ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸೈದ್ಧಾಂತಿಕ ಖಚಿತತೆಯ ಆವಶ್ಯಕತೆ

'ಯಕ್ಷಗಾನದಲ್ಲಿ ಅಭಿವ್ಯಕ್ತಿ ಕಲ್ಪನೆ' ಎಂಬುದರ ನಾಲ್ಕು ಮುಖಗಳ ಬಗೆಗೆ, ಒಳ್ಳೆಯ ಸಿದ್ಧತೆ ಮತ್ತು ವಿವೇಚನೆಗಳಿಂದ ಕೂಡಿದ ಪ್ರಬಂಧಗಳನ್ನು ಮಂಡಿಸಿದ ನಾಲ್ವರು ವಿದ್ವಾಂಸರನ್ನು ಅಭಿನಂದಿಸುತ್ತೇನೆ. ಇಂತಹ ಗೋಷ್ಠಿಗಳಿಂದ, ಯಕ್ಷ ಗಾನ ರಂಗದ ವಿಮರ್ಶೆಯಲ್ಲಿ ಹೊಸ ವಿಷಯಗಳ, ದಿಕ್ಕುಗಳ ಸಾಧ್ಯತೆ ಹೆಚ್ಚು ತ್ತದೆ. ಯಕ್ಷಗಾನ ವಿಮರ್ಶೆಯು ವ್ಯಾಪಕವೂ, ಉಪಯುಕ್ತವೂ ಆಗಬೇಕಾದರೆ, ಹೀಗೆ ವಿಭಿನ್ನ ಕೋನಗಳಿಂದ ಈ ಕಲೆಯ ಅಂಶಗಳನ್ನು ನೋಡಿ ವಿವೇಚಿಸುವ ಕ್ರಮ ವನ್ನು ಹೆಚ್ಚು ಹೆಚ್ಚು ಅನ್ವಯಿಸಬೇಕು. ಇದು ವಿಮರ್ಶಕರಿಗೆ ಹೊಸ ಚಿಂತನಾವ ಕಾಶಗಳನ್ನೂ, ಹೊಸ ಸವಾಲುಗಳನ್ನೂ ಒಡ್ಡುತ್ತದೆ. ಯಕ್ಷಗಾನ ವಿಮರ್ಶೆಯು ಆರಂಭಿಕ ಹಂತವನ್ನು ದಾಟಿ, ಪ್ರೌಢ ಕಲಾವಿಮರ್ಶೆಯ ಮಾದರಿಗಳನ್ನು ನೀಡ ಬೇಕಾದರೆ, ಇದು ಅಪೇಕ್ಷಣೀಯವಾದ ಸಂಗತಿ, ಗೋಷ್ಠಿ, ವಿಮರ್ಶೆ, ಕಮ್ಮಟಗಳ, ಪ್ರಕಾಶನಗಳ ಸಂಯೋಜಕರು ಇದನ್ನು ಗಮನಿಸಿ, ವಿಷಯಗಳನ್ನು ಅಳವಡಿಸ ಬೇಕು. ಅಂತಹ ಒಂದು ಕೆಲಸ ಇಲ್ಲಿ ಆಗಿರುವುದು ಸಂತೋಷಕರ.

ಯಕ್ಷಗಾನದಲ್ಲಿ ಅಭಿವ್ಯಕ್ತಿ ಕಲ್ಪನೆ ಎಂಬುದನ್ನು ಯೋಚಿಸುವಾಗ, ಪ್ರದ ರ್ಶನಕ್ಕೆ ಆಧಾರವಾಗಿರುವ ಪ್ರಸಂಗಗಳ ದೃಷ್ಟಿಯಿಂದ ನೋಡಬಹುದು. ರಂಗ ಸ್ಥಳದ ಮಾತು, ನೃತ್ಯ, ವೇಷಗಳ ದೃಷ್ಟಿಯಿಂದಲೂ ನೋಡಬಹುದು. ಅಥವಾ ಎರಡನ್ನೂ ಹಿನ್ನೆಲೆಯಾಗಿಟ್ಟು, ಯಕ್ಷಗಾನವೆಂಬ ಕಲಾಪ್ರಕಾರದ ಒಟ್ಟು ಅಭಿವ್ಯಕ್ತಿ ವಿಧಾನ, ಅದು ಪ್ರತಿಪಾದಿಸುವ ಮೌಲ್ಯವ್ಯವಸ್ಥೆ, ಕಲೆಯ ರೂಪಾತ್ಮಕ ಮತ್ತು ತಾಂತ್ರಿಕ ವಿವರಗಳು ಒಟ್ಟಾಗಿ ಕೆಲಸ ಮಾಡುವ ವಿಧಾನ- ಈ ದೃಷ್ಟಿಯಿಂದಲೂ ನೋಡಬಹುದು. ಪ್ರಸಂಗ ಸಾಹಿತ್ಯ, ಮುಖ್ಯವಾಗಿ ಅದರ ಆಕರವಾಗಿರುವ ಕತೆ ಯಾ ಕಾವ್ಯವನ್ನು ಅನುಸರಿಸಿರುವ, ಸರಳ ರಚನೆ. ಅದು ಲಿಖಿತ ರೂಪದಲ್ಲಿ ನಮ್ಮ ಮುಂದಿದೆ. ಅದು ರಂಗಕೃತಿಯಾಗಿ ನಮ್ಮ ಮುಂದೆ ಬರುವ ರೂಪ, ರೀತಿಗಳು ನಮಗೆ ಹೆಚ್ಚು ಮುಖ್ಯವಾದುವುಗಳು.