ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಪ್ರಬಂಧಮಂಜರಿ ಎರಡನೆಯ ಭಾಗ, ಮುಖ್ಯವಾದ ಸ್ಪರ್ಶೇಂದ್ರಿಯ, ಬೆಕ್ಕಿನ ಕುತ್ತಿಗೆ ಉದ್ದ ವಲ್ಲ. ಚರ್ಮದ ಮೇಲೆ ಮೃದುವಾಗಿ ನುಣುಪಿನಿಂದಲೂ ಹೊಳಪಿನಿಂದಲೂ ಕೂಡಿದ ಕೂದಲಿದೆ ಬಾಲವು ಉದ್ದ,ಬೆಕ್ಕಿಗೆ ಕೋಪೋದ್ರೇಕವಾದಾಗ ಇದುದಪ್ಪವಾಗುತ್ತದೆ. ಉದ್ದವಾದ ನಾಲಗೆಯ ಮೇಲೆ ಸಣ್ಣ ಸಣ್ಣ ಮುಳ್ಳುಗಳಿವೆ. ಇದರ ಕೋರೆಹಲ್ಲು ಗಳು ಬಲುಹರಿತವಾಗಿ ಮೊನೆಯಾಗಿವೆ. ನಾಯಿಗಿರುವ ವಂತೆ ಬೆಕ್ಕಿಗೂ ಮುಂಗಾಲುಗಳಲ್ಲಿ ಐದೈದು ಬೆರಳುಗಳೂ ಹಿಂಗಾಲುಗಳಲ್ಲಿ ನಾಲ್ಕು ನಾಲ್ಲೂ ಇವೆ. ಅಂಗಾಲಿನಲ್ಲಿ ಮೆತ್ತಗಿರುವ ಮಾಂಸದ ದಿಂಬುಗಳೂ ಬೆರಳುಗಳಲ್ಲಿ ಉಗುರುಗಳೂ ಇವೆ. ಉಗುರುಗಳನ್ನು ಬೇಕಾದಾಗ ನೀಡಬಲ್ಲುದು ಬೇಡವಾದಾಗ ಒಳಕ್ಕೆಳೆದುಕೊಳ್ಳಬಲ್ಲುದು ನಡೆವಾಗಉಗು ರುಗಳನ್ನು ಒಳಕ್ಕೆಳೆದುಕೊಳ್ಳುವುದರಿಂದ ಸದ್ದಾಗುವುದಿಲ್ಲ. ಉಗುರುಗಳ ಸಹಾಯದಿಂದ ಬೆಕ್ಕು ಮರಹತ್ತುತ್ತದೆ.ಪ್ರಾಣಿಗಳನ್ನು ಚುಚ್ಚಿ ಕೊಲ್ಲುತ್ತದೆ. - ಬೆಕ್ಕು ನಾಲಗೆಯಿಂದ ಮೈಯನ್ನು ನೆಕ್ಕಿ ನೆಕ್ಕಿ ಚೊಕ್ಕಟ ಮಾಡಿಕೊಳ್ಳುವುದು, ಬೆಕ್ಕಿಗೆ ತನ್ನ ಮರಿಗಳಲ್ಲಿ ಬಹಳ ಪ್ರೀತಿ, ಅದಕ್ಕೆ ನಾಯಿಯ ಹಾಗೆ ಮನುಷ್ಯರಲ್ಲಿ ಪ್ರೀತಿಯಿಲ್ಲ ಸ್ಥಳಗಳ ಮೇಲೆಯೇ ಪ್ರೀತಿ. ಒಂದು ಮನೆಯಿಂದ ದೂರಕ್ಕೆ ತೆಗೆದುಕೊಂಡು ಹೋದರೆ ತನು ಮೊದಲಿದ್ದ ಮನೆ ಎಷ್ಟು ದೂರವಾಗಿದ್ದರೂ ಅಲ್ಲಿ ಬೇರೆ ಜನರು ವಾಸಿಸುತ್ತಿದ್ದರೂ ಹೋಗಿ ಸೇರುವುದು, ಕಾಲು ಮೈಗಳು ಒದ್ದೆ ಯಾಗದಂತೆ ಎಚ್ಚರಿಕೆಯಿಂದಿರುತ್ತದೆ. ಬೆಚ್ಚಗಿರುವಸ್ಥಳದಲ್ಲಿ ಬಿದ್ದು ಕೊಳ್ಳುತ್ತದೆ ಬೆಕ್ಕು ಮಾಂಸಾಹಾರಿಯಾದುದು ರಿಂದ ಪ್ರಾಣಿಗಳನ್ನು ಹಿಡಿದು ಕೊಳ್ಳು ವುದರಲ್ಲಿ ಬಹಳ ಚಮತ್ಕಾರವನ್ನು ತೋರಿಸುವುದು, ಹೊಂಚು ಹಾಕುತ್ತಿದ್ದು ಸ್ವಲ್ಪವೂ ಸದ್ದು ಮಾಡದೆ ಹೋಗಿ ಇಲಿ ಮುಂತಾದುದನ್ನು ಹಿಡಿವುದು. ಕತ್ತಲೆಯಲ್ಲಿ ಕಣ್ಣು ಚೆನ್ನಾಗಿ ಕಾಣುವುದರಿಂದ ರಾತ್ರಿಯಲ್ಲಿ ಇದು ಸಂಚಾರ ಮಾಡುವುದು ಹೆಚ್ಚು. ಬೆಕ್ಕುಗಳು- ಹಿಂಡು ಹಿಂಡಾಗಿರುವುದಿಲ್ಲ. ಬೆಕ್ಕಿನ ಪ್ರಕೃತಿಯನ್ನು ನಚ್ಚಲಾಗದ, ರೇಗಿದಾಗಸಾಕುವವರ ಮೇಲೆಯೂ ಬಿದ್ದು ಪರಚುವುದುಂಟು. ಹೆಣ್ಣು ಬೆಕ್ಕು ವರ್ಷಕ್ಕೆ ಎರಡು ಮೂರಾವೃತ್ತಿ ಒಂದೊಂದುಸಲಕ್ಕೆ ನಾಲ್ಕರಿಂದ ಆರುಮರಿಗಳವರೆಗೆ ಹಾಕುತ್ತದೆ. ಬೆಕ್ಕು ಸುಮಾರು ಹತ್ತು ಹನ್ನೆರಡು