ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮ | ಪ್ರಸ್ತುತ
ವ್ಯಕ್ತಿಪರ ಅಭಿಪ್ರಾಯಗಳಿಗಿಂತ, ಯಾವುದು ಸರಿ ಎಂಬುದಕ್ಕೆ ಪ್ರಾಮುಖ್ಯ ಸಲ್ಲ ಬೇಕು. ವ್ಯವಸ್ಥಿತವಾದ ವಿಮರ್ಶೆಯನ್ನು ವ್ಯವಸಾಯಿ ಕಲಾರಂಗಕ್ಕೆ ತಲುಪಿಸುವ ಕೆಲಸ ಈ ರಂಗದ ಅತ್ಯಂತ ಜರೂರಿನ ಆವಶ್ಯಕತೆಯಾಗಿದೆ.
ಈ ಸಂದರ್ಭದಲ್ಲಿ, ಕಲಾವಿದ ವಿಮರ್ಶಕ ಶ್ರೀ ಎಂ. ಎಲ್. ಸಾಮಗ ಅವರ ಮಾತೊಂದನ್ನು ಸೂತ್ರವಾಕ್ಯವೆಂದು ಪ್ರಸ್ತಾವಿಸುತ್ತೇನೆ. “ಕಲಾವಿದನೂ, ಪ್ರೇಕ್ಷಕನೂ, ವ್ಯವಸ್ಥಾಪಕನೂ ಹೊಂದಿರಬೇಕಾದ ಪ್ರಾಥಮಿಕ ಅರ್ಹತೆಯೆಂದರೆ ರುಚಿಶುದ್ಧಿ ”.












ಡಾ| ಚಂದ್ರಶೇಖರ ದಾಮ್ಲೆ ಅವರ ಲೇಖನವೊಂದಕ್ಕೆ ಪೂರಕವಾಗಿ ಬರೆದ ಟಿಪ್ಪಣಿಗಳ (ಉದಯವಾಣಿ ೨೫-೧೨-೧೯೯೨) -ಲೇಖನ ರೂಪ.