ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮ | ಪ್ರಸ್ತುತ

ಎಂದರೆ ಆಟದ ಸ್ತ್ರೀವೇಷ, ಗಂಡಸರ ಸ್ತ್ರೀಪಾತ್ರವೆಂಬ ಧ್ವನಿಯೂ ಇದೆ. ನಿಜ ಸೂಳೆ ಅಲ್ಲ, (ಸ್ತ್ರೀ) ಆಟದ ಸೂಳೆ. ನಮ್ಮ ಕರಾವಳಿಯ ಹಲವೆಡೆಗಳಲ್ಲಿ ಇರು ತಿದ್ದ, ಆ ನರ್ತಕಿಯರ ನರ್ತನಕ್ಕೂ, ಆಟದ ಸ್ತ್ರೀವೇಷದ ಕುಣಿತಕ್ಕೂ ತುಂಬ ಸಾಮ್ಯವಿತ್ತೆಂದೂ ಹೇಳುವರು. ಹಿಂದೆ ಸಭಾಲಕ್ಷಣವೆಂಬ ಪೂರ್ವರಂಗದಲ್ಲಿದ್ದ 'ದೌಲತ್‌ಜ್ಯಾದಾ' ಕುಣಿತವು, ಆ ನರ್ತಕಿಯರ ಮೇಳದ ನೇರ ಪ್ರಭಾವವಾಗಿತ್ತು. ಯಕ್ಷಗಾನದ ಕಥಾನಕದಲ್ಲಿ ಬರುವ ಸ್ತ್ರೀವೇಷವೂ ಕೂಡ, 'ಪೌರಾಣಿಕ ಪಾತ್ರ'ದ ಬದಲು, ಸಮಕಾಲೀನ ಸ್ತ್ರೀಯದ್ದೆ ಕಿಂಚಿತ್ ಅಲಂಕೃತರೂಪವಾಗಿ ಬರಲು, ಇಂತಹ ಪ್ರಭಾವವೂ ಕಾರಣವಿರಬಹುದು. ಇದಕ್ಕೆಲ್ಲ ಸೈದ್ಧಾಂತಿಕತೆಯ ಗೊಂದಲವೇ ಕಾರಣ.

ಸದ್ಯದ ನಮ್ಮ ತೆಂಕುತಿಟ್ಟಿನ ರಂಗಸ್ಥಳದಲ್ಲಿ ಈ ಗೊಂದಲದ ಇನ್ನೊಂದು ರೂಪವನ್ನು ಕಾಣಬಹುದು. ಪುರುಷ ಪಾತ್ರಗಳು ಈಗ, ವಿಶೇಷತಃ ತುಳು ಆಟ ಗಳಲ್ಲಿ, ವಾಸ್ತವಿಕಕ್ಕೆ ಹತ್ತಿರದ, ಅರ್ವಾಚೀನವಾದ ರೂಪಕ್ಕೆ ಬರುವಾಗ, ಸ್ತ್ರೀ ವೇಷಗಳು ಅವಾಸ್ತವ ಮತ್ತು ಕಲ್ಪನಾ ರೂಪಕ್ಕೆ ತಿರುಗಿವೆ. ಅಂದರೆ, ಪುರುಷ ಪಾತ್ರಗಳು ಶೈಲಿಯನ್ನು ಬಿಟ್ಟು ಹೋಗುವಾಗ ಸ್ತ್ರೀ ವೇಷವು ಶೈಲೀಕೃತವಾಯಿತು. ಮೊದಲು ಒಂದು ಬಗೆಯ ವಿಸಂಗತಿ ಇದ್ದರೆ, ಈಗ ಅದಕ್ಕೆ ವಿರುದ್ಧವಾದ ಇನ್ನೊಂದು ವಿಸಂಗತಿ ಇದು. ನಮ್ಮ ಕಲಾರಂಗದಲ್ಲಿ ಸೈದ್ದಾಂತಿಕ ನೆಲೆಗಟ್ಟು ಇಲ್ಲ ದಿರುವುದೇ ಇಂತಹ ಸಂಗತಿಗಳಿಗೆ ಕಾರಣ.
ಸ್ತ್ರೀ ವೇಷದ ಅಭಿವ್ಯಕ್ತಿಯ ಕುರಿತು ಯೋಚಿಸುವುದರ ಜತೆಗೆ, ಸ್ತ್ರೀ ಪಾತ್ರಾಭಿವ್ಯಕ್ತಿಯ ಬಗೆಗೂ ಯೋಚಿಸಬಹುದಾಗಿದೆ. ಹೆಣ್ಣಿನ ನೋವು ನಲಿವುಗಳ ಅಭಿವ್ಯಕ್ತಿಗೆ ಪ್ರಾಧಾನ್ಯವಿತ್ತು. ಸ್ತ್ರೀಪಾತ್ರ ಪ್ರಧಾನವಾದ ವಸ್ತುವನ್ನು ಪ್ರಯೋ ಗಿಸಬಹುದು. ದಿ| ಕೀರಿಕ್ಕಾಡು ವಿಷ್ಣು ಭಟ್ ಅವರು, “ಭೀಷ್ಮವಿಜಯ'ವನ್ನು ಆಧ ರಿಸಿ, ಅಂಬೆಯ ಪಾತ್ರಕ್ಕೆ ಒತ್ತುಕೊಟ್ಟು, “ಸಾಹಸಾಂಬಾ” ಎಂಬ ರಂಗಕೃತಿಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇತ್ತೀಚೆಗೆ ಬಂದ “ತುಳುನಾಡ ಸಿರಿ”, “ಸಿರಿಗಿಂಡೆ”, “ಬಾಲೆನಾಗಿ” ಮೊದಲಾದ ಪ್ರಸಂಗಗಳು ಸ್ತ್ರೀಪ್ರಧಾನ ವಸ್ತುವಿನ ದೃಷ್ಟಿಯಿಂದ ಗಮನಾರ್ಹವಾಗಿವೆ.
- ಹಿಂದೆಯೇ ಸೂಚಿಸಿದಂತೆ, ಯಕ್ಷಗಾನದಲ್ಲಿ ಇರುವುದು ಪೀಠಿಕೆವೇಷ, ಇದಿರುವೇಷ, ಬಣ್ಣದವೇಷ, ಮೂರನೇ ವೇಷ ಮುಂತಾದ ಸ್ಥಾ ನನಿರ್ದೇಶ ಹೊರತು ನಾಯಕ, ಖಳ, ಪೋಷಕ - ಮೊದಲಾದುವಲ್ಲ - (ಉ. ಕನ್ನಡ ಪದ್ಧತಿಯಲ್ಲಿ ಈ ಸ್ಥಾನವರ್ಗೀಕರಣ ಇದ್ದಂತೆ ಕಂಡು ಬರುವುದಿಲ್ಲ. ಕಾರಣವೇನೆಂಬುದು ಪರಿಶೀಲ ನಾರ್ಹ), ಪೀಠಿಕೆವೇಷ (ಪುರುಷವೇಷ) ಮತ್ತು ಇದಿರು (ಎರಡನೇ) ವೇಷಗಳಲ್ಲಿ, ಪೀಠಿಕೆವೇಷ (ಇಂದ್ರ, ರಾಮ, ಅರ್ಜುನ)ಗಳಲ್ಲಿ ಮುಖವರ್ಣಿಕೆ ಸೌಮ್ಯ, ಮಾತು