ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸೈದ್ದಾಂತಿಕ ಖಚಿತತೆಯ ಆವಶ್ಯಕತೆ


ಸ್ತ್ರೀ ವೇಷದ ಒಂದು ಸುಧಾರಣೆ ಬಗ್ಗೆ ಶ್ರೀ ಅಮೃತ ಸೋಮೇಶ್ವರ ಅವರು ಕೆಲವು ಪ್ರಯೋಗಗಳನ್ನು ಮಾಡಿದ್ದಾರೆ. ಇವರ ಕಲ್ಪನೆಯಂತೆ ರಚಿತವಾದ ಸ್ತ್ರೀ ವೇಷದ ಶಿರೋಭೂಷಣಗಳಲ್ಲಿ ಪುರುಷ ಪಾತ್ರಗಳ ಶಿರೋಭೂಷಣಗಳಿಗೆ ಸಂವಾದಿಯಾದ ವೈವಿಧ್ಯವಿದೆ. ಕೋಲು ಕಿರೀಟ, ಪಗಡಿ, ತಟ್ಟಿ ಕಿರೀಟ-ಈ ಮೂರನ್ನು ಹೋಲುವ, ಮುಡಿಗೆ ಸಿಕ್ಕಿಸುವ ರೀತಿಯ ಶಿರೋಭೂಷಣಗಳಿವು. ಕಿರೀಟದ ವೇಷಕ್ಕೆ ಸಂಬಂಧಿಸಿದ ಸ್ತ್ರೀ ಪಾತ್ರಕ್ಕೆ ಅಂತಹದೇ ಶಿರೋಭೂಷಣ, ಬಣ್ಣದ ವೇಷದ ಸಂಬಂಧದಲ್ಲಿ (ಉದಾ: ರಾವಣನ ಹೆಂಡತಿ ಮಂಡೋದರಿಗೆ) ಚಿಕ್ಕ ಆಕಾರದ ತಟ್ಟಿಯಂತಹ ಕಿರಣ-ಹೀಗೆ, ಈ ಯೋಜನೆಯಿದೆ. ಈ ಯೋಜನೆ ತುಸುಮಟ್ಟಿಗೆ ಬಳಕೆಯಲ್ಲಿ ಬಂದಿದೆ.

ಇನ್ನೊಂದು ನೆಲೆಯಲ್ಲಿ ಇಂತಹ ಒಂದು ಪ್ರಮುಖ ಪ್ರಯತ್ನ ಸಾಗಿದೆ. ತೆಂಕುತಿಟ್ಟಿನ ಹಳೆಯ ಮಾಹಿತಿಗಳನ್ನು ಆಧರಿಸಿ, ಸ್ತ್ರೀ ವೇಷವನ್ನು ಪುನಾರೂಪಿಸುವ ಯತ್ನವಿದು. ಶ್ರೀ ಮುಳಿಯ ಮಹಾಬಲ ಭಟ್ಟರು ನಡೆಸಿದ, ಸ್ತ್ರೀ ವೇಷದ ಕಮ್ಮಟ ಗಳ ಮೂಲಕ, ಹಳೆಯ ವೇಷ ವಿಧಾನವು ಪುನರುಜ್ಜಿವನಗೊಳ್ಳುವ ಕೆಲಸಕ್ಕೆ ಚಾಲನೆ ದೊರಕಿದೆ. ಈಯೆಲ್ಲವನ್ನು ಇಲ್ಲಿ ಪ್ರಸ್ತಾವಿಸಲು ಕಾರಣವಿಷ್ಟೆ. ಇವೆಲ್ಲವೂ ಯಕ್ಷಗಾನ ಪರಂಪರೆಯನ್ನು ಗ್ರಹಿಸಿ, ಅದನ್ನು ವಿಸ್ತರಿಸುವ ಯತ್ನಗಳು, ಲುಪ್ತವಾಗಿರುವ ಅಂಶವನ್ನು, ತರ್ಕಶುದ್ಧವಾಗಿ ರೂಪಿಸುವ, ಸಮಗ್ರತೆಯತ್ತ ಮುಖಮಾಡಿರುವ ಕೆಲಸಗಳು. ಇವುಗಳೆಲ್ಲ ಮರು ವಿಮರ್ಶೆ, ಪರಿಶೀಲನೆಗೆ ಒಳಗಾಗಿ ಸ್ತ್ರೀ ವೇಷದ ಮಾದರಿ ಸ್ಥಿರೀಕರಣ ಹೊಂದಿದರೆ, ಕಲೆಯ ಅಂಗವೊಂದನ್ನು ಸುವ್ಯ ವಸ್ಥೆಗೊಳಪಡಿಸುವ ಕೆಲಸವಾಯಿತೆಂದು ಸಂತೋಷ ಪಡಬಹುದು.

ಸ್ತ್ರೀವೇಷಕ್ಕೆ ಸಂಬಂಧಿಸಿ ಸಾಂದರ್ಭಿಕವಾಗಿ ಒಂದು ಮಾತನ್ನಿಲ್ಲಿ ಹೇಳ ಬಹುದು. ಸಮಾಜದಲ್ಲಿ ಸ್ತ್ರೀ ಹೇಗೆ ಅಲಕ್ಷಿಸಲ್ಪಟ್ಟು, ಪುರುಷ ಪ್ರಧಾನ ಸಮಾಜ ದಲ್ಲಿ ಸೀಮಿತ ವ್ಯಕ್ತಿತ್ವವುಳ್ಳವಳಾದಳೋ, ಅಂತೆಯೇ ಸ್ತ್ರೀವೇಷವೂ ಅಲಕ್ಷಿಸಲ್ಪ ಟ್ಟಿತೆ? ಅನ್ಯಕಲೆಗಳಲ್ಲೂ ಇಂತಹದೇ ವಿದ್ಯಮಾನವಿದ್ದರೆ, ಈ ಪ್ರಶ್ನೆಯ ಸಮಾಜ ಶಾಸ್ತ್ರೀಯ ಪರಿಶೀಲನ ಪ್ರಯೋಜನಕರವಾದೀತು.

ಆಟದ ಸ್ತ್ರೀವೇಷಕ್ಕೆ ಹಿಂದೆ “ಆಟದ ಸೂಳೆ” ಎಂಬ ಹೆಸರಿತ್ತಂತೆ. ಇದನ್ನು ಕೆಲವರು ನಿಂದಾರ್ಥಕವೆಂದು ಭಾವಿಸಿರುವಂತಿದೆ. ಆದರೆ ಸೂಕ್ಷ್ಮವಾಗಿ ಪರಿ ಶೀಲಿಸಿದರೆ, ಅದು ಹಾಗಲ್ಲವೆಂದು ಕಾಣದಿರದು. ಸೂಳೆ ಎಂಬುದಕ್ಕೆ ಇಲ್ಲಿ ನರ್ತಕಿ ಯೆಂದೇ ತಾತ್ಪರ್ಯ, ಹಿಂದೆ ನಮ್ಮ ಪ್ರದೇಶದಲ್ಲಿದ್ದ ವೃತ್ತಿ ನರ್ತಕಿಯರ ಕುಣಿ ತಕ್ಕೆ ಸೂಳೆಯರ ಕುಣಿತವೆಂದೂ, ಅದರ ತಂಡಗಳಿಗೆ 'ಸೂಳೇರ ಮೇಳ'ವೆಂದೂ ಪ್ರಚಲಿತ ಪದಗಳು, ಅದರಲ್ಲಿ ನಿಂದಾರ್ಥಕ ದೃಷ್ಟಿಯಿರಲಿಲ್ಲ. ಈಗ ನಾವು ನೃತ್ಯ ತಂಡ, ಯಾ ಡಾನ್ಸ್ ಗ್ರೂಪ್ ಎಂದ ಹಾಗೆಯೇ ಆ ಶಬ್ದಗಳು. ಆಟದ ಸೂಳೆ