ಪುಟ:ಪ್ರಬಂಧಮಂಜರಿ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಪ್ರಬಂಧಮಂಜರಿ.-ಎರಡನೆಯ ಭಾಗ ನೆಲೆಗಳನ್ನು ಗರಿಗಳೆನ್ನು ವರು, ಗರಿಗಳು ಉದ್ದವಾಗಿಯೂ ಹಸುರಾಗಿಯೂ ನುಣುಪಾಗಿಯೂ ಇರುತ್ತವೆ. ಗಿಡದ ಕೊನೆಯಲ್ಲಿರುವ ಈ ಗರಿಗಳುದ್ದವು ಸುಮಾರು ಹದಿನೈದು ಅಡಿಗಳು. ಗರಿಗಳ ನಡುವೆ ಕಾಯಿಗಳ ಗೊಂಚಲುಗಳಿರುವುವು. ಒಳ್ಳೆಯ ಭೂಮಿಯಲ್ಲಿ ಬೆಳೆದಿರುವ ಗಿಡದಲ್ಲಿ ಗೊಂಚಲುಗಳು ಎಂಟರಿಂದ ಹನ್ನೆರಡರವರೆಗೂ ಇರುವುವು. ಇದರಿಂದ ಗಿಡವೊಂದಕ್ಕೆ ಎಂ. ಬತ್ತರಿಂದ ನೂರಿಪ್ಪತ್ತರತನಕ ಕಾಯಿಗಳಾಗುವುವು, ಕಾಯಿಗಳ ಮೇಲಿನ ಸಿಪ್ಪೆ ಹಸುರಾಗಿಯೂ ನುಣುಪಾಗಿಯೂ ಇದೆ. ಇದಕ್ಕೂ ಚಿಪ್ಪಿಗೂ ನಡುವೆ ನಾರು ಇರುವುದು. ಕಾಯಿಯ ಬುಡದಲ್ಲಿ ಕಪ್ಪಾದ ಮೂರುಕಣ್ಣುಗಳಿರುವುವು. ಇವುಗಳಲ್ಲಿ ಒಂದು ಕಣ್ಣಿನಿಂದ ಮಾತ್ರ ಮೊಳಕೆ ಹೊರಡುತ್ತದೆ. ಮಲಯಾಳದೇಶದಲ್ಲಿ ಹಾಕಿದ ಆರನೆಯ ವರ್ಷದಲ್ಲಿಯೇ ಹೂಬಿಡುವುದು. ಹೂಬಿಟ್ಟ ಆರು ತಿಂಗಳನಂತರ ಕಾಯಿ ಬಲಿವುದಕ್ಕೆ ಪ್ರಾರಂಭಿಸಿ ಒಂದು ವರ್ಷಕ್ಕೆ ಪೂರ್ಣ ಪಕ್ವವಾಗುವುದು. ಚೆನ್ನಾಗಿ ಬಲಿತ ತೆಂಗಿನಕಾಯಿಗಳನ್ನು ಮರದಿಂದಿಳಿಸಿ ತಂದು ಅವುಗಳನ್ನು ಒಂದು ತಿಂಗಳು ಒಣಗಿಸಿ ಹದಿನೈದು ದಿನಗಳ ವರೆಗೆ ಉಪ್ಪುನೀರಿನಲ್ಲಿ ನೆನೆಹಾಕಬೇಕು, ಬಳಿಕ ಆಳವಾಗಿ ಅಗೆದು ಗೊಬ್ಬರ ಹಾಕಿ ಹದಮಾಡಿರುವ ಭೂಮಿಯಲ್ಲಿ ಆ ಕಾಯಿ ಗಳನ್ನು ಸ್ವಲ್ಪ ಭಾಗ ಮೇಲೆ ಕಾಣುವಂತೆ ಹೂಳಬೇಕು. ಕ್ರಮವಾಗಿ ನೀರು ಹುಯ್ಯುತ್ತಾ ಬಂದರೆ ನಾಲೈದು ತಿಂಗಳೊಳಗೆ ಮೊಳಕೆ ಹೊರಟು ಸಸಿಗಳಾಗುತ್ತವೆ. ಸಸಿಗಳಿಗೆ ಆರು ತಿಂಗಳಾದ ಮೇಲೆ, ಎರಡಡಿ ಆಳ ಅಗೆದು ಗೊಬ್ಬರ ಹಾಕಿರುವ ಗುಂಡಿಗಳಲ್ಲಿ ಅವುಗಳನ್ನು ನಡಬೇಕು. ಎರಡು ವರ್ಷಗಳವರೆಗೆ ಕ್ರಮವಾಗಿ ನೀರು ಹಾಕಿದರೆ ಹತ್ತು ಹನ್ನೆರಡು ವರ್ಷಗಳಲ್ಲಿ ಫಲಬಿಡುತ್ತದೆ. ತೆಂಗು ಬೇರಿಂದ ತುದಿವರೆಗೂ ಕೆಲಸಕ್ಕೆ ಬರುವುದು. ಇದರ ಬೇರು ಮದವನ್ನುಂಟುಮಾಡುವುದು. ಕೆಲವೆಡೆ ಅಡಕೆಗೆ ಬದಲು ಇದರ ಬೇರನ್ನು ಹಾಕಿಕೊಳ್ಳುವರು. ತುದಿಯಲ್ಲಿನ ಗೆಡ್ಡೆ ಬಲು ರುಚಿಯಾಗಿರುವುದು. ಈ ಮರದಿಂದಲೂ ಹೆಂಡವನ್ನು ತೆಗೆವರು. ಇದನ್ನು ಬಟ್ಟಿಯಿಳಿಸಿ ಸಾರಾಯಿಮಾಡುವರು ರಸವನ್ನು ಕಾಯಿಸಿ ಬೆಲ್ಲಮಾಡುವುದುಂಟು. ಮರಗಳನ್ನು ಕಡಿದು ಮನೆಗಳಿಗೆ ಜಂತೆಗಳನ್ನು ಮಾಡುವರು, ಮರವನ್ನು ತೊಲೆಯಾಗಿ