ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೪ / ಪ್ರಸ್ತುತ

ಶೈಲಿಯ ವಿನಾಶ
ಸುಮಾರು ೧೯೪೦ರ ದಶಕದ ಹೊತ್ತಿಗೆ, ಶತಮಾನಗಳ ಹಿನ್ನೆಲೆಯುಳ್ಳ ಈ ಕಲೆ, ಒಂದು ಸಮಗ್ರ, ಘನೀಕೃತ ಶೈಲಿಯನ್ನು ಹೊಂದಿ ಬೆಳೆಯಲಾರಂಭಿಸಿತು. ಆದರೆ ಆ ಹೊತ್ತಿಗಾಗಲೇ ಪ್ರವೇಶಿಸಿದ ಅನ್ಯ ಪ್ರಭಾವಗಳಿಂದ ಮುಂದಿನ ಮೂರು ದಶಕಗಳಲ್ಲಿ, ವಿಶೇಷತಃ ತೆಂಕುತಿಟ್ಟು ಯಕ್ಷಗಾನದ ಶೈಲಿ, ವಿನಾಶದತ್ತ ಸಾಗಿತು. ಮುಖ್ಯವಾದ ಪೆಟ್ಟು ಬಿದ್ದುದು ವೇಷಗಳ ಸ್ವರೂಪಕ್ಕೆ, ನಾಟಕಶೈಲಿಯ ವೇಷ ಭೂಷಣಗಳು, ಬಣ್ಣದ ಮಣಿಗಳ ಅಸ್ತವ್ಯಸ್ತವಾದ ಬಳಕೆ, ನೈಲೆಕ್ಸ್ ನೈಲಾನ್ ಬಟ್ಟೆಗಳು, ಆಕಾರ ರಚನೆಯ ಪ್ರಜ್ಞೆಯಿಲ್ಲದ ವೇಷ ಸಾಮಗ್ರಿಗಳು, ಇವುಗಳಿಂದ ಯಕ್ಷಗಾನದ ಶ್ರೀಮಂತವೂ, ಶೈಲಿಬದ್ಧವೂ ಆದ ಸುಂದರ ವೇಷಗಳ ಸರಣಿ ಮೂಲೆ ಪಾಲಾಗುತ್ತ ಬಂದಿದೆ. ನೃತ್ಯಕ್ಕೆ ಹೊಂದಿಕೆಯಿಲ್ಲದ ಆಕಾರ, ಬಣ್ಣಗಳಲ್ಲಿ ಕಲಾತ್ಮಕ ವ್ಯವಸ್ಥೆಯಿಲ್ಲದ ಮಾದರಿಗಳು ಬಂದಿದ್ದು, ಇವುಗಳೇ 'ಯಕ್ಷಗಾನ ಶೈಲಿ'ಯ ವೇಷಗಳೆಂದು ಕರೆಸಿಕೊಳ್ಳುವ ಸಾಧ್ಯತೆಯಿದೆ. ಹಿಮ್ಮೇಳದಲ್ಲೂ ಮದ್ದಲೆಯ ಬದಲಿಗೆ ಮೃದಂಗವೂ, ಗಾನ ಶೈಲಿಯಲ್ಲಿ ಆಧುನಿಕ ಕರ್ಣಾಟಕ ಸಂಗೀತದ ಬಳಕೆಯೂ ಹೆಚ್ಚಿದ್ದು, ಪರಿಸ್ಥಿತಿ ಗೋಜಲಾಗಿದೆ. ಶೈಲಿ ಬದ್ಧತೆಯ ಸ್ಥಾನದಲ್ಲಿ 'ಜನಪ್ರಿಯ' ಮಾದರಿಗಳು ನೆಲೆಯಾಗಿವೆ.

ಮಾರುಕಟ್ಟೆ

ಯಾವದೇ ವಸ್ತು ಅಥವಾ ಸೇವೆಯ ಉತ್ಪಾದನೆ ಹೆಚ್ಚಿದರೆ, ಅದಕ್ಕೆ ಸರಿದೂಗುವ ಮಾರುಕಟ್ಟೆ ವಿಸ್ತರಣಗೊಳ್ಳಬೇಕು. (Market expansion). ಯಕ್ಷಗಾನದ ಮಾರುಕಟ್ಟೆ ಕೆಲಮಟ್ಟಿಗೆ ವಿಸ್ತಾರಹೊಂದಿದ್ದರೂ, ಕ್ಷೇತ್ರ ಸೀಮಿತವಾಗಿದೆ. ಯಕ್ಷಗಾನದ ಮಾರುಕಟ್ಟೆ, ದ. ಕ., ಉ. ಕ., ಭಾಗಶಃ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಸೀಮಿತವಾಗಿದೆ. ಮಾರುಕಟ್ಟೆಯನ್ನು ಅಧ್ಯಯನ ಮಾಡುವ, ವಿಸ್ತರಿಸುವ ಪ್ರಯತ್ನಗಳಿಲ್ಲ. ಇದ್ದ ಮಾರುಕಟ್ಟೆಯೊಳಗೆ ಸ್ವರ್ಧೆ ನಡೆಯುತ್ತಿದೆ. ಭವಿಷ್ಯ ಬಿಕ್ಕಟ್ಟಿನಲ್ಲಿದೆ.

ಕಂಟ್ರಾಕ್ಟ್ ಪದ್ಧತಿ

ಹಳೆಯ ಮೇಳಗಳೂ, ಹೊಸತಾಗಿ ಹುಟ್ಟುತ್ತಿರುವ ಮೇಳಗಳೂ, ಕಂಟ್ರಾಕ್ಟ್ ಪದ್ಧತಿಯ ಬೆಂಬಲದಲ್ಲಿ ನಿಂತಿವೆ. ಆಟಗಳನ್ನು ಕಂಟ್ರಾಕ್ಟ್ ವಹಿಸಿಕೊಂಡು ಆಡಿಸುವ ಸಂಸ್ಥೆ, ವ್ಯಕ್ತಿಗಳ ಸಂಖ್ಯೆ ಇಳಿಮುಖವಾದರೆ, ಮೇಳಗಳ ಸಂಖ್ಯೆ ಕಡಿಮೆ ಆಗುವುದು ಅನಿವಾರ್ಯ. ಕಂಟ್ರಾಕ್ಟ್ ವಹಿಸಿಕೊಂಡು ಆಟ ಆಡಿಸುವ ಹೆಚ್ಚಿನವರಿಗೆ, ಯಕ್ಷಗಾನ, ಅದರ ಕಲಾಸೌಂದರ್ಯ, ಅದರ ಉಳಿವುಗಳ ಆಸಕ್ತಿ ಇಲ್ಲ. ಅವರ ಆಸಕ್ತಿ ಹಣಗಳಿಕೆ. ಒಂದು ದಿನದ ಆಸಕ್ತಿ ಅದು. ಹೆಚ್ಚು ಹಣ ಗಲ್ಲಾ ಪೆಟ್ಟಿಗೆಗೆ