ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಪ್ರಬಂಧಮಂಜರಿ ಎರಡನೆಯ ಭಾಗ ಕ್ಷವಾದ ಗ್ರಂಥಿಗಳೂ ಇವೆ. ಇರುವೆಗಳಲ್ಲಿ ಗಂಡು, ಹೆಣ್ಣು, ನಪುಂಸಕ ಎಂದು ಮೂರು ಜಾತಿಗಳು. ಗಂಡಿಗಿಂತ ಹೆಣ್ಣು ದೊಡ್ಡದು ಇವೆರಡಕ್ಕೂ ರೆಕ್ಕೆ ಗಳುಂಟು. ನಪುಂಸಕಗಳಿಗೆ ರೆಕ್ಕೆಗಳಿಲ್ಲ. ಇರುವೆಗಳಿಗೆಲ್ಲಾ ಸ್ಪಷ್ಟವಾದ ಕಣ್ಣುಗಳಿವೆ. ಮೊಟ್ಟೆಯನ್ನಿಡುವ ನಾಳದಲ್ಲಿ ತೀಕ್ಷವಾದ ಒಂದು ಬಗೆಯ ದ್ರವವಿರುವುದು, ಇರುವೆಯು ಆ ನಾಳದಿಂದ ಕುಕ್ಕಿ ಈ ದ್ರವವನ್ನು ಸುರಿಸುವುದು. ಇದನ್ನೆ ಇರುವೆಯ ಕಡಿತವನ್ನು ವರು. ಗಂಡು ಹೆಣ್ಣುಗಳಿಗೆ ಮೊಟ್ಟೆಯಿಡು ವುದೊಂದೇ ಕೆಲಸ, ನಪುಂಸಕಗಳೇ ಸಕಲ ಕಾರ್ಯಗಳನ್ನೂ ಮಾಡುತ್ತವೆ. ಇರುವೆಗಳಿಗೆ ಧಾನ್ಯ, ಹುಳು, ಹಣ್ಣು, ಸತ್ತ ಪ್ರಾಣಿ, ಬೆಲ್ಲ ಮುಂತಾದ ಸಿಹಿ ಪದಾರ್ಥ ಇವು ಆಹಾರ, ಇರುವೆಗಳಲ್ಲಿ ಕೆಲವು ಕರಿಯವು, ಕೆಲವು ಬಿಳಿಯವು, ಇನ್ನು ಕೆಲವು ಕೆಂಪಿನವು, ಕಪ್ಪು ಮತ್ತು ಕೆಂಪಿನ ಇರುವೆಗಳಲ್ಲಿ ಸಣ್ಣಿರುವೆ, ಕಟ್ಟಿರುವೆ ಎಂಬ ಎರಡು ಬಗೆಗಳುಂಟು. ಬಿಳಿಯಿರುವೆಯನ್ನು ಗೆದ್ದ ಲೆನ್ನು ವರು, ಇರು. ವೆಗಳು ನೆಲದೊಳಗೆ ಕೊರೆದು ಗುಂಡಿಗಳನ್ನು ಮಾಡಿಕೊಂಡು ಕೊರೆದ ಮಣ್ಣನ್ನೆಲ್ಲಾ ಹೊರಗೆ ರಾಶಿಹಾಕುತ್ತವೆ. ಹೀಗೆ ಗೆದ್ದಲು ಮಾಡಿದಮಣ್ಣಿನ ರಾಶಿಗೆ ಹುತ್ತವನ್ನು ವರು, ಹುತ್ತವು ಒಂದಾಳಷ್ಟು ಎತ್ತರ ಇರುವುದುಂಟು. ಇರುವೆಗೆ ಸಿಹಿಯಾದ ಪದಾರ್ಥಗಳ ಮೇಲೆ ಬಹಳ ಆಸೆ. ಇಂಥ ವಸು . ವನ್ನು ಎಲ್ಲಿದ್ದರೂ ಕಂಡುಕೊಂಡು, ಕೂಡಲೇ ತನ್ನ ಜತೆಯ ಇರುವೆಗಳನ್ನು ಕರೆದು ಎಲ್ಲವೂ ಸೇರಿ ಅದನ್ನು ತಿಂದು ಬಿಡುತ್ತವೆ. ಇರುವೆಗಳು ಯಾವಾಗಲೂ ಸಾವಿರಾರು ಕೂಡಿ ಗುಂಪು ಗುಂಪಾಗಿರುವುವು. ಒಂದರ ಹಿಂದೆ ಒಂದು ಸಾಲಾಗಿ ಸಂಚಾರ ಮಾಡುವುವು ಬಿಸಿಲಲ್ಲಿ ಕೆಲಸ ಮಾಡುವುದು ಇರುವೆಗಳಿಗೆ ಬಹಳ ಇಷ್ಟ. ಬೇಸಿಗೆಯಲ್ಲಿ ಕ್ಷಣವೂ ಬಿಡುವಿಲ್ಲದೆ ದುಡಿದು ತಿಂಡಿಯನ್ನು ಸಂಪಾದಿಸಿ, ಬೇಕಾದಷ್ಟು ತಿಂದು, ಉಳಿದುದನ್ನು ಗೂಡಿನಲ್ಲಿ ಕೂಡಿಡುತ್ತವೆ. ಮಳೆಗಾಲದಲ್ಲಿ ಗೂಡು ಬಿಟ್ಟು ಹೊರಗೆ ಬರಲಾರವಾದುದರಿಂದ, ಕೂಡಿಟ್ಟ ತಿಂಡಿಯನ್ನು ಆಗ ತಿನ್ನು ತ್ಯಾ ಜೀವಿಸು ವುವು. ಇದರಿಂದ ಇರುವೆಗಳ ಜಾಣತನವೂ, ಮಿತವ್ಯಯವೂ, ಕಷ್ಟ ಪಟ್ಟು ಕೆಲಸ ಮಾಡುವ ಸ್ವಭಾವವೂ, ಮುಂದಾಲೋಚನೆಯೂ ವ್ಯಕ್ತವಾಗುವುವು. ಶೀತದೇಶದ