ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪ | ಪ್ರಸ್ತುತ
ಆದರೆ ಬದಲಾವಣೆಯ ವಾದವು ಕಲೆಯನ್ನು ಕೆಡಿಸುವ, ಅದರ ಸೌಂದರ್ಯವನ್ನು ನಾಶಮಾಡುವ ಪರವಾನಿಗೆ ಆಗಬಾರದೆಂಬ ಎಚ್ಚರವೂ ನಮಗಿರಬೇಕು.
ಬದಲಾವಣೆಯನ್ನು ತರುವವನು, ಅದನ್ನು ಮಾಡಿಸುವವನು, ಒಪ್ಪಿಕೊಳ್ಳು ವವನು ಕರ್ತಾ, ಕಾರಯಿತಾ, ಪ್ರೇರಕ, ಅನುಮೋದಕ ಎಂಬಂತೆ, ಅದರ ಒಳಿತು ಕೆಡುಕುಗಳಿಗೆ ಹೊಣೆಗಾರನಾಗಿರುತ್ತಾನೆ.
ಸೈದ್ಧಾಂತಿಕ ದೃಷ್ಟಿ
ಒಂದು ಬದಲಾವಣೆ ಅಥವಾ ನೂತನ ಸೃಷ್ಟಿಯ ಹಿಂದೆ ಏನು ಸೈದ್ಧಾಂತಿಕ ದೃಷ್ಟಿಕೋನವಿದೆ? ಎಂಬ ಪ್ರಶ್ನೆಯು ಬಹಳ ಮುಖ್ಯವಾದುದು. ಯಾವ ಪರಿ ವರ್ತನೆ ಕಲೆಯ ಕಲಾರೂಪಕ್ಕೆ ಸೇರಿ, ಸಾವಯವವಾಗಿ ಕಾಣುತ್ತದೆ, ಯಾವುದು ತೇಪೆಯಂತೆ ವಿಲಕ್ಷಣವಾಗಿ ಕಾಣುತ್ತದೆ ಎಂಬುದಕ್ಕೆ ನಿರ್ವಿಕಾರ ದೃಷ್ಟಿಯ ಪ್ರಾಮಾಣಿಕ ಅನುಭವವೇ ಸಾಕ್ಷಿ, ಉದಾಹರಣೆಗೆ, ಹಿಂದೆ ತೆಂಕುತಿಟ್ಟಿನಲ್ಲಿ ಇಂದ್ರಜಿತುವಿನ ವೇಷವು ರಾವಣನಂತೆ ಬಟ್ಟಲು ಕಿರೀಟದ ಬಣ್ಣದ ವೇಷವಾಗಿ ದ್ದುದು, ಈಗ ಕೋಲು ಕಿರೀಟದ, ಉಗ್ರಮುಖ ವರ್ಣಿಕೆಯ ಆರೆ ಬಣ್ಣ ವೇಷ ವಾಗಿದೆ. ಇದು ಯಕ್ಷಗಾನ ವಿಧಾನದೊಳಗಿನ ಪರಿವರ್ತನೆ. ಇದು ಕಲಾದೃಷ್ಟಿಯಿಂದ ದೋಷವೆನಿಸುವುದಿಲ್ಲ. ಆದರೆ, ತಲೆಗೆ ರುಮಾಲು ಸುತ್ತಿ ಮೈಬಿಟ್ಟು ಬರುವ ದ್ರೋಣ, ಆಧುನಿಕ ನಾಟಕ ಶೈಲಿಯ ಕ್ಯಾಲೆಂಡರ್ ಕೃಷ್ಣ ಇವರು ಇತರ ವೇಷ ಗಳೊಂದಿಗೆ ಮೇಲೈಸಿ ನಿಲ್ಲುವುದಿಲ್ಲ. ದೇವೇಂದ್ರನ ಒಡ್ಡೋಲಗದಂತಹ ದೃಶ್ಯ ದಲ್ಲಿ ಇದನ್ನು ಸ್ಪಷ್ಟವಾಗಿ ಕಾಣುತ್ತೇವೆ. ದೇವೇಂದ್ರನ ವೇಷ ಪರಂಪರೆಯ ಪೀಠಿಕೆವೇಷವಾಗಿರುತ್ತದೆ. ಅದರೊಂದಿಗೆ ಬರುವ ದಿಕ್ಪಾಲಕರಲ್ಲಿ ಒಬ್ಬನು ತಲೆ ಬಿಟ್ಟು ಟೋಪನ್ ಇಟ್ಟ ವೇಷ, ಮತ್ತೊಬ್ಬನು ಜುಟ್ಟು ತುರಾಯಿ ಕಟ್ಟಿದ ವೇಷ, ಇನ್ನೊಬ್ಬನದು ಸಂಪ್ರದಾಯದ ಪಗಡಿ ವೇಷ-ಹೀಗಿದ್ದರೆ ಅವ್ಯವಸ್ಥೆಯೂ, ಶೈಲಿ ಭಂಗವೂ ಕಾಣದಿರುವುದಿಲ್ಲ. ಇಂತಹದೇ ಇತರ ಸಂದರ್ಭಗಳನ್ನು ಕಲೆಯ ಇತರ ಅಂಗಗಳಿಗೂ ಅನ್ವಯಿಸಿ ನೋಡಬಹುದು.
ಕಲೆಯೂ , ಭಾಷೆಯೂ ಪರಿವರ್ತನಶೀಲವೆಂದಮಾತ್ರದಿಂದಲೇ ಬದಲಾ ವಣೆಯು ಸಾಧುವೆನಿಸಲಾರದು. ಪರಿವರ್ತನೆಯ ಹಿಂದೆ ಜವಾಬ್ದಾರಿ ಇದೆ. ತಿದ್ದು ಪಾಟು ಎಂಬುದು ಅಂಗಭಂಗವೂ ರೂಪಭಂಗವೂ ಆಗಬಾರದಷ್ಟೆ. ಅದು ಕಲೆಯಲ್ಲಿ ಒಂದು ಸಾವಧಾನದ ಪ್ರಕ್ರಿಯೆಯಾಗಿ, ಸೌಂದರ್ಯಾತ್ಮಕ ಮತ್ತು ಗುಣಾ ತ್ಮಕ ಔನ್ನತ್ಯವನ್ನು ತರಬೇಕು. ಆ ಮಾಧ್ಯಮದೊಳಗೆ ಒಗ್ಗಬೇಕು. ಒಪ್ಪಬೇಕು. ಇದು ಮೌಲಿಕ ಕಲಾಸಿದ್ಧಾಂತ. ಇದನ್ನು ಯಕ್ಷಗಾನದ ಸಂದರ್ಭದಲ್ಲಿ ಗಮನಿಸ ದಿರುವುದೇ, ಈ ರಂಗದ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಯಾವುದೇ ಹೊಸತನದ ಮುಂದೆ ಬರುವ ನ್ಯಾಯವಾದ ಪ್ರಶ್ನೆ “ಈ ಹೊಸತನ ಯಾಕಾಗಿ?