕಚ್ಚಿದರೆ ಜನರ ಪ್ರಾಣಕ್ಕೆ ಅವಾಯವಾಗುತ್ತದೆ. ನಾಯಿ ತನ್ನನ್ನು ಸಾಕುವವರ ಮನೆಯನ್ನು ನಂಬಿಕೆಯ ಆಳಿನಂತೆ ಯಾವಾಗಲೂ ಕಾದು ಕೊಂಡಿರುತ್ತದೆ ಆ ಮನೆಯಲ್ಲಿ ಹಾವಳಿಮಾಡುವ ಇಲಿಗಳನ್ನು ಹಿಡಿದು ಕೊಲ್ಲುವುದು, ಕುರಿಗಳು ಚದರಿಹೋಗದಂತೆಯೂ ದುಷ್ಟ ಮೃಗಗಳು ಅವುಗಳ ಮೇಲೆ ಬೀಳದಂತೆಯೂ ಕುರಿಮಂದೆಯನ್ನು ಕಾಪಾಡುವುದು ಬೇಟೆಗಾರನಿಗೆ ನಾಯಿಂದ ಬಹಳ ಪ್ರಯೋಜನವುಂಟು. ಕೆಲವುನಾಯಿಗಳು ನೀರಿನಲ್ಲಿ ಬಿದ್ದವರನ್ನು ಎತ್ತುತ್ತವೆ. ಇನ್ನು ಕೆಲವು ಹಿಮದಲ್ಲಿ ಬಿದ್ದು ಹೂತು ಹೋಗಿ ಜ್ಞಾನತಪ್ಪಿರುವವರನ್ನು ವಾಸನೆಯಿಂದ ಕಂಡುಹಿಡಿದು, ಮುಚ್ಚಿಕೊಂಡಿರುವ ಹಿಮವನ್ನು ತೆಗೆದುಹಾಕಿ, ಅವರು