ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಲಾಸ್ವರೂಪ ಮತ್ತು ಅಭಿವ್ಯಕ್ತಿ ವಿಧಾನ / ೭

ಮುಖಾಮುಖಿ ನಡೆದಾಗ, ಕಲಾವಿದನು ಪ್ರಭಾವವನ್ನು ಸ್ವೀಕರಿಸುವಲ್ಲಿ ಬಹಳ ಎಚ್ಚರಿಕೆವಹಿಸಬೇಕಾಗುತ್ತದೆ. ಅನ್ಯ ಕಲಾಮಾಧ್ಯಮದ ಸಿದ್ದಿಯು, ನಮಗೆ ನಮ್ಮ ಮಾಧ್ಯಮದಲ್ಲಿ ಹೊಸ ಸೃಷ್ಟಿಗೆ ಪ್ರೇರಕವಾಗಬೇಕು ಹೊರತು, ಅದನ್ನು ಹಾಗೆಯೇ ಇಲ್ಲಿ ತಂದುಬಿಡುತ್ತೇನೆ ಎಂಬ ತವಕವನ್ನು ಉಂಟುಮಾಡಬಾರದು. ಪ್ರಭಾವ ಸ್ವೀಕರಣವು ಅವಸರದ್ದಾದರೆ, ಅದು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಕಲೆ ಯನ್ನೂ, ಕಲಾವಿದನನ್ನೂ ಹಳಿತಪ್ಪಿಸುತ್ತದೆ.
ಸ್ಥಿರ -ಚರ ಸಮನ್ವಯ
ಯಕ್ಷಗಾನದಂತಹ ಪಾರಂಪರಿಕ ಕಲೆಯಲ್ಲಿ, ಅದಕ್ಕಿರುವ ಸ್ವಂತಿಕೆಯೆಂಬು ದನ್ನು ಅದರ ಸ್ಥಿರ ಅಂಶವಾಗಿ ಸ್ವೀಕರಿಸಬೇಕು. ಅದು ಕಲೆಯ ಅಭಿವ್ಯಕ್ತಿಸ್ವರೂಪ, ಅದರ ಹೆಗ್ಗುರುತು. ಈ ಸ್ಥಿರಾಂಶದ ಮೇಲೆ, ಅದೇ ನೆಲೆಗಟ್ಟಿನಲ್ಲಿ, ಚರಾಂಶಗಳ ಕೃಷಿ ನಡೆಯಬೇಕು. ವಸ್ತು, ಆಶಯ, ವೇಷ, ಸಂಗೀತ, ನೃತ್ಯಗಳಲ್ಲಿ ನಾಜೂಕು ಗಳನ್ನು ತರುವ ಕೆಲಸವೂ ಇಂತಹ ಕೃಷಿಯಲ್ಲಿ ಸೇರುತ್ತದೆ. ಈ ಕೆಲಸವು ಮೊದ ಲಾಗಿ ಕಲಾಸ್ವರೂಪದ ಅನುಸಂಧಾನ, ಸ್ಥಿರೀಕರಣಗಳಿಂದ ಆರಂಭವಾಗಬೇಕು. ಯಕ್ಷ ಗಾನ ತನ್ನನ್ನು ತಾನು ಕಂಡುಕೊಳ್ಳುವ ಪ್ರಕ್ರಿಯೆ ಆರಂಭದ ಹಂತ. ನಮ್ಮ ಕಲೆಯ ಲ್ಲಿರುವ ಅಪಾರ ಸಂಪತ್ತಿನ ಪ್ರಜ್ಞೆ ನಮಗಿಲ್ಲದಿದ್ದರೆ, ಯಾವ ಸಾಧನೆಯೂ ಸಾಧ್ಯ ವಾಗಲಾರದು. ಕಲೆಯು ವಿಕಾರಗೊಳ್ಳದೆ, ವಿಕಾಸವನ್ನು ಪಡೆದುಕೊಳ್ಳಬೇಕಾದರೆ ಈ ಪ್ರಜ್ಞೆ ಮತ್ತು ಬುದ್ಧಿ ಪೂರ್ವಕ ಪ್ರಯತ್ನ ಆವಶ್ಯಕವಾಗಿದೆ.
ಎಲ್ಲರ ಹೊಣೆಗಾರಿಕೆ
ಇಂತಹ ಕೆಲಸ ತಾಳ್ಮೆಯಿಂದ ಗಂಭೀರವಾಗಿ ನಡೆಸುವಂತಹದು. ಇದು, ಅಭಿ ರುಚಿ ಶುದ್ಧಿ, ಸ್ಪಷ್ಟ ನಿಲುವುಗಳು, ಕಲೆಯ ಕುರಿತ ಗೌರವ ಮತ್ತು ಖಚಿತವಾದ ಪರಿ ಜ್ಞಾನಗಳನ್ನು ಬಯಸುತ್ತದೆ. ಅವಸರವಿಲ್ಲದ ದಿಟ್ಟತನವೂ ಹಪಹಪಿಕೆಯಿಲ್ಲದೆ ಕಲೆಗಾರಿಕೆಯನ್ನು ನಿರೀಕ್ಷಿಸುತ್ತದೆ. ಕಲಾವಿದರು, ಮೇಳಗಳ ಸಂಚಾಲಕರು, ತಜ್ಞ ವಿಮರ್ಶಕರು ಮತ್ತು ಸುವಿಚಾರಿಗಳಾದ ಪೋಷಕರು ಕೂಡಿ ಸಂಘಟಿಸಬೇಕಾದ ಮಹತ್ಕಾರವಿದು. ಇಂತಹ ಕೆಲಸದಲ್ಲಿ ನಮ್ಮ ಕಲಾವಿದರ, ಮೇಳಗಳ ಮಾಲೀಕರ ಸಹಕಾರ ಖಂಡಿತವಾಗಿ ದೊರೆಯುತ್ತದೆ. ಅವರಲ್ಲೂ ಈ ಬಗೆಗಿನ ಆಸಕ್ತಿ ಇದೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಾವ್ಯವು ವಿಮರ್ಶಕನ ಮೇಲೆ ಇದೆ. ವಿಮರ್ಶಕನ ಹೊಣೆ ಇಲ್ಲಿ ಬಹಳ ಹಿರಿದು. ಜಾಗ್ರತೆಯಿಂದ, ಖಚಿತವಾಗಿ, ಸೈದ್ಧಾಂತಿತವಾಗಿ ಅವನು ತನ್ನ ಹೊಣೆಯನ್ನು ನಿರ್ವಹಿಸಬೇಕು. ಪ್ರಿಯವಾಗಿ, ಮನದಟ್ಟಾಗುವ ರೀತಿಯಲ್ಲಿ ವಿಚಾರವನ್ನು ಮಂಡಿಸುವುದು ಅವನ ಕೆಲಸವೇ ಹೊರತು, ಬರಿಯ ಟೀಕೆ ಮಾಡುವುದಲ್ಲ. ಯಾರು ಸರಿ, ಯಾರು ತಪ್ಪು ಎಂಬ