ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ರಂಗಭೂಮಿಯ ಸಮಸ್ಯೆಗಳು / ೨೭

ಹೊಸತನವೆಂಬುದು ಬರಿಯ ಬದಲಾವಣೆಯಾಗಿ ಬಂದಾಗ ಆಗುವ ಗೊಂದಲಗಳು ಮಾತ್ರ ಇಂದು ಕಾಣಿಸುತ್ತಿವೆ.

ತುಳುಭಾಷೆ ಮತ್ತು ಯಕ್ಷಗಾನದ ಸಂಪ್ರದಾಯ
ತುಳು ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನವೆಂಬುದು ಈ ಕಲೆಯ ಹೊಸತೊಂದು ಮಜಲು ಇದರಿಂದ ಯಕ್ಷಗಾನದಲ್ಲಿ ವಸ್ತುವಿನ ವಿಸ್ತಾರ ಒದಗಿದೆ, ಕಲೆ ಜನರಿಗೆ ಹತ್ತಿರ ಹೋಗಿದೆ. ಆದರೆ, ತುಳು ಯಕ್ಷಗಾನ ರಂಗವು, ತೆಂಕುತಿಟ್ಟು ಯಕ್ಷಗಾನದ ವೇಷಗಳ ಪಾರಂಪರಿಕ ಸೌಂದರವನ್ನು ಉಧ್ವಸ್ತಗೊಳಿಸಿದ್ದು ನಿಚ್ಚಳ ಸತ್ಯ. ಹಳೆಯ ಪ್ರಸಂಗಗಳನ್ನು ಹಳೆಯ ಶೈಲಿಯಲ್ಲಿ ತುಳುವಿನಲ್ಲಿ ಆಡಿ, ಆ ಬಳಿಕ ತೌಳವ ಕತೆಗಳಿಗೆ ಬಾರದೆ, ಪಕ್ಕನೆ ನಡೆಸಿದ ತಿರುವಿನಿಂದ (sudden switch over) ಶೈಲಿ ಉಧ್ವಸ್ತವಾಗಿದೆ, ರೂಪಾಂತರವಾಗಿದೆ, ವಿರೂಪಕ್ಕೆ ಕಾರಣವಾಗಿದೆ. ತುಳುವನ್ನು ಯಕ್ಷಗಾನದ ರೂಪಕ್ಕೆ ಅಳವಡಿಸುವ ಕೆಲಸ ನಡೆಯಬೇಕಾಗಿದ್ದು, ಈ ನಿಟ್ಟಿನಲ್ಲಿ ಆಗುವ ಪ್ರಯತ್ನಕ್ಕೆ ಚಾಲನೆ ಸಿಗುವುದಗತ್ಯ. ಬಡಗುತಿಟ್ಟಿನಲ್ಲಿ ತುಳು ಯಕ್ಷಗಾನದಿಂದಾದ ಸಮಸ್ಯೆಗಳಿಲ್ಲ. ಕಾರಣ, ಬಡಗು ಕ್ಷೇತ್ರ ಕನ್ನಡ ಪ್ರದೇಶ. ಅಲ್ಲಿನ ಹೆಚ್ಚಿನ ಕಲಾವಿದರಿಗೆ ತುಳು ಬರುವುದಿಲ್ಲ. ಬರುತ್ತಿದ್ದರೆ, ಇದೇ ಸ್ಥಿತಿ ಅಲ್ಲಿಯೂ ಉಂಟಾಗುತ್ತಿತ್ತು.

ಬಡಗುತಿಟ್ಟು - ಉ. ಕನ್ನಡ
ಬಡಗುತಿಟ್ಟು ಯಕ್ಷಗಾನ ಬೇರೊಂದು ರೀತಿಯ ಸಮಸ್ಯೆಯನ್ನು ಎದುರಿಸುತ್ತಿದೆ. ವೇಷ, ಹಿಮ್ಮೇಳಗಳಲ್ಲಿ ಅದು ಸಂಪ್ರದಾಯ ಉಳಿಸಿಕೊಂಡಿದ್ದರೂ, ಅಲ್ಲಿ ಶೈಲಿಯೊಳಗಿನ ಗೊಂದಲ ಹೆಚ್ಚುತ್ತಿದೆ. ಉ. ಕನ್ನಡದ ಯಕ್ಷಗಾನದಲ್ಲಿ ಪದಾಭಿನಯ ವಿಸ್ತಾರ, ಭಾಗವತಿಕೆಯಲ್ಲಿನ ಆವರ್ತನೆಗಳು -ಇದು ಪೂರ್ವಪದ್ಧತಿ. ಅದಕ್ಕೆ ಅದರದ್ದಾದ ಚೌಕಟ್ಟೂ ಇದೆ. ಅಲ್ಲಿನ ಕಲಾವಿದರು ಅದೇ ಪರಂಪರೆಯಲ್ಲಿ ತರಬೇತಾದವರು. ಅವರಿಗೆ ದೊರೆತ ವಿಶೇಷ ಜನಪ್ರಿಯತೆಯಿಂದ, ಇನ್ನೊಂದು ಬಡಗುತಿಟ್ಟು (ಅಂದರೆ ಕುಂದಾಪುರ-ಉಡುಪಿ ಪ್ರದೇಶದ್ದು) ಅದನ್ನು ಅಳವಡಿಸಲು ಹೋಗಿ, ಚಡಪಡಿಸುತ್ತಿದೆ. ಬಡಗು ಶೈಲಿ, ಉ. ಕ. ಶೈಲಿಗಳ ಮಿಶ್ರಣ, ಸಮನ್ವಯ ವ್ಯವಸ್ಥಿತವಾಗಿಲ್ಲ. ಪದಾಭಿನಯದ ಹೆಸರಿನ ವಿಕಾರಗಳೂ, ಅಳತೆಯಿಲ್ಲದ ಚಾಲೂ ಕುಣಿತಗಳು, ಶಿಸ್ತಿಲ್ಲದ ಹಿಮ್ಮೇಳದ ವಾದನ, ಪದ್ಯಗಳ ಗತಿಗೆ ಹೊಂದದ ಗದ್ಯ ವಾಚನದಂತಹ ಹಾಡುಗಾರಿಕೆಗಳಿಂದ ಬಡಗು ಶೈಲಿ `ಒಳಗಿನಿಂದ' ನಾಶವಾಗುತ್ತಿದೆ.

ಹರಕೆ ಬಯಲಾಟಗಳಲ್ಲಿ
ಎರಡೂ ತಿಟ್ಟುಗಳಲ್ಲಿ ಸುಮಾರು ಹದಿನೈದು ಹರಕೆ ಬಯಲಾಟಗಳ ಮೇಳವಿದ್ದು, ಅವುಗಳಿಗೆ ವಿಶೇಷ ಪ್ರೋತ್ಸಾಹ ಇದೆ. ಅವು ಹೆಚ್ಚಾಗಿ ಹಳೆ ಪ್ರಸಂಗ ಗಳನ್ನೆ ಆಡುತ್ತಿವೆ. ಹರಕೆ ಆಟಗಳಿಗೆ ಗಲ್ಲಾ ಪೆಟ್ಟಿಗೆಯ ಹಂಗು ಇಲ್ಲ. ನಾವೀನ್ಯದ