ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬ | ಪ್ರಸ್ತುತ
ಪ್ರಸಂಗ-ಅಭಿನಯ

ಯಕ್ಷಗಾನದಲ್ಲಿ ಪ್ರಸಂಗವೆಂಬ ಹಾಡುಗಬ್ಬದ, ಹಾಡುವಿಕೆಗೆ, ಕಲಾವಿದನು ನರ್ತಿಸಿ, ಪುನಃ ಮಾತಿನಿಂದ ಅದನ್ನು ಚಿತ್ರಿಸುವುದು ಕ್ರಮ. ಅರ್ಥ, ಅಭಿನಯಗಳು ಪ್ರಸಂಗವೆಂಬ ಪದ್ಯದ ರೂಪಾಂತರಗಳು, ಅಥವಾ ಪ್ರತಿಸೃಷ್ಟಿಗಳು. ಪ್ರಸಂಗವು, ಅಭಿನಯವಾಗಿ ಮಾರ್ಪಡುವ ಪ್ರಕ್ರಿಯೆ ತುಂಬ ಸೂಕ್ಷ್ಮವಾದುದು. ಪದ್ಯಗಳಲ್ಲಿ ರುವುದನ್ನೆಲ್ಲ ರಂಗದಲ್ಲಿ ತರುವುದು ಅಪೇಕ್ಷಿತವೂ ಅಲ್ಲ, ಸಾಧ್ಯವೂ ಅಲ್ಲ. ಸಾಲದು ಕೂಡ. ಪದ್ಯದ ಆಧಾರದಲ್ಲಿ, ಪ್ರದರ್ಶನ ರೂಪುಗೊಳ್ಳುವಾಗ ಪದ್ಯದ ಇನ್ನೊಂದು ದೃಷ್ಟಿಯಲ್ಲಿ, ಪ್ರಸಂಗದ ಹಾಡುಗಳಲ್ಲಿದ್ದುದಷ್ಟನ್ನೆ ಅಭಿವ್ಯಕ್ತಿಸಿದರೆ ಕತೆ, ವಸ್ತು, ಹಿನ್ನೆಲೆಗಳು ವಿಸ್ತರಣಗೊಂಡು 'ರಂಗ ಆಯಾಮ' ಪಡೆಯಬೇಕು. ಹಾಗಾಗಿ, “ಪ್ರಸಂಗದ ಪದ್ಯದಲ್ಲಿ ತೀರ ಪ್ರಕಟವಾಗಿ, ಯಾ ಅತಿಯೆನಿಸಿಕೊಂಡು, ಶಬ್ದ ಗಳಿವೆ. ನಾನು ಅದನ್ನ ಕಾಣಿಸಿದ” ಎಂಬುದೂ ಕೂಡ, ಎಲ್ಲ ಸಂದರ್ಭ ಗಳಲ್ಲಿ ಸೂಕ್ತವಾದ ಸಮರ್ಥನೆಯಾಗಲಾರದು. ಮಾತ್ರವಲ್ಲ, ಪ್ರಸಂಗದ ಪದ್ಯವೇ ಆದರೂ ಹಲವು ಸಾಧ್ಯತೆಗಳನ್ನು ಒಳಗೊಂಡಿರುತ್ತದೆ.
ಇಲ್ಲಿ ಒಂದು ಸ್ವಾರಸ್ಯಕರ ಉದಾಹರಣೆಯನ್ನು ಸ್ಮರಿಸಬಹುದು. ವಿಶ್ವಾ ಮಿತ್ರ ಮೇನಕೆ ಆಟದ ಪ್ರದರ್ಶನವನ್ನು ಕಂಡ ಹಿರಿಯ ಅರ್ಥದಾರಿ ದಿ| ದೇರಾಜೆ ಸೀತಾರಾಮಯ್ಯನವರು, ಮೇನಕೆ ಪಾತ್ರಧಾರಿಯೊಂದಿಗೆ ಚರ್ಚಿಸುತ್ತ ಕೇಳಿದ್ದರು. “ಗಾಳಿಬೀಸಿತು ಸೆರಗು ಹಾರಿತು ಎಂಬ ಭಾವದ ಪದ್ಯವುಂಟಲ್ಲಾ. ಅದಕ್ಕೆ ಹೇಗೆ ಅಭಿನಯಿಸಬೇಕು? ಸೆರಗನ್ನು ಜಾರಿಸಿಕೊಳ್ಳಬೇಕೊ? ಹಾರುತ್ತಿರುವ ಸೆರಗನ್ನು ಎಳೆದುಕೊಂಡಂತೆ ಅಭಿನಯಿಸಬೇಕೊ?” ಹೀಗೆ ಒಂದೇ ಪದ್ಯಕ್ಕೆ ಎರಡು ತೀರ ವಿರುದ್ಧವಾದ ಸಾಧ್ಯತೆಗಳನ್ನು ಅವರು ಪ್ರಸ್ತಾಪಿಸಿದರು. ಇದನ್ನು ಕೇಳಿದ ಸ್ತ್ರೀ ಪಾತ್ರಧಾರಿಗೆ (ಕೋಳೂರು ರಾಮಚಂದ್ರ ರಾವ್) ಸೂಕ್ಷ ಹೊಳೆಯಿತು. ಕೂಡಲೇ ಅವರು ಪ್ರದರ್ಶನ ಸಂದರ್ಭವನ್ನು ನೆನಪಿಸಿ “ನೀವು ಹೇಳಿದುದೇ ಸರಿ. ಇನ್ನು ಮುಂದಕ್ಕೆ ಸರಿಪಡಿಸುತ್ತೇನೆ” ಎಂದರಂತೆ. ಅಂದರೆ, ಪದ್ಯದಲ್ಲಿ ಇದ್ದುದನ್ನೇ ಆದರೂ,ಮಾತು, ಚಲನೆಗಳ ಮೂಲಕ ಅಭಿ ವ್ಯಕ್ತಿಸಲು ಹಲವು ರೀತಿಗಳು ಸಾಧ್ಯವಿವೆ. ಪ್ರಸಂಗದ ಸಂದರ್ಭ, ಪಾತ್ರದ ಸ್ವರೂಪ, ಕಲಾಶೈಲಿ, ಸ್ವಂತ ಕಲ್ಪನೆ, ಸಹಕಲಾವಿದನ ಕಲ್ಪನೆ ಇವೆಲ್ಲ ಒಟ್ಟು ಸೇರಿ ಹೊಂದಿ ದರೆ ಪ್ರಸಂಗ, ಪ್ರದರ್ಶನವಾಗುವಾಗ ಅದಕ್ಕೆ ಹದ ಒದಗುತ್ತದೆ. ಕಲಾನಿಷ್ಠೆ ಮತ್ತು ತನ್ನ ಮಾಧ್ಯಮದ ಬಗೆಗೆ, ಅದರ ಗುಣ, ದೋಷಗಳ ಕುರಿತು, ಅದರ ಸಾಧ್ಯತೆ ಗಳ ಕುರಿತು. ಅಂತೆಯೇ, ಅದರ ಮಿತಿಗಳ ಕುರಿತೂ ವ್ಯಾಪಕ ಯೋಚನೆ ಯಿಂದ, ಈ ಹದವನ್ನು ಬೆಳೆಸುವುದು ಸಾಧ್ಯ. ಅಗ್ಗದ ಅನುಕರಣೆಯಿಂದ ಕಲೆ ಯನ್ನು ಬೆಳೆಸುವುದು, ಮಾಧ್ಯಮಕ್ಕೆ ಲಾಭಕರವಲ್ಲ. ಅದು ಕಲೆಯಲ್ಲಿ ಸಂಪ್ರದಾಯಗಳನ್ನು ನಿರ್ಮಿಸಲಾರದು. ಎರಡು ಕಲಾ ಮಾಧ್ಯಮಗಳೊಳಗೆ