ಇರುವ ೫೩ ವರ್ಷ ಬದುಕುವುದು, ಊರಬೆಕ್ಕು ವಿಶೇಷವಾಗಿ ಇಲಿ, ಹೆಗ್ಗಣ ಮುಂತಾದ ಚಿಕ್ಕ ಚಿಕ್ಕ ಪ್ರಾಣಿಗಳನ್ನು ತಿನ್ನುತ್ತದೆ. ಸಾಕಿದ ಬೆಕ್ಕು ಅನ್ನ, ಹಾಲು, ಮೊಸರು ಮೊದಲಾದುವನ್ನು ತಿನ್ನುವುದು ಬೆಕ್ಕಿಗೆ ಹಾಲಿನ ಮೇಲೆ ಬಹಳ ಆಸೆ, ಹಾಲನ್ನು ಎಲ್ಲಿಟ್ಟಿದ್ದರೂ ಮೋಸ ಮಾಡಿ ಕುಡಿದು ಬಿಡುತ್ತದೆ. ಬೆಕ್ಕು ಇಲಿಯ ದೊಡ್ಡ ಶತ್ರು. ಇಲಿಗಳ ಹಾವಳಿಯನ್ನು ತಪ್ಪಿಸಲು ಬೆಕ್ಕನ್ನು ಸಾಕುವರು. ಪ್ಲೇಗು ಜಾಡ್ಯವು ಇಲಿಯ ಮೂಲಕ ಬಲುಬೇಗ ಹರಡಿಕೊಳ್ಳುವುದರಿಂದ ಇಲಿಗಳನ್ನು ಧ್ವಂಸ ಮಾಡಬೇಕೆಂತಲೂ, ಈ ಕೆಲಸವು ಬೆಕ್ಕುಗಳಿಂದ ಸುಲಭವಾಗಿ ನಡೆವ ಕಾರಣ, ಇವುಗಳನ್ನು ಸಾಕಿದರೆ ಪ್ಲೇಗು ಬಲುಮಟ್ಟಿಗೆ ನಿವಾರಣೆಯಾಗಬಹುದೆಂತಲೂ ದೊಡ್ಡ ವೈದ್ಯರು ಅಭಿಪ್ರಾಯಪಡುತ್ತಾರೆ. ಬೆಕ್ಕು ಸತ್ತ ಮೇಲೆ ಅದರ ಮಾಂಸವನ್ನು ಕೆಲವರು ತಿನ್ನುತ್ತಾರೆ. ಅದರ ಚರ್ಮವನ್ನು ನಯಮಾಡಿ ಅಂಗಿ ಮುಂತಾದುದಕ್ಕೆ ಉಪಯೋಗಿಸುವುದುಂಟು. _5, ಇರುವೆ. ಇರುವೆಗಳು ಸಮಸ್ತ ದೇಶಗಳಲ್ಲಿಯೂ ಇರುತ್ತವೆ. ಉಷ್ಣವಲಯದ ಸೀಮೆಗಳಲ್ಲಿ ವಿಶೇಷ, ಶೀತವಲಯದ ಕಡೆಗೆ ಬರುಬರುತ ಕಡಮೆ. ಇರುವೆಯ ದೇಹವನ್ನು ತಲೆ, ಎದೆ, ಕಿಬ್ಬೊಟ್ಟೆ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ತಲೆಯಲ್ಲಿ ಜ್ಞಾನೇಂದ್ರಿಯವೂ ಎದೆಯಲ್ಲಿ ಚಲನಶಕ್ತಿಯೂ, ಕಿಬ್ಬೊಟ್ಟೆಯಲ್ಲಿ ಜನನೇಂದ್ರಿಯವೂ ಇವೆ. ಇರುವೆಗೆ ಆಯುಧಗಳಾದ ಮುಳ್ಳುಗಳು ಕಿಬ್ಬೊಟ್ಟೆಯಲ್ಲಿರುತ್ತವೆ. ಪ್ರತಿ ಭಾಗವೂ ಅನೇಕ ಖಂಡಗಳ ಸಂಧಿಯಿಂದ ಕೂಡಿದೆ ಎದೆಯಲ್ಲಿ ಮೂರು ಖಂಡಗಳಿವೆ. ಪ್ರತಿಖಂಡಕ್ಕೂ ಒಂದು ಜತೆ ಕಾಲಿರುವುದು ಒಂದೊಂದು ಕಾಲಿನಲ್ಲಿಯೂ ಐದೈದು ಕೀಲುಗಳಿವೆ ಗಂಟಲಿನ ಕೆಳಗೆ ಒಂದು ಚೀಲವೂ, ಇದರ ಕೆಳಗೆ ಜಠರವೂ ಕರುಳುಗಳೂ ಇವೆ. ಇರುವೆಗೆ ಶ್ವಾಸಕೋಶಗಳಿಲ್ಲ; ಇವಕ್ಕೆ ಬದಲು ವಾಯುಸಂಚಾರವುಳ್ಳ ಸೂಕ್ಷ್ಮ ವಾದನಾಳಗಳಿವೆ. ಇವುಗಳ ಹೊರಗಡೆ ರಂಧ್ರಗಳಿರುವುವು. ದೇಹಕ್ಕೆ ಒರಟಾದ ಕವಚವಿದೆ. ಇದರ ಮೇಲೆ ಮೃದುವಾದ ಚರ್ಮವುಂಟು. ಇದರಲ್ಲಿ ಪೊರೆಗಳೂ ಕೂದಲೂ ಅತಿಸೂ
ಪುಟ:ಪ್ರಬಂಧಮಂಜರಿ.djvu/೭೧
ಗೋಚರ