ಪುಟ:ಪ್ರಬಂಧಮಂಜರಿ.djvu/೯೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಗಿಡಗಳು, ೬೯ ಬೆಳೆವುವು. ಇನ್ನು ಕೆಲವು ವಿಶೇಷವಾಗಿ ರೆಂಬೆಗಳೂ ಎಲೆಗಳೂ ತುಂಬಿ - ಕೊಂಡು ನಾಲ್ಕು ಕಡೆಗೂ ಹರಡಿಕೊಳ್ಳುತ್ತವೆ. ಶೀತದೇಶಗಳಲ್ಲಿ ಕೆಲವು ಗಿಡಗಳು ಬೇರಿನಿಂದ ತುದಿವರೆಗೆ ಮೂರು ನಾಲ್ಕ೦ಗುಲಗಳು ಇವೆ. ಉಷ್ಣ ರಾಜ್ಯಗಳಲ್ಲಿ ಕೆಲವು ಮರಗಳು ಮುನ್ನೂ ರಡಿ ಎತ್ತರ ಬೆಳೆವುದುಂಟು. ಪ್ರತಿಯೊಂದು ಗಿಡವೂ ಬೀಜದಿಂದಾದುದು. ಮೊದಲು ಬೀಜವು ಮೊಳೆತು ಸಸಿಯಾಗಿ ಆ ಮೇಲೆ ದೊಡ್ಡ ಗಿಡವಾಗುತ್ತದೆ. ಗಿಡಗಳಿಗೆ ನಮ್ಮಂತೆ ದೇಹಗಳೂ ಅವಯವಗಳೂ ಉಂಟು, ನಾವು ಆಹಾರವನ್ನು ಹೊಟ್ಟೆಯೊಳಕ್ಕೆ ತೆಗೆದುಕೊಳ್ಳುವಂತೆ ವೃಕ್ಷಗಳೂ ತಮ್ಮ ಆಹಾರವನ್ನು ಹೊರಗಿನ ಗಾಳಿಯಿಂದ ಎಲೆಗಳ ಮೂಲಕ ಎಳೆದುಕೊಳ್ಳುತ್ತವೆ. ನಮ್ಮ ಆಹಾರವನ್ನು ರಕ್ತವು ಸಕಲಾವಯವಗಳಿಗೂ ಹೊತ್ತುಕೊಂಡು ಹೋಗಿ ನಮ್ಮ ದೇಹವನ್ನು ಪೋಷಿಸುವಂತೆ, ಎಲೆಗಳ ಮಲಕ ಒಳಕ್ಕೆ ತೆಗೆದುಕೊಂಡ ಆಹಾರವನ್ನು ಗಿಡದ ರಸವು ಎಲ್ಲಾ ಭಾಗಗಳಿಗೂ ನಡೆಸುತ್ತದೆ. ಪ್ರತಿ ವರ್ಷವೂ ಒಂದು ಋತುವಿನಲ್ಲಿ ಒಂದೊಂದು ವೃಕ್ಷಕ್ಕೂ ಎಲೆಗಳೆಲ್ಲಾ ಉದುರಿಹೋಗಿ ಇನ್ನೊಂದು ಋತುವಿನಲ್ಲಿ ಮತ್ತೆ ಹುಟ್ಟುವುವು. ಮನುಷ್ಯರಲ್ಲಿ ಕೆಲವರು ಅದ್ಭುತವಾದ ಗುಣವುಳ್ಳವರಾಗಿರುವರಷ್ಟೆ. ಹಾಗೆಯೇ ವೃಕ್ಷಗಳಲ್ಲಿಯೂ ಕೆಲವು ವಿಲಕ್ಷಣಗುಣವುಳ್ಳವು ಇವೆ. ದಕ್ಷಿಣ ಅಮೆರಿಕಾ ಖಂಡದಲ್ಲಿ ಪಶುವೃಕ್ಷವೆಂಬ ಒಂದು ವಿಚಿತ್ರವಾದ ವೃಕ್ಷವುಂಟು. ಅದನ್ನು ಮೊನೆಯುಳ್ಳ ಆಯುಧದಿಂದ ಚುಚ್ಚಿದಕೂಡಲೇ ಹಸುವಿನ ಹಾಲಿನಂತಿರುವ ರಸವು ಅದರಲ್ಲಿ ಹೊರಡುವುದು. ಸೂರ್ಯೋದಯ ಕಾಲದಲ್ಲಿ ಅಧಿಕವಾಗಿ ಹೊರಡುವ ಈ ರಸವನ್ನು ಅಲ್ಲಿನ ಜನರು, ದೊಡ್ಡ ಪಾತ್ರೆಗಳಲ್ಲಿ ಹಿಡಿದು ಅಲ್ಲಿಯೇ ಕುಡಿವರು. ಅದೇ ಸೀಮೆಯಲ್ಲಿ ವಸ್ತ್ರವೃಕ್ಷವೆಂಬ ಇನ್ನೊಂದು ತರದ ಮರವಿದೆ. ಇದರ ಮುಂಡವನ್ನು ಮೂರಡಿಯ ತುಂಡುಗಳಾಗಿ ಕತ್ತರಿಸಿ ಒಂದೊಂದು ತುಂಡಿನಲ್ಲಿಯೂ ಇರುವ ತಿಗುಡನ್ನು ತೆಗೆದು ಹಾಕಿದರೆ ಗಟ್ಟಿಯಾದ ತೊಗಟೆಯು ಮನುಷ್ಯ ಶರೀರ ಹಿಡಿವಷ್ಟು ಇರುವುದು. ಇದರ ಪಕ್ಕಗಳಲ್ಲಿ ಕೈತೂರಿಸುವುದಕ್ಕೆ ಸ್ಥಳ ಮಾಡಿಕೊಂಡು ಅಲ್ಲಿನ ಬೇಡರು ಇದನ್ನು ಅಂಗಿಯಂತೆ ತೊಟ್ಟುಕೊಳ್ಳುವರು, ಆಫ್ರಿಕಾಖಂಡದಲ್ಲಿ ಒಂದು. ವಿಜಾತೀಯವಾದ ಮರವುಂಟು. ಇದರ ಕಾಯಿಯೊಳಗಿರುವ ತಿರುಳನ್ನು